ಲವ್‌ ಮಾಡಿ ಕೈಕೊಟ್ಟ ಯುವಕ: ಮೊಬೈಲ್‌ನಲ್ಲಿ ಹೇಳಿಕೆ ದಾಖಲಿಸಿ ಯುವತಿ ನೇಣಿಗೆ ಶರಣು

By Suvarna News  |  First Published Jun 6, 2021, 3:14 PM IST

* ನಂಬಿಸಿ ಮೋಸ ಮಾಡಿದ ಬಾಯ್‌ಫ್ರೆಂಡ್‌ 
* ದಾವಣಗೆರೆ ನಗರದ ಭಾರತ್ ಕಾಲೋನಿಯಲ್ಲಿ ನಡೆದ ಘಟನೆ
* ನನ್ನನ್ನ ನಂಬಿಸಿ ಮೋಸ ಮಾಡಿದವನಿಗೆ ಗಲ್ಲು ಶಿಕ್ಷೆ ಕೊಡಿಸಿ


ದಾವಣಗೆರೆ(ಜೂ.06): ಯುವಕನಿಂದ ಗೊಳಗಾದ ಯುವತಿಯೊಬ್ಬಳು ಮೊಬೈಲ್‌ನಲ್ಲಿ ಹೇಳಿಕೆ ದಾಖಲಿಸಿ ನೇಣಿಗೆ ಶರಣಾದ ಘಟನೆ ನಗರದ ಭಾರತ್ ಕಾಲೋನಿಯಲ್ಲಿ ಇಂದು(ಭಾನುವಾರ) ನಡೆದಿದೆ. ಆಶಾ (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಯುವತಿಯಾಗಿದ್ದಾಳೆ. 

ಕೆ.ಬಿ.ಈರಣ್ಣ ಎಂಬ ಎಂಬಾತನೇ ಪ್ರೀತಿಸಿ ಮದುವೆ ಆಗುವುದಾಗಿ ವಂಚಿಸಿದ ಯುವಕನಾಗಿದ್ದಾನೆ. ಯುವಕ ಮಾಡಿದ ವಂಚನೆ ಬಗ್ಗೆ ಹೇಳಿಕೆ ದಾಖಲಿಸಿ ಮನೆಯಲ್ಲಿ ನೇಣು ಬಿಗಿದುಕೊಂಡು ಆಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಂದೆ ತಾಯಿ ತರಕಾರಿ ಮಾರಾಟಕ್ಕೆ ಹೋಗಿ ಮನೆಗೆ ವಾಪಸ್ಸಾದಾಗ ಮಗಳು ನೇಣಿಗೆ ಶರಣಾಗಿದ್ದಳು. 

Tap to resize

Latest Videos

ಶಿವಮೊಗ್ಗ: ನೇಣಿಗೆ ಶರಣಾದ ಮಹಿಳೆ, ಕಾರಣ ನಿಗೂಢ..?

ನನ್ನ ಸಾವಿಗೆ ಕೆ ಬಿ ಈರಣ್ಣನೇ ಕಾರಣ, ನನ್ನಂತ ಸಾವು ಯಾರಿಗೂ ಬರಬಾರದು‌. ನನ್ನನ್ನ ಚೆನ್ನಾಗಿ ನಂಬಿಸಿ ಮೋಸ ಮಾಡಿಸಿದವನಿಗೆ ಗಲ್ಲು ಶಿಕ್ಷೆ ಕೊಡಿಸಿಮ, ನನ್ನ ತರಾ ಇನ್ನೊಂದು ಹುಡುಗಿ ಜೀವನದಲ್ಲೂ ಆಟ ಆಡುತ್ತಿದ್ದಾನೆ. ಆ ಹುಡುಗಿ ಜೀವನವಾದ್ರೂ ಚನ್ನಾಗಿ ಇರಲಿ. ನಮ್ಮ ತಂದೆ ತಾಯಿ ಹೇಳಿದ್ರು ಆತನ ವಂಚಕ ಅಂತಾ ಅದರೆ ನಾನು ಕೇಳಲಿಲ್ಲ‌ ಎಂದು ಹೇಳಿಕೆ ದಾಖಲಿಸಿ ಆಶಾ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ಆರ್‌ಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

click me!