ಕೇತನ್ ಸಿಯಾಗೆ ನೀಡಿದ್ದ 1 ಕೋಟಿ ಎಲ್ಲಿ ಹೋಯ್ತು? ಪಾಸ್ಪೋರ್ಟ್ ಕದ್ದ ಸತ್ಯ ಬಿಚ್ಚಿಟ್ಟ ಡ್ರೈವರ್

Published : Jun 29, 2026, 01:10 PM IST
Ketan Case

ಸಾರಾಂಶ

ಕೇತನ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಬಗ್ಗೆ ಮತ್ತಷ್ಟು ವಿಷ್ಯ ಹೊರಗೆ ಬಿದ್ದಿದೆ. ಸಿಯಾ ಹಾಗೂ ಚೇತನ್‌ ಎಲ್ಲಿ ಸ್ಕೆಚ್‌ ರೂಪಿಸಿದ್ದರು, ಕೇತನ್‌ ಕೊಟ್ಟ ಹಣ ಏನಾಯ್ತು ಎಂಬ ಮಾಹಿತಿ ಇಲ್ಲಿದೆ

ಮಹಾರಾಷ್ಟ್ರದಲ್ಲಿ ನಡೆದ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆ ಮುಂದುವರೆದಿದೆ. ದಿನಕ್ಕೊಂದು ವಿಷ್ಯ ತನಿಖೆಯಿಂದ ಬಹಿರಂಗವಾಗ್ತಿದೆ. ಪೊಲೀಸರು ಸಿಯಾ ಮತ್ತು ಚೇತನ್ ಬಗ್ಗೆ ಮತ್ತಷ್ಟ ವಿಷ್ಯ ಕಲೆ ಹಾಕಿದ್ದಾರೆ.

ಕೇತನ್‌ ತಳ್ಳಿದ್ದು ಯಾರು?

ಕೇತನ್ ಅವರನ್ನು ತಳ್ಳಿದ್ದು ಸಿಯಾ ಅಲ್ಲ, ಚೇತನ್ ಎಂಬುದು ಗೊತ್ತಾಗಿದೆ. ಚೇತನ್ ಹಿಂದಿನಿಂದ ಬಂದು ಕೇತನ್ ಅವರನ್ನು ತಳ್ಳಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೇತನ್ ಅವರನ್ನು ಕೆಳಗೆ ತಳ್ಳುವಾಗ ಸಿಯಾ ಕುಳಿತಿದ್ದಳಂತೆ. ಶೂ ಲೇಸ್ ಕಟ್ಟಿಕೊಳ್ಳುವ ನೆಪದಲ್ಲಿ ಸಿಯಾ ಕೆಳಗೆ ಕುಳಿತಿದ್ದಾಗ, ಚೇತನ್, ಕೇತನ್ ಅವರನ್ನು ತಳ್ಳಿದ್ದಾನೆ. ಬ್ಯಾಲೆನ್ಸ್ ತಪ್ಪಿದ ಕೇತನ್ 400 ಅಡಿ ಆಳದ ಕಂದಕಕ್ಕೆ ಬಿದ್ದಿದ್ದಾನೆ. ಕೇತನ್ ಬೀಳುವಾಗ ತನ್ನನ್ನು ಹಿಡಿದುಕೊಳ್ಳದಿರಲಿ ಅಂತ ಸಿಯಾ ಪ್ಲಾನ್ ಮಾಡಿ ಕೆಳಗೆ ಕುಳಿತಿದ್ದಳಂತೆ.

ಕಿಸ್​ ಕೊಡುತ್ತಲೇ ಹೋಟೆಲ್​ ರೂಮೊಳಗೆ ಹೋದಳು: ಬರುವಾಗ ಸೂಟ್​ಕೇಸ್​​ ಜೊತೆ ಒಬ್ಬಳೇ ಬಂದಳು- ಆಗಿದ್ದೇನು

ಉದಯಪುರದಲ್ಲಿ ಸಿದ್ಧವಾಗಿತ್ತು ಪ್ಲಾನ್ 

ಪೊಲೀಸ್ ತನಿಖೆಯ ಪ್ರಕಾರ, ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೊದಲು ಸಿಯಾ ಮತ್ತು ಚೇತನ್ ಉದಯಪುರಕ್ಕೆ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿಯೇ ಅವರು ಪಿತೂರಿ ನಡೆಸಿದ್ದರು. ಸಿಯಾಗೆ ಕೇತನ್ ಮದುವೆಯಾಗಲು ಇಷ್ಟವಿರಲಿಲ್ಲ. ತನ್ನ ಬ್ಯುಸಿನೆಸ್ ಶುರು ಮಾಡಲು ಇನ್ನೂ ಮೂರು ವರ್ಷ ಬೇಕಾಗ್ಬಹುದು ಅಂತ ಚೇತನ್ ಹೇಳಿದ್ದ. ಅದಕ್ಕೆ ಸಿಯಾ ಒಪ್ಪಿದ್ದಳು.

ಒಂದು ಕೋಟಿ ಹಣ ಎಲ್ಲಿ ಹೋಯ್ತು? 

ಸಿಯಾಳನ್ನು ಅಪಾರವಾಗಿ ಪ್ರೀತಿ ಮಾಡ್ತಿದ್ದ ಕೇತನ್ ಯಾವುದಕ್ಕೂ ಇಲ್ಲ ಎನ್ನುತ್ತಿರಲಿಲ್ಲ. ಸಿಯಾ, ಶಾಪಿಂಗ್ ಗಾಗಿ ಕೇತನ್ ಬಳಿ ಒಂದು ಕೋಟಿ ರೂಪಾಯಿ ಕೇಳಿದ್ದಾಳೆ. ಹಿಂದುಮುಂದು ನೋಡದೆ ಕೇತನ್ ಹಣ ನೀಡಿದ್ದಾನೆ. ಸಿಯಾ ಈ ಹಣವನ್ನು, ಬ್ಯುಸಿನೆಸ್ ನಡೆಸಲು ಚೇತನ್ ಗೆ ನೀಡಿದ್ದಾಳೆ ಎನ್ನಲಾಗಿದೆ.

ಇಬ್ಬರು ಶಾಲಾ ಬಾಲಕರ ಜೊತೆ ಬಾಲಕಿ ಪರಾರಿ: ಕಾಡಿನಲ್ಲಿ ಇವರು ಮಾಡಿದ್ದೇನು? ಬೆಚ್ಚಿಬೀಳೋ ಸ್ಟೋರಿ ಇದು

ಕಾರ್ ಡ್ರೈವರ್ ಹೇಳಿದ ಸತ್ಯ ಏನು? 

ಕೇತನ್ ಹಾಗೂ ಸಿಯಾ ಬಾಲಿಗೆ ಹೋಗುವ ಪ್ಲಾನ್ ಮಾಡಿದ್ದರು. ಆದ್ರೆ ಕೇತನ್ ಜೊತೆ ಬಾಲಿಗೆ ಹೋಗಲು ಸಿಯಾಗೆ ಇಷ್ಟವಿರಲಿಲ್ಲ. ಸಾಹಿಲ್ ಗೋಯಲ್, ಒತ್ತಾಯ ಮಾಡಿ ಸಿಯಾಳನ್ನು ಕಾರಿಗೆ ಹತ್ತಿಸಿದ್ದ. ಟೀ ಬ್ರೇಕ್ ಅಂತ ಎಲ್ಲರೂ ಕಾರಿನಿಂದ ಇಳಿದಾಗ ಕಾರಿನ ಬಳಿ ಬಂದಿದ್ದ ಸಿಯಾ, ಪಾಸ್ ಪೋರ್ಟ್ ಕದ್ದಿದ್ದಳು. ಏರ್ ಪೋರ್ಟ್ ತಲುಪಿದ ಮೇಲೆ ಕೇತನ್ ಗೆ ಪಾಸ್ಪೋರ್ಟ್ ಸಿಕ್ಕಿರಲಿಲ್ಲ. ಕಾರ್ ಡ್ರೈವರ್ ಗೆ ಕಾರ್ ಚೆಕ್ ಮಾಡುವಂತೆ ಹೇಳಲಾಗಿತ್ತು. ಆದ್ರೆ ಕಾರ್ ನಲ್ಲಿಯೂ ಪಾಸ್ ಪೋರ್ಟ್ ಇರಲಿಲ್ಲ. ಕೇತನ್ ಹತ್ಯೆ ನಂತ್ರ ಕಾರ್ ಡ್ರೈವರ್ ಮಾಧ್ಯಮದ ಬಳಿ ಈ ವಿಷ್ಯ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಿಸ್​ ಕೊಡುತ್ತಲೇ ಹೋಟೆಲ್​ ರೂಮೊಳಗೆ ಹೋದಳು: ಬರುವಾಗ ಸೂಟ್​ಕೇಸ್​​ ಜೊತೆ ಒಬ್ಬಳೇ ಬಂದಳು- ಆಗಿದ್ದೇನು
ವೇಷ ಬದಲಿಸಿ ಬಂದಿದ್ದ ಪ್ರಿಯಕರ, ಕೊಲೆ ನಂತರ ಟೀ ಕುಡಿದು ರಿಲ್ಯಾಕ್ಸ್! ಆರೋಪಿಗಳ 'ಗೂಗಲ್ ಪ್ಲಾನ್' ಕಂಡು ಪೊಲೀಸರೇ ಶಾಕ್