ವಿಶೇಷ ಚೇತನ ಮಹಿಳೆ ಮೇಲೆ NGO ಸದಸ್ಯರಿಂದ ಅತ್ಯಾಚಾರ, ಒಂದು ವರ್ಷದ ಬಳಿಕ ಪ್ರಕರಣ ಬೆಳಕಿಗೆ!

By Suvarna News  |  First Published Mar 19, 2023, 8:33 PM IST

NGO ದಲ್ಲಿ ಕಾರ್ಯನಿರ್ವಹಿಸುವ ಸದಸ್ಯರು, ಸಿಬ್ಬಂದಿಗಳು, ವೇತನ, ಪ್ರತಿಷ್ಠೆಗಿಂತ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಇದರಲ್ಲೆ ಸಂತೃಪ್ತಿ ಕಾಣುತ್ತಾರೆ. ಆದರೆ NGOದಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಸದಸ್ಯರು, ಅಂಧ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.


ಗುಜರಾತ್(ಮಾ.19): ವಿಶೇಷತ ಚೇತನರ ಹೆಸರಿನಲ್ಲಿ ದೇಶದಲ್ಲಿ ಹಲವು ಸರ್ಕಾರೇತರ ಸಾಮಾಜಿಕ ಕಳಕಳಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಸಾಮಾಜಿಕ ಕಳಕಳಿ, ಮಾನವೀಯತೆ, ಸಮಾಜದ ಒಳಿತಿಗಾಗಿ ಕೆಲಸ ಮಾಡುವ ಧ್ಯೇಯ ಹೊಂದಿರುತ್ತಾರೆ. ಆದರೆ NGO ಕಾರ್ಯಕ್ಕೆ  ಮಸಿ ಬಳಿಯುವ ಕೆಲಸವನ್ನು ಇಬ್ಬರು ಸದಸ್ಯರು ಮಾಡಿದ್ದಾರೆ. ಅಂಧ ಪತಿ ಹಾಗೂ ಪತ್ನಿಗೆ ನೆರವು ನೀಡುವ ನೆಪದಲ್ಲಿ ಮನೆಗೆ ತೆರಳಿ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಡೆದಿರುವುದು ಕಳೆದ ವರ್ಷ ಅಂದರೆ 2022ರಲ್ಲಿ. ಬೆಳಕಿಗೆ ಬಂದಿರುವುದು 2023ರ ಮಾರ್ಚ್‌ನಲ್ಲಿ.

ವಲ್ಸದ್ ಜಿಲ್ಲೆ ಸೋಲ್ಸುಂಬೆ ಗ್ರಾಮದಲ್ಲಿ ಸರ್ಕಾರೇತರ ಸಾಮಾಜಿಕ ಕಳಕಳಿಯ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.ಈ ಸಂಸ್ಥೆಯಿಂದ ಇದೇ ಪತಿ ಹಾಗೂ ಪತ್ನಿ ಹಲವು ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಅಂಧ ಪತ್ನಿ ಹಾಗೂ ಪತಿಯ ವಾಸವಿರುವ ಮನೆಯ ಫ್ಯಾನ್ ಕೆಟ್ಟು ಹೋಗಿದೆ. ಹೀಗಾಗಿ ಇದೇ NGOಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

Tap to resize

Latest Videos

NGOದಿಂದ ಇಬ್ಬರು ಸದಸ್ಯರಾದ 40 ವರ್ಷದ ಖಾನ ಬದಾರ್ಕಾ ಹಾಗೂ 35 ವರ್ಷದ ದಿಲೀಪ್ ದಾಕ್ಸಾನಿ ಆಗಮಿಸಿದ್ದಾರೆ. ಬಳಿಕ ದಾಕ್ಸಾನಿ ಪತಿಯನ್ನು ಯಾವುದೋ ನೆಪದಲ್ಲಿ ಹೊರಗೆ ಕರೆದುಕೊಂಡು ಹೋಗಿದ್ದಾರೆ. ಇದೇ ವೇಳೆ ಫ್ಯಾನ್ ಸರಿಮಾಡುವ ನೆಪದಲ್ಲಿ ಖಾನಾ ಬದರ್ಕಾ ಅತ್ಯಾಚಾರ ಎಸಗಿದ್ದಾನೆ. ಇಷ್ಟೇ ಅಲ್ಲ ಈ ವಿಚಾರ ಬಾಯ್ಬಿಟ್ಟರೆ, NGO ಮೂಲಕ ಪತಿ ಹಾಗೂ ಪತ್ನಿ ಇಬ್ಬರು ಬೇರ್ಪಡಿಸಿ ಹೊರದಬ್ಬುವುದಾಗಿ ಬೆದರಿಸಿದ್ದಾನೆ.

ಹೀಗಾಗಿ ಕಳೆದ ಒಂದು ವರ್ಷದಿಂದ ಈ ವಿಚಾರ ಬಾಯ್ಬಿಡದೆ ಅತ್ತ ನುಂಗಲು ಆದರೆ ದಿನ ದೂಡಿದ್ದಾರೆ. ಪ್ರತಿ ದಿನ ಇದೇ ವಿಚಾರದಲ್ಲಿ ಕೊರಗುತ್ತಿದ್ದ ಪತ್ನಿ ಇದೀಗ ಧೈರ್ಯ ಮಾಡಿ ನಡೆದ ವಿಚಾರವನ್ನು ಪತಿಯ ಬಳಿ ಹೇಳಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಆರೋಪಿಗಳು ಅಂಧರಿಗೆ ಆಹಾರ, ವಸತಿ, ಉದ್ಯೋಗ ಕೊಡಿಸುವ NGOದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ NGO ಗೆ ಪತಿ ಹಾಗೂ ಪತ್ನಿ ಇಬ್ಬರು ಹಲವು ಭಾರಿ ಭೇಟಿ ನೀಡಿದ್ದಾರೆ. ಆರೋಗ್ಯ ಸಮಸ್ಯೆ ಸೇರಿದಂತೆ ಹಲವು ಬಾರಿ ಇದೇ NGOಗೆ ಕರೆ ಮಾಡಿ ಸೌಲಭ್ಯ ಪಡೆದುಕೊಂಡಿದ್ದಾರೆ. ಆದರೆ NGOದಲ್ಲಿನ ಸದಸ್ಯರಿಬ್ಬರು ಕೆಲಸದಿಂದ ಇದೀಗ ನಿಜವಾದ ಕಳಕಳಿಯಿಂದ ಸೇವೆ ಸಲ್ಲಿಸುವ ಸಿಬ್ಬಂದಿಗಳಿಗೂ ಕೆಟ್ಟ ಹೆಸರು ಬಂದಿದೆ.

click me!