* ಪತಿ ಮತ್ತು ಅತ್ತೆಯ ಕಿರುಕುಳಕ್ಕೆ ಬೇಸತ್ತು ಸೊಸೆ ಆತ್ಮಹತ್ಯೆ,
* ಅತ್ತೆ ಅನಿಷ್ಟ ಅಂದಿದ್ದಕ್ಕೆ ನೇಣಿಗೆ ಕೊರಳೊಡ್ಡಿದ್ದ ಸೊಸೆ
* ಬಾಡಿಗೆ ಮನೆಯಲ್ಲಿ ಹಾಲು ಉಕ್ಕಿಸಿದ ಕ್ಷಣದ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ
ಬೆಂಗಳೂರು, (ಜೂನ್.05): ಅತ್ತೆ ಹಾಗೂ ಪತಿಯ ಕಿರುಕುಳಕ್ಕೆ ಬೇಸತ್ತ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ನೆಲಮಂಗಲದ ವಿವರ್ಸ್ ಕಾಲನಿಯಲ್ಲಿ ನಡೆದಿದೆ.
ತುಮಕೂರಿನ ಕುಣಿಗಲ್ ಮೂಲದ ಪೂಜಾ (22) ಮೃತ ದುರ್ದೈವಿ. ಬಾಡಿಗೆ ಮನೆಯಲ್ಲಿ ಹಾಲು ಉಕ್ಕಿಸಿದ ಕೆಲವೇ ಕ್ಷಣಗಳಲ್ಲಿ ಪೂಜಾ ನೇಣಿಗೆ ಶರಣಾಗಿದ್ದಾಳೆ.
undefined
ಎರಡೂವರೆ ವರ್ಷದ ಹಿಂದೆ ಮಂಜುನಾಥ್ನೊಂದಿಗೆ ಪೂಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ದಿನ ಕಳೆದಂತೆ ಪತಿ ಮಂಜುನಾಥ್ ಮತ್ತು ಅತ್ತೆ ಶ್ಯಾಮಲಾರಿಂದ ಕಿರುಕುಳ ಶುರುವಾಗಿದೆ. ಇದರಿಂದ ಬೇಸತ್ತು ಪೂಜಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ಮಹಿಳೆ ಅನುಮಾನಾಸ್ಪದ ಸಾವು, ಕೊಲೆ ಶಂಕೆ
ಮದುವೆ ಬಳಿಕ ಮೊದಲ ಮಗು ಗರ್ಭಪಾತವಾಗಿತ್ತು. ಎರಡನೇ ಮಗು ಹುಟ್ಟಿದ 6 ತಿಂಗಳಲ್ಲೇ ಅದು ಮೃತಪಟ್ಟಿತು. ಇದೇ ನೆಪದಲ್ಲಿ ಪೂಜಾಳ ಅತ್ತೆ, ಆಕೆಯನ್ನು ಪಾಪದವಳು, ಅನಿಷ್ಟವೆಂದು ದಿನನಿತ್ಯ ನಿಂದಿಸುತ್ತಿದ್ದರು. ಇದರಿಂದ ಪೂಜಾ ಮಾನಸಿಕವಾಗಿ ಕುಗ್ಗಿದ್ದಳು ಎಂದು ತಿಳಿದುಬಂದಿದೆ.
ಈ ಬಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಮಂಜುನಾಥ್ ಮತ್ತು ಅತ್ತೆ ಶ್ಯಾಮಲಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾಡಿಯಾ ಸಾನ್ಸಿ ಗ್ಯಾಂಗ್
ಮದ್ವೆ ಮನೆಗೆ ಕಾಡಿಯಾ ಸಾನ್ಸಿ ಗ್ಯಾಂಗ್ ಎಂಟ್ರಿಕೊಡ್ತಿದೆ ಎಚ್ಚರ..ವರ-ವಧುವಿನ ರೂಂನ ಬಳಿಯಲ್ಲೇ ಓಡಾಡ್ತಾನೇ ಇರ್ತಾರೆ. ಜನ ಬೇರೆಡೆ ಕಾನ್ಸನ್ಟ್ರೇಷನ್ ಕೊಡ್ತಿದ್ದಂತೆ ಕೆಜಿ ಕೆಜಿ ಚಿನ್ನಾಭರಣ ಹೊತ್ತೊಯ್ತಾರೆ.
ಹೌದು..ಈ ಗ್ಯಾಂಗ್ ಹೆಸರೆ ಬಹಳ ವಿಚಿತ್ರವಾಗಿದೆ. ಮಧ್ಯಪ್ರದೇಶದ ಕಾಡಿಯಾ ಸಾನ್ಸಿ ಎಂಬ ಊರಿನಲ್ಲಿ ಚಿಕ್ಕ ವಯಸ್ಸಿನಿಂದಲೆ ಮಕ್ಕಳಿಗೆ ಕಳ್ಳತನದ ಬಗ್ಗೆ ಟ್ರೈನಿಂಗ್ ಕೊಡಲಾಗುತ್ತದೆ.
ಬಡ ಮಕ್ಕಳನ್ನು ಖರೀದಿಸಿ ಅವರಿಗೆ ನಿಪುಣತೆಯಿಂದ ಕಳ್ಳತನ ಮಾಡುವ ಬಗ್ಗೆ ತರಭೇತಿ ನೀಡಲಾಗುತ್ತದೆ. ಈ ಗ್ಯಾಂಗ್ ದೇಶದ ದೊಡ್ಡ ದೊಡ್ಡ ನಗರಗಳಲ್ಲಿ ಕಳ್ಳತನ ಮಾಡುತ್ತದೆ.
ಇಂತಹ ಚಾಲಾಕಿ ಗ್ಯಾಂಗ್ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತನ್ನ ಕೈಚಳಕ ತೋರಿಸಿದೆ. ಕಲ್ಯಾಣ ಮಂಟಪದಲ್ಲಿ ಕಳ್ಳತನ ಮಾಡಿದ್ದ ಇಬ್ಬರು ಐನಾತಿ ಕಾಡಿಯಾ ಸಾನ್ಸಿ ಗ್ಯಾಂಗ್ ನ್ನು ಕೆಂಗೇರಿ ಪೋಲಿಸರು ಬಂಧಿಸಿದ್ದಾರೆ.
ಕೆಂಗೇರಿ ಬಳಿಯ ಕಲ್ಯಾಣ ಮಂಟಪದಿಂದ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದರು . ಯಾವುದಕ್ಕೂ ಮದ್ವೆ ಮಾಡ್ಸೋ ವಧು-ವರರ ಕಡೆಯವರು ಎಚ್ಚರವಾಗಿರಿ.