ಧಾರವಾಡ: ರೀಲ್ಸ್ ಹುಚ್ಚಿಗೆ ಮಸಣದ ದಾರಿ ಹಿಡಿದ ಮಹಿಳೆ

Published : Jan 25, 2025, 12:13 PM IST
ಧಾರವಾಡ: ರೀಲ್ಸ್ ಹುಚ್ಚಿಗೆ ಮಸಣದ ದಾರಿ ಹಿಡಿದ ಮಹಿಳೆ

ಸಾರಾಂಶ

ಧಾರವಾಡ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತಳ ದೇಹವನ್ನುಮರಣೋತ್ತರಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ವಿಜಯ ನಾಯಕ್ ಮೇಲೆ ಉಪನಗರ ಠಾಣೆಗೆ ಪೋಷಕರು ದೂರು ನೀಡಲು ನಿರ್ಧರಿಸಿದ್ದಾರೆ. 

ಧಾರವಾಡ(ಜ.25):  ರೀಲ್ಸ್ ಹುಚ್ಚಿಗೆ ಮಹಿಳೆಯೊಬ್ಬಳು ತನ್ನ ಜೀವವನ್ನೇ ಕಳೆದುಕೊಂಡಿರುವ ದುರ್ಘಟನೆ ನಗರದಲ್ಲಿ ನಡೆದಿದೆ. ಮೂಲತಃ ಗದಗ ಜಿಲ್ಲೆಯ ಗಜೇಂದ್ರಗಡದ, ಇಲ್ಲಿಯ ಶ್ರೀನಗರದ ನಿವಾಸಿ ಶ್ವೇತಾ ಗುದಗಾಪುರ (24) ಎಂ ಬುವರು ಮೊಬೈಲ್‌ನಲ್ಲಿ ರೀಲ್ಸ್ ಮಾಡುವ ಘೀಳಿಗೆ ಬಿದ್ದು ಪತಿಯಿಂದ ದೂರವಾಗಿ ಯುವಕನೋರ್ವನ ಸಂಪರ್ಕ ಸಾಧಿಸಿ ತನ್ನ ಜೀವವನ್ನು ಅಂತ್ಯಗೊಳಿಸಿದ್ದಾಳೆ. 

ಏನಿದು ರೀಲ್ಸ್ ಕಥೆ: 

ಐದು ವರ್ಷಗಳ ಹಿಂದೆ ಶ್ವೇತಾಳನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗದ ವಿಶ್ವನಾಥ ಎಂಬುವರೊಂದಿಗೆ ಮದುವೆ ಮಾಡಿ ಕೊಡಲಾಗಿತ್ತು. ವಿಶ್ವನಾಥ ಡಿಟಿಎಚ್ ಇನ್ ಸ್ಟಾಲೇಶನ್ ಕೆಲಸ ಮಾಡಿಕೊಂಡಿದ್ದನು. ಇಬ್ಬರೂ ಪರಸ್ಪರ ಪ್ರೀತಿಯಿಂದಲೇ ಇದ್ದರು. ಆದರೆ, ಶ್ವೇತಾಳಿಗೆ ರೀಲ್ಸ್ ಮಾಡುವ ಹವ್ಯಾಸ ಚಟವಾಗಿ ಬದಲಾಗಿತ್ತು. ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದ ವಿಜಯ ನಾಯ್ಕರ ಪದೇ ಪದೇ ಕಾಮೆಂಟ್ ಮಾಡಿದ್ದರಿಂದ ಪರಸ್ಪರ ಇಬ್ಬರಿಗೂ ಪರಿಚಯವಾಯಿತು. ಪರಿಚಯ ಬಳಿಕ ಪ್ರೇಮಕ್ಕೆ ತಿರುಗಿತು. ಕೊನೆಗೆ ಆತನೊಂದಿಗೆ ಸಂಪರ್ಕ ಸಾಧಿಸಿ, ಕಳೆದ ಒಂದೂವರೆ ವರ್ಷದ ಹಿಂದೆ ಶ್ವೇತಾ ಪತಿ ತೊರೆದು ಧಾರವಾಡಕ್ಕೆ ಬಂದು ಬಿಟ್ಟಳು. 

ಮಂಗಳೂರು: ಇನ್‌ಸ್ಟಾದಲ್ಲಿ ಬೇರೆಯವಳಿಗೆ ಲೈಕ್ ಒತ್ತಿದ್ದಕ್ಕೆ ಪ್ರೇಯಸಿ ಜಗಳ, ಪ್ರೇಮಿ ಆತ್ಮಹತ್ಯೆ

ವಿಜಯ ನಾಯ್ಕರ ಶ್ರೀನಗರದಲ್ಲಿ ಆಕೆಗೆ ಬಾಡಿಗೆ ಮನೆ ಸಹ ಮಾಡಿಕೊಟ್ಟಿದ್ದನು. ಇದೇ ವೇಳೆ ಆಕೆಯನ್ನು ಮದುವೆಯಾಗುವುದಾಗಿ ಹೇಳಿದ ವಿಜಯ, ಆಕೆಯಿಂದ ಪತಿಗೆ ವಿಚ್ಛೇದನಕ್ಕೆ ನೋಟಿಸ್ ಸಹ ಕೊಡಿಸುವ ಪ್ರಯತ್ನ ಮಾಡಿದ್ದನು. ಆದರೆ, ನ್ಯಾಯಾಲಯದಲ್ಲಿ ನಿರೀಕ್ಷೆಯಂತೆ ಇಬ್ಬರಿಗೂ ವಿಚ್ಚೇದನ ಸಿಗಲಿಲ್ಲ. ಪತಿ-ಪತ್ನಿ ಕೂಡಿ ಜೀವನ ಮಾಡಲು ಸೂಚಿಸಿತ್ತು. 

ಕಾಣೆಯಾದ ಶ್ವೇತಾ: 

ನ್ಯಾಯಾಲಯದ ಆದೇಶದಂತೆ ಕೆಲ ದಿನ ಪತಿ ಮನೆಯಲ್ಲಿದ್ದ ಶ್ವೇತಾ ಏಕಾಏಕಿ ಮನೆಯಿಂದ ಕಾಣೆಯಾದಾಗ ಎಲ್ಲೆಡೆ ಹುಡುಕಿದರೂ ಪತ್ತೆ ಆಗಿರಲಿಲ್ಲ. ಕೊನೆಗೆ ಧಾರವಾಡದಲ್ಲಿದ್ದಾಳೆ ಎಂಬ ಮಾಹಿತಿ ಅನ್ವಯ ಪೋಷಕರು ಹಾಗೂ ಪತಿ ಬಂದು ಕರೆದೊಯ್ಯಲು ಯತ್ನಿಸಿದರೆ ಆಕೆ ಒಪ್ಪಿಕೊಳ್ಳಲಿಲ್ಲ. ತಾನು ವಿಜಯನನ್ನು ಬಿಟ್ಟು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿಬಿಟ್ಟಿದ್ದಳು. ಇದರಿಂದಾಗಿ ನೊಂದ ಪೋಷಕರು ತಮ್ಮೂರಿಗೆ ಮರಳಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಗುರುವಾರ ರಾತ್ರಿ ಶ್ವೇತಾ ತಾನು ಬಾಡಿಗೆ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. 

ಬೆಂಗಳೂರು: ಹುಡುಗಿಯರ ಶೋಕಿಗೆ ಹಸುಗಳ ಕದ್ದ ಖತರ್ನಾಕ್ ಖದೀಮ ಸೋಮ ಸೆರೆ

ಈ ಕುರಿತು ಶ್ವೇತಾಳ ತಾಯಿ ಶಶಿಕಲಾ ಸಾವಂತ ಪ್ರತಿಕ್ರಿಯೆನೀಡಿ, ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಆರೋಪಿ ವಿಜಯ ನಾಯ್ಕರ ಕಾರಣ ಎಂದು ಆರೋಪಿಸಿದ್ದಾರೆ. 

ಇದೀಗ ಧಾರವಾಡ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತಳ ದೇಹವನ್ನುಮರಣೋತ್ತರಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ವಿಜಯ ನಾಯಕ್ ಮೇಲೆ ಉಪನಗರ ಠಾಣೆಗೆ ಪೋಷಕರು ದೂರು ನೀಡಲು ನಿರ್ಧರಿಸಿದ್ದಾರೆ. 
ಒಟ್ಟಿನಲ್ಲಿ ರೀಲ್ಸ್ ಚಟಕ್ಕೆ ಬಿದ್ದು ಇದ್ದ ಒಳ್ಳೆಯ ಸಂಸಾರವನ್ನು ಹಾಳು ಮಾಡಿಕೊಂಡಿದ್ದಲ್ಲದೇ ತಾನು ಕೂಡ ಇಹಲೋಕ ತ್ಯಜಿಸಿ ಹೋಗಿದ್ದು ಮಾತ್ರ ವಿಪರ್ಯಾಸದ ಸಂಗತಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!