ಮೃತ ಆಯುಷ್ ಕಲ್ಪನಾ ಜಂಕ್ಷನ್ ಕಡೆಯಿಂದ ಚಂದ್ರಿಕಾ ಜಂಕ್ಷನ್ ಕಡೆಗೆ ಡಿಯೋ ಬೈಕ್ ನಲ್ಲಿ ಹೋಗ್ತಿದ್ದನು. ವಕ್ಫ್ ಬೋರ್ಡ್ ಬಳಿ ಅಪರಿಚಿತ ವಾಹನದ ಚಾಲಕ ಬಂದು ಆಯುಷ್‌ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದಾನೆ. ಘಟನೆಯಲ್ಲಿ ಆಯುಷ್ ತಲೆಗೆ ಗಂಭೀರ ಪೆಟ್ಟಾಗಿತ್ತು. ಈ ವೇಳೆ ಸಮೀಪದ ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಮುಂದಾಗಿದ್ದರು. ಆಸ್ಪತ್ರೆಗೆ ಸಾಗಿಸುವಾಗ ಆಯುಷ್ ಸಾವನ್ನಪ್ಪಿದ್ದಾನೆ.
ಬೆಂಗಳೂರು(ಜು.23): ಹಿಟ್ ಆ್ಯಂಡ್ ರನ್‌ಗೆ ಯುವಕನೊಬ್ಬ ಬಲಿಯಾದ ಘಟನೆ ಕನ್ನಿಂಗ್ ಹಾಮ್ ರಸ್ತೆಯಲ್ಲಿ ನಿನ್ನೆ(ಸೋಮವಾರ) ರಾತ್ರಿ 10.30ಕ್ಕೆ ನಡೆದಿದೆ. ಹೈ ಗ್ರೌಂಡ್ಸ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆಯುಷ್ ಅಪ್ಪಯ್ಯ (21) ಸಾವನ್ನಪ್ಪಿರೋ ಯುವಕ..
ಮೃತ ಆಯುಷ್ ಕಲ್ಪನಾ ಜಂಕ್ಷನ್ ಕಡೆಯಿಂದ ಚಂದ್ರಿಕಾ ಜಂಕ್ಷನ್ ಕಡೆಗೆ ಡಿಯೋ ಬೈಕ್ ನಲ್ಲಿ ಹೋಗ್ತಿದ್ದನು. ವಕ್ಫ್ ಬೋರ್ಡ್ ಬಳಿ ಅಪರಿಚಿತ ವಾಹನದ ಚಾಲಕ ಬಂದು ಆಯುಷ್‌ಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿದ್ದಾನೆ. ಘಟನೆಯಲ್ಲಿ ಆಯುಷ್ತ ಲೆಗೆ ಗಂಭೀರ ಪೆಟ್ಟಾಗಿತ್ತು. ಈ ವೇಳೆ ಸಮೀಪದ ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಮುಂದಾಗಿದ್ದರು. ಆಸ್ಪತ್ರೆಗೆ ಸಾಗಿಸುವಾಗ ಆಯುಷ್ ಸಾವನ್ನಪ್ಪಿದ್ದಾನೆ.
ಮಹಿಳೆ ಮೇಲೆ BMW ಕಾರ್ ಹತ್ತಿಸಿ ಎಸ್ಕೇಪ್ ಆಗಿದ್ದ ಶಿವಸೇನೆ ನಾಯಕನ ಮಗ ಅರೆಸ್ಟ್
ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.