ಗೃಹಿಣಿ ಅನುಮಾನಾಸ್ಪದ ಸಾವು; ತನಗಿಂತ ಚಿಕ್ಕವನ ಜತೆಗಿನ ಲವ್ವಿ-ಡವ್ವಿ ಮುಳುವಾಯ್ತಾ?

Published : Mar 01, 2022, 11:18 PM IST
ಗೃಹಿಣಿ ಅನುಮಾನಾಸ್ಪದ ಸಾವು; ತನಗಿಂತ ಚಿಕ್ಕವನ ಜತೆಗಿನ ಲವ್ವಿ-ಡವ್ವಿ ಮುಳುವಾಯ್ತಾ?

ಸಾರಾಂಶ

* ಗೃಹಿಣಿ ಅನುಮಾನಾಸ್ಪದ ಸಾವು * ಕೊಲೆ ಮಾಡಿಸಿತಾ ಅನೈತಿಕ ಸಂಬಂಧ..?  * ತನಗಿಂತ ಚಿಕ್ಕ ವಯಸ್ಸಿನವನ ಜತೆಗಿನ ಲವ್ವಿ-ಡವ್ವಿ ಮುಳುವಾಯ್ತಾ? 

ಬಳ್ಳಾರಿ, (ಮಾ.01): ನಗರದ ಹಂದ್ರಾಳ ಕಾಲೋನಿಯ ಡಿಸಿ ಕ್ಯಾಂಪ್‌ನ ಮನೆಯೊಂದರಲ್ಲಿ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಸುನೀತಾ(24) ಅನುಮಾನಸ್ಪದವಾಗಿ ಸಾವನಪ್ಪಿದ ಗೃಹಿಣಿ. ಕುತ್ತಿಗೆಗೆ ಹಗ್ಗ ಬಿಗಿದ ಸ್ಥಿತಿಯಲ್ಲಿ ಸುನೀತಾ ಶವ ಪತ್ತೆಯಾಗಿದೆ.

ಬಳ್ಳಾರಿಯ ಸುರೇಶ್​ ಆಂಧ್ರದ ಆಧೋನಿ ಮೂಲದ ಸುನೀತಾ 5 ವರ್ಷದ ಹಿಂದೆ ವಿವಾಹವಾಗಿದ್ದರು. ಮೃತ ಗೃಹಿಣಿ ಮೂರ್ತಿ ಎಂಬಾತರೊಡನೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಸುರೇಶ್ ಕುಟುಂಬಸ್ಥರು ಆರೋಪಿಸಿದ್ದಾರೆ.

Chikkamagaluru Crime: ಮಗಳ ಮೇಲೆ ಮಲ ತಂದೆಯಿಂದಲೇ ರೇಪ್‌: ವಿಕೃತಕಾಮಿ ಅರೆಸ್ಟ್‌

ಮೃತ ಸುನೀತಾ ಹಾಗೂ ಮೂರ್ತಿ ಆಂಧ್ರದ ಆಧೋನಿಯಲ್ಲಿ ಅಕ್ಕಪಕ್ಕದ ನಿವಾಸಿಗಳಾಗಿದ್ದರು. ತನಗಿಂತ ಮೂರು ವರ್ಷ ಚಿಕ್ಕ ವಯಸ್ಸಿನ ಮೂರ್ತಿಗೆ ತನ್ನನ್ನು ಗಂಡನಿಂದ, ದೂರ ಕರೆದುಕೊಂಡು ಹೋಗುವಂತೆ ಸುನೀತಾ ಕೇಳಿದ್ದಾಗಿ ಆರೋಪಿಸಲಾಗಿದೆ. ಹೀಗಾಗಿ ಸದ್ಯ ಮೂರ್ತಿಯೇ ಕೊಲೆ ಮಾಡಿರೋದಾಗಿ ಸುರೇಶ್​ ಕುಟಂಬದವರು ಶಂಕೆ ವ್ಯಕ್ತಪಡಿಸಿದ್ದು, ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೀತಿ ವಿರೋಧಿಸಿದ್ದಕ್ಕೆ ರೈಲಿಗೆ ತಲೆಕೊಟ್ಟ ಪ್ರೇಮಿಗಳು
ಬೆಂಗಳೂರು: ಪ್ರೀತಿಗೆ ಮನೆಯವರು ವಿರೋಧಿಸಿದರು ಎಂಬ ಕಾರಣಕ್ಕೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಆನೇಕಲ್​​ನ ಸಂಮದೂರು ಬಳಿ ನಡೆದಿದೆ.

ಮಣಿ ಮತ್ತು ಆನುಷಾ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಮಾರನಾಯಕನಹಳ್ಳಿ ಮಣಿ ಹಾಗೂ ಕೊತ್ತಗೊಂಡಪಲ್ಲಿಯ ಅನುಷಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.

ಥಾಣೆ: ಪಬ್​ಜಿ (PUBG) ಆಟದ ವಿಷಯಕ್ಕೆ ಜಗಳ ಉಂಟಾಗಿ, 22 ವರ್ಷದ ತಮ್ಮ ಸ್ನೇಹಿತನನ್ನು ಕೊಂದ ಆರೋಪದ ಮೇಲೆ ಮಹಾರಾಷ್ಟ್ರದ ಥಾಣೆಯ ವರ್ತಕ್ ನಗರದ ಪೊಲೀಸರು ಇಂದು 19 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಹಾಗೇ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚೀನಾ ಮೂಲದ ಅಪ್ಲಿಕೇಶನ್ ಆಗಿರುವ PUBG ಭಾರತದಲ್ಲಿ 2020ರ ಸೆಪ್ಟೆಂಬರ್​ನಿಂದ ನಿಷೇಧಿಸಲಾಗಿದೆ. ಆದರೆ, ಈ ನಾಲ್ವರು ಸ್ನೇಹಿತರು ನಿಷೇಧಿತ ಪಬ್​ಜಿ ಗೇಮ್​ನ ಯಾವ ಆವೃತ್ತಿಯನ್ನು ಆಡುತ್ತಿದ್ದರು ಎಂಬುದು ಖಚಿತವಾಗಿಲ್ಲ.

ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ವರ್ತಕ್ ನಗರದ ಲಿಟ್ಲ್ ಫ್ಲವರ್ ಸ್ಕೂಲ್ ಬಳಿ ಮೂವರು ತಮ್ಮ ಸ್ನೇಹಿತನನ್ನು ಹರಿತವಾದ ಆಯುಧದಿಂದ ಇರಿದು ಹತ್ಯೆ ಮಾಡಿದ್ದಾರೆ. ಕಳೆದೆರಡು ದಿನಗಳಿಂದ ಪ್ರತಿದಿನ ಶಾಲೆಯ ಬಳಿ ನಾಲ್ವರು ಸ್ನೇಹಿತರು ಮದ್ಯ ಸೇವಿಸುತ್ತಿದ್ದುದನ್ನು ನೋಡಿದ್ದಾಗಿ ಸ್ಥಳೀಯರು ಹೇಳಿದ್ದಾರೆ. ಅವರೆಲ್ಲರೂ ಒಟ್ಟಾಗಿ ಆನ್‌ಲೈನ್ ಆಟಗಳನ್ನು ಆಡುತ್ತಿದ್ದರು ಮತ್ತು ಜಗಳವಾಡುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮನೆಯಲ್ಲಿ ಪ್ರೀತಿ ವಿಚಾರಕ್ಕೆ ವಿರೋಧಿಸಿದ್ದಕ್ಕೆ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.

ವಿರೋಧದ ಬೆನ್ನಲ್ಲೇ ಇಬ್ಬರು ಪ್ರೇಮಿಗಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧವಾಗಿ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಂಡ್ತಿಯನ್ನ ಹೊಡೆದು ಕೊಂದ ಗಂಡ
ಮುಂಬೈ: ಮಹಾರಾಷ್ಟ್ರದ ಧಾರಾವಿಯಲ್ಲಿ 27 ವರ್ಷದ ಯುವಕನೊಬ್ಬ ತನ್ನ ಪತ್ನಿಯನ್ನು ಹೊಡೆದು ಕೊಂದಿದ್ದು (Murder), ಬಳಿಕ ಅದನ್ನು ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾನೆ. ತನ್ನ ಹೆಂಡತಿಯನ್ನು ಕೊಲೆ ಮಾಡಿದ ಆರೋಪಿಯನ್ನು ರಾಹುಲ್ ಜೈಸ್ವಾಲ್ ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ವರದಿಯ ಪ್ರಕಾರ, ಮರಣೋತ್ತರ ಪರೀಕ್ಷೆಯ ವರದಿಯಿಂದ ಆ ಮಹಿಳೆ ಕೊಲೆಯಾಗಿದ್ದಾಳೆ ಎಂಬುದು ದೃಢವಾಯಿತು. ಈ ಹಿನ್ನೆಲೆಯಲ್ಲಿ ಅನುಮಾನಗೊಂಡು ರಾಹುಲ್​ನನ್ನು ಬಂಧಿಸಿದ್ದಾರೆ.

ಕಳೆದ ವಾರ ಈ ಘಟನೆ ನಡೆದಿದ್ದು, ರೋಷನಿ (22) ಎಂಬ ಮಹಿಳೆಯ ತೀವ್ರವಾಗಿ ಗಾಯಗೊಂಡಿದ್ದರಿಂದ ಸಿಯಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ವೇಳೆ ಆಕೆ ಪ್ರಜ್ಞಾಹೀನಳಾಗಿದ್ದಳು. ಆರೋಪಿಯು ತನ್ನ ಹೆಂಡತಿ ಮಹಡಿಯಿಂದ ಬಿದ್ದು ಪ್ರಜ್ಞಾಹೀನಳಾಗಿದ್ದಾಳೆ ಎಂದು ವೈದ್ಯರಿಗೆ ತಿಳಿಸಿದ್ದ. ಆದರೆ, ಆಘಾತಕಾರಿ ಸಂಗತಿಯೆಂದರೆ, ಅದಾದ ಸ್ವಲ್ಪ ಸಮಯದ ನಂತರ ಸಂತ್ರಸ್ತೆ ಸಾವನ್ನಪ್ಪಿದ್ದಳು. ಈ ಕುರಿತು ಪೊಲೀಸ್ ತನಿಖೆಯ ಸಂದರ್ಭದಲ್ಲಿ ಆಕೆ ಆಕಸ್ಮಿಕವಾಗಿ ಸಾವನ್ನಪ್ಪಿಲ್ಲ, ಅದೊಂದು ಕೊಲೆ ಎಂದು ಸ್ಪಷ್ಟವಾಗಿತ್ತು.

ಆ ಮಹಿಳೆಯ ಮರಣೋತ್ತರ ಪರೀಕ್ಷೆಯಲ್ಲಿ ಆಕೆ ಆಂತರಿಕ ಗಾಯಗಳಿಂದಾಗಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ದಾಖಲಾಗಿತ್ತು. ಈ ಕುರಿತು ಪೊಲೀಸರು ವೈದ್ಯರನ್ನು ವಿಚಾರಿಸಿದಾಗ ಯಾರಾದರೂ ಆಕೆಗೆ ಥಳಿಸಿರಬಹುದು. ಅದೇ ಕಾರಣದಿಂದ ಗಾಯವಾಗಿ ಸಾವನ್ನಪ್ಪಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು. ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸಿ, ಮೃತ ಮಹಿಳೆಯ ಗಂಡನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು