ಹೊತ್ತು, ಹೆತ್ತ ಅಮ್ಮನನ್ನೇ ಪಾಪಿ ಬಿಡಲಿಲ್ಲ. ಕಬ್ಬಿನ ಗದ್ದೆಯಲ್ಲಿ ಅತ್ಯಾಚಾರವೆಸಗಿ ಧಮಕಿ ಹಾಕಿದ್ದ ಕ್ರೂರಿಗೆ ಕೋರ್ಟ್ ತಕ್ಕ ಶಿಕ್ಷೆ ನೀಡಿದೆ. ತಾಯಿ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಇಡೀ ಮನುಕುಲವೇ ತಲೆ ತಗ್ಗಿಸುವ ಘಟನೆ ಬೆಳಕಿಗೆ ಬಂದಿದೆ. ಹೆತ್ತ ಅಮ್ಮನ ಮೇಲೆ ಮಗ ಪೈಶಾಚಿಕ ಕೃತ್ಯ ಎಸಗಿದ್ದಾನೆ. 60 ವರ್ಷದ ತಾಯಿ ಮೇಲೆ ಮಗ ಅತ್ಯಾಚಾರ (rape) ವೆಸಗಿದ್ದು, ಇಡೀ ದೇಶ ಬೆಚ್ಚಿ ಬಿದ್ದಿದೆ. ಘಟನೆ ಉತ್ತರ ಪ್ರದೇಶ (Uttar Pradesh)ದ ಬುಲಂದ್‌ಶಹರ್‌ನಲ್ಲಿ ನಡೆದಿದ್ದು, ಪಾಪಿಗೆ ಜೀವಾವಧಿ ಶಿಕ್ಷೆ (Life imprisonment) ಯಾಗಿದೆ.
ತನ್ನ ಮಗನೇ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಕೋರ್ಟ್ (Court) ಮುಂದೆ ತಾಯಿ ಹೇಳಿದ ಪ್ರಕರಣ ಇದೇ ಮೊದಲು. ಕೊನೆಗೂ ತಾಯಿಯ ಹೋರಾಟಕ್ಕೆ ಜಯ ಸಿಕ್ಕಿದೆ. 20 ತಿಂಗಳಲ್ಲೇ ವಿಚಾರಣೆ ಪೂರ್ಣಗೊಂಡಿದ್ದು, ಆರೋಪಿಗೆ ಜೀವಾವಧಿ ಶಿಕ್ಷೆಯಾಗಿದೆ. ಕೋರ್ಟ್ 51 ಸಾವಿರ ರೂಪಾಯಿ ದಂಡ ವಿಧಿಸುವಂತೆ ಆದೇಶ ನೀಡಿದೆ. ಕೋರ್ಟ್ ಮುಂದೆ ಸಂತ್ರಸ್ತೆ ತನ್ನ ಮಗ ಮೃಗ ಎಂದು 20 ಬಾರಿ ಹೇಳಿದ್ದಳು. ಆತ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಕಣ್ಣೀರು ಹಾಕಿದ್ದಳು.
ಎಂದು ನಡೆದಿತ್ತು ಈ ಘಟನೆ ? : ಜನವರಿ 16, 2023 ರಂದು ಕೊತ್ವಾಲಿ ದೇಹತ್ ಗ್ರಾಮದಲ್ಲಿ ಈ ಹೇಯ ಕೃತ್ಯ ನಡೆದಿತ್ತು. ಇಲ್ಲಿನ 36 ವರ್ಷದ ಯುವಕ ತನ್ನ 60 ವರ್ಷದ ತಾಯಿಯ ಮೇಲೆ ಅತ್ಯಾಚಾರವೆಸಗಿದ್ದ. ಮೇವು ತರುವ ನೆಪದಲ್ಲಿ ತಾಯಿಯನ್ನು ಹೊಲಕ್ಕೆ ಕರೆದುಕೊಂಡು ಹೋಗಿದ್ದ ಪಾಪಿ, ಅತ್ಯಾಚಾರವೆಸಗಿದ್ದ. ಹೊಲದಲ್ಲಿ ಮೇವಿಲ್ಲವೆಂದು ಕಾಡಿನ ಮೂಲಕ ಕಬ್ಬಿನ ಗದ್ದೆಗೆ ಕರೆದೊಯ್ದು, ತಾಯಿ ಬಾಯಿಗೆ ಬಟ್ಟೆ ತುರುಕಿ, ಮಗ ಅತ್ಯಾಚಾರವೆಸಗಿದ್ದ. ನನಗೆ ಈಗ 60 ವರ್ಷ ವಯಸ್ಸು, ಈ ತಪ್ಪು ಮಾಡ್ಬೇಡ ಎಂದು ಎಷ್ಟೇ ಹೇಳಿದ್ರೂ ಮಗ ಕೇಳಲಿಲ್ಲ. ಕೃತ್ಯದ ನಂತ್ರ ಅರ್ಧಗಂಟೆ ನಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದೆ. ಎಚ್ಚರವಾಗ್ತಿದ್ದಂತೆ ನನಗೆ ಬೆದರಿಕೆ ಹಾಕಿದ್ದ ಮಗ, ಪ್ರತಿ ರಾತ್ರಿ ನನ್ನ ಜೊತೆ ಮಲಗುವಂತೆ ಹೇಳಿದ್ದ. ಅದಕ್ಕೆ ಒಪ್ಪಿ ಹೇಗೋ ಮನೆಗೆ ಬಂದ ನಾನು ವಿಷ್ಯವನ್ನು ಕಿರಿಯ ಮಗ ಮತ್ತು ಸೊಸೆಗೆ ಹೇಳಿದ್ದೆ ಎಂದು ಸಂತ್ರಸ್ತೆ ಕೋರ್ಟ್ ಮುಂದೆ ಹೇಳಿದ್ದಳು.
ತಾಯಿಯನ್ನೇ ಪತ್ನಿ ಮಾಡಿಕೊಳ್ಳಲು ಹೊರಟ ಮಗ : ತಾಯಿಯನ್ನೇ ಬಿಡದ ಮಗನ ವಿಚಾರ ಕುಟುಂಬಕ್ಕೆ ಗೊತ್ತಾಗ್ತಿದ್ದಂತೆ ಅವರು ದಂಗಾಗಿದ್ದರು. ಮಗನ ಜೊತೆ ಮಾತುಕತೆ ನಡೆಸಲು ಮುಂದಾಗಿದ್ದರು. ಆದ್ರೆ ಮಗನ ಆಸೆ ಮಾತ್ರ ಭಿನ್ನವಾಗಿತ್ತು. ತನ್ನ ತಪ್ಪನ್ನು ಒಪ್ಪಿಕೊಳ್ಳದ ವ್ಯಕ್ತಿ, ಅಮ್ಮನನ್ನೇ ಪತ್ನಿ ಮಾಡಿಕೊಳ್ಳುವ ಆಸೆ ವ್ಯಕ್ತಪಡಿಸಿದ್ದ. ತನ್ನ ಪತ್ನಿಯಂತೆ ಜೀವನ ಕಳೆಯಲು ತಾಯಿಗೆ ನಿರಂತರ ಬೆದರಿಕೆ ಹಾಕುತ್ತಿದ್ದ. ತಂದೆಯ ನಿಧನದ ನಂತ್ರ ಮಗ ಆ ಸ್ಥಾನವನ್ನು ತುಂಬಲು ಬಯಸಿದ್ದ. ಪತ್ನಿಯಾಗು ಎಂದು ತಾಯಿಯನ್ನು ಪೀಡಿಸುತ್ತಿದ್ದ. ಅದಕ್ಕೆ ಮಹಿಳೆ ಒಪ್ಪಿರಲಿಲ್ಲ. ಸಹೋದರನ ಮನವೊಲಿಸೋದು ಅಸಾಧ್ಯವಾದ್ಮೇಲೆ ಸಂತ್ರಸ್ತೆ ಕಿರಿಯ ಮಗ ಜನವರಿ 22ರಂದು ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಪೊಲೀಸರು ವಿಚಾರಣೆ ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಫಾಸ್ಟ್ ಟ್ರ್ಯಾಕ್ ಕೋರ್ಟ್2ರ ನ್ಯಾಯಾಧೀಶ ವರುಣ್ ಮೋಹಿತ್ ನಿಗಮ್, ಆರೋಪಿಯನ್ನು ತಪ್ಪಿತಸ್ಥನೆಂದು ಘೋಷಿಸಿ, ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ 51 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಸರ್ಕಾರಿ ವಕೀಲ ವಿಜಯ್ ಶರ್ಮಾ, ಕೋರ್ಟ್ ಆದೇಶವನ್ನು ಸ್ವಾಗತಿಸಿದ್ದಾರೆ. ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ನನ್ನ ವೃತ್ತಿ ಜೀವನದಲ್ಲಿ ಅಮ್ಮ, ತನ್ನ ಮಗನನ್ನೇ ರಾಕ್ಷಸ ಎಂದ ಯಾವುದೇ ಪ್ರಕರಣವನ್ನು ನಾನು ನೋಡಿರಲಿಲ್ಲ. ಕೋರ್ಟ್ 20 ತಿಂಗಳಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಿದೆ ಎಂದಿದ್ದಾರೆ.