ಹೊಸಪೇಟೆ: ಕುಡಿದ ಮತ್ತಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ, ಮನಬಂದಂತೆ ಒದ್ದು ಸ್ನೇಹಿತನ ಕೊಲೆ..!

ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು ನಡು ರಸ್ತೆಯಲ್ಲಿ ಸ್ನೇಹಿತರು ಪರಸ್ಪರ ಬಡೆದಾಡಿಕೊಂಡಿದ್ದರು. ಕೈಯಿಂದ ತೆಲೆಗೆ ಜೋರಾಗಿ ಹೊಡೆದ ಪರಿಣಾಮ ಶಾಂತಕುಮಾರ ನೆಲಕ್ಕೆ ಬಿದ್ದಿದ್ದ, ನೆಲಕ್ಕೆ ಬೀಳುತ್ತಿದ್ದಂತೆ ಮನ ಬಂದಂತೆ ಕಾಲಿಂದ ಒದ್ದು ಹತ್ಯೆಗೈಯಲಾಗಿದೆ. 


ವಿಜಯನಗರ(ಸೆ.25): ಕುಡಿದ ಮತ್ತಲ್ಲಿ ಇಬ್ಬರ ಸ್ನೇಹಿತರ ಮಧ್ಯೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಜಿಲ್ಲೆಯ ಹೊಸಪೇಟೆ ನಗರದ ಸಿದ್ದಲಿಂಗಪ್ಪ ಕ್ರಾಸ ಬಳಿ ನಡೆದಿದೆ. ಶಾಂತಕುಮಾರ (25) ಕೊಲೆಯಾದ ದುರ್ದೈವಿ ಯುವಕ. ಹುಲಿಗೇಶ (23) ಕೊಲೆ ಮಾಡಿದ ಆರೋಪಿ. 

ನಶೆಯಲ್ಲಿ ಶಾಂತಕುಮಾರ ಹಾಗೂ ಹುಲಿಗೇಶನ ಮಧ್ಯೆ ಮಾತಿಗೆ ಮಾತು ಬೆಳೆದು ಕೈ-ಕೈ ಮಿಸಾಯಿಸಿದ್ದರು. ಕೈಯಿಂದ, ಕಾಲಿಂದ ಒದ್ದು ಸ್ನೇಹಿತ ಶಾಂತಕುಮಾರನನ್ನ ಹುಲಿಗೇಶ ಕೊಲೆ ಮಾಡಿದ್ದಾರೆ.  ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು ನಡು ರಸ್ತೆಯಲ್ಲಿ ಸ್ನೇಹಿತರು ಪರಸ್ಪರ ಬಡೆದಾಡಿಕೊಂಡಿದ್ದರು. ಕೈಯಿಂದ ತೆಲೆಗೆ ಜೋರಾಗಿ ಹೊಡೆದ ಪರಿಣಾಮ ಶಾಂತಕುಮಾರ ನೆಲಕ್ಕೆ ಬಿದ್ದಿದ್ದ, ನೆಲಕ್ಕೆ ಬೀಳುತ್ತಿದ್ದಂತೆ ಮನ ಬಂದಂತೆ ಕಾಲಿಂದ ಒದ್ದು ಹತ್ಯೆಗೈಯಲಾಗಿದೆ. 

Latest Videos

ಬೆಂಗಳೂರು: ತನ್ನ ಬಳಿ ಬುಲೆಟ್‌ ಇಲ್ಲದ್ದಕ್ಕೆ ಮೂರು ಬೈಕ್‌ಗೆ ಬೆಂಕಿ ಇಟ್ಟ ಭೂಪ..!

ಪ್ರಜ್ಞೆಯಿಲ್ಲದೆ ನೆಲಕ್ಕೆ ಬಿದ್ದಿದ್ದ ಶಾಂತಕುಮಾರನನ್ನ ಸ್ಥಳೀಯರು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಅಲ್ಲಿಂದ ಕೊಪ್ಪಳ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಯುವಕ ಮೃತಪಟ್ಟಿದ್ದಾನೆ. 
ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಹುಲಗೇಶನನ್ನ ಪೋಲಿಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಹೊಸಪೇಟೆ ಶಹರ್‌ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!