
ಗುವಾಹಟಿ: ಕಳೆದ ತಿಂಗಳು ವಂಚನೆ ಪ್ರಕರಣದಲ್ಲಿ ಶಾಮೀಲಾಗಿದ್ದ ತನ್ನ ಭಾವಿ ಪತಿಯನ್ನೇ ಬಂಧಿಸಿ ಲೇಡಿ ಸಿಂಗಮ್ ಎಂದು ಫೇಮಸ್ ಆಗಿದ್ದ ಅಸ್ಸಾಂನ ಪೊಲೀಸ್ ಅಧಿಕಾರಿ ಜುನ್ಮೋನಿ ರಾಭಾಳನ್ನು ಈಗ ಅಸ್ಸಾಂ ಪೊಲೀಸರು ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಬಂಧಿಸಿದ್ದಾರೆ. ನಾಗಾಂವ್ ಜಿಲ್ಲೆಯ ಕಲಿಯಾಬೋರ್ ಪೊಲೀಸ್ ಠಾಣೆಯಲ್ಲಿ (Kaliabor police station) ಪ್ರಸ್ತುತ ಸಬ್ ಇನ್ಸ್‌ಪೆಕ್ಟರ್ (ಎಸ್‌ಐ) ಆಗಿ ಸೇವೆ ಸಲ್ಲಿಸುತ್ತಿರುವ ರಭಾ ಅವರನ್ನು ಸತತ ಎರಡು ದಿನಗಳ ವಿಚಾರಣೆಯ ನಂತರ ಬಂಧಿಸಲಾಗಿದೆ. ವಿಚಾರಣೆ ಬಳಿಕ ಬಂಧಿಸಲ್ಪಟ್ಟ ಆಕೆಯನ್ನು ಮಜುಲಿ ಜಿಲ್ಲೆಯ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜುನ್ಮೋನಿ ರಾಭಾ ವಿರುದ್ಧ ಇಬ್ಬರು ಗುತ್ತಿಗೆದಾರರು ದೂರು ನೀಡಿದ್ದರು. ಮಜುಲಿಯಲ್ಲಿ ಕರ್ತವ್ಯದಲ್ಲಿದ್ದಾಗ ರಭಾ ತನ್ನ ಭಾವಿ ಪತಿಯೊಂದಿಗೆ ಸೇರಿ ಹಣಕಾಸಿ ವ್ಯವಹಾರದಲ್ಲಿ ಭಾಗಿಯಾಗಿ ವಂಚಿಸಿದ್ದರು ಎಂದು ಗುತ್ತಿಗೆದಾರರು ಪೊಲೀಸರಿಗೆ ದೂರು ನೀಡಿದ್ದರು. ಒಎನ್‌ಜಿಸಿಯಲ್ಲಿ ಉದ್ಯೋಗ ನೀಡುವುದಾಗಿ ಮತ್ತು ಗುತ್ತಿಗೆ ನೀಡುವುದಾಗಿ ಭರವಸೆ ನೀಡಿ ಕೆಲವರಿಗೆ ವಂಚಿಸಿದ್ದಾರೆ ಎಂದು ತನ್ನ ಭಾವಿ ಪತಿ ಪೊಗಾಗ್ ವಿರುದ್ಧ ರಭಾ ಎಫ್‌ಐಆರ್ ದಾಖಲಿಸಿದ್ದರು. ಅಲ್ಲದೇ ನಂತರದಲ್ಲಿ ವಂಚನೆ ಆರೋಪದ ಮೇಲೆ ಆತನನ್ನು ಈಕೆಯೇ ಬಂಧಿಸಿದ್ದಳು. ಈ ವಿಚಾರ ರಾಷ್ಟ್ರಮಟ್ಟದಲ್ಲಿ ವರದಿಯಾಗಿತ್ತು. ಪ್ರಸ್ತುತ ಪೊಗಾಗ್‌ನನ್ನು ಮಜುಲಿ ಜೈಲಿನಲ್ಲಿ ಇರಿಸಲಾಗಿದೆ.
ವಂಚನೆ ಪ್ರಕರಣದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗನ್ನು ಜೈಲಿಗಟ್ಟಿದ ಪೊಲೀಸ್ ಅಧಿಕಾರಿ!
ತನ್ನ ಭಾವಿ ಪತಿಯ ಬಂಧನದ ನಂತರ ರಭಾ ಅವರಿಗೆ ಮಾಧ್ಯಮಗಳು ಲೇಡಿ ಸಿಂಘಮ್ (Lady Singham) ಅಥವಾ ದಬಾಂಗ್ ಕಾಪ್ ಎಂದೆಲ್ಲಾ ಬಿರುದು ನೀಡಿದ್ದವು. ಆದರೆ ಈಗ ಅದೇ ಪ್ರಕರಣದಲ್ಲಿ ಈಕೆಯೂ ಕೈ ಜೋಡಿಸಿದ್ದಾಳೆ ಎಂದು ತಿಳಿದು ಬಂದಿದ್ದು, ಆರೋಪದ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಆಕೆಯನ್ನು ಗರ್ಮೂರ್‌ನಲ್ಲಿರುವ ಮಜುಲಿ ಜಿಲ್ಲಾ (Majuli jail)ಕಾರಾಗೃಹದಲ್ಲಿ ಇರಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪೋಗಾಗ್‌ನೊಂದಿಗೆ ರಭಾಳ ನಿಶ್ಚಿತಾರ್ಥ ಆಗಿತ್ತು. ಮತ್ತು ಅವರು ನವೆಂಬರ್ 2022 ರಲ್ಲಿ ಅವರು ಮದುವೆಯಾಗಲು ನಿರ್ಧರಿಸಿದ್ದರು.
ಪ್ರವಾಹಪೀಡಿತ ಅಸ್ಸಾಂನಲ್ಲಿ ತಾವೇ ದೋಣಿ ಏರಿ ಜನರ ರಕ್ಷಣೆಗೆ ಬಂದ ಮಹಿಳಾ ಐಎಎಸ್ ಅಧಿಕಾರಿ!
ಈ ವರ್ಷದ ಜನವರಿಯಲ್ಲಿ ಬಿಹ್ಪುರಿಯ ಶಾಸಕ (Bihpuria MLA) ಅಮಿಯಾ ಕುಮಾರ್ ಭುಯಾನ್ (Amiya Kumar Bhuyan) ಅವರೊಂದಿಗಿನ ದೂರವಾಣಿ ಸಂಭಾಷಣೆ ಸೋರಿಕೆಯಾದಾಗ ರಭಾ ವಿವಾದದಲ್ಲಿ ಸಿಲುಕಿದ್ದರು. ಆಕೆ ಅಮಿಯಾ ಕುಮಾರ್ ಭುಯಾನ್ ಅವರ ಕ್ಷೇತ್ರವಾದ ಬಿಹ್ಪುರಿಯದ ಜನರಿಗೆ ಕಿರುಕುಳ ನೀಡಿದ್ದಾಳೆ ಎಂದು ಸಚಿವರು ಹಾಗೂ ಎಸ್ಐ ಪರಸ್ಪರ ವಾಗ್ವಾದದಲ್ಲಿ ತೊಡಗಿದ್ದರು. ಸೋರಿಕೆಯಾದ ಆಡಿಯೋ ಟೇಪ್ ಕೋಲಾಹಲಕ್ಕೆ ಕಾರಣವಾಗುತ್ತಿದ್ದಂತೆ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ಚುನಾಯಿತ ಪ್ರತಿನಿಧಿಗೆ ಸರಿಯಾದ ಗೌರವವನ್ನು ನೀಡಬೇಕು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ