ಹಳ್ಳಿ ಹುಡುಗಿಯನ್ನು ಪ್ರೀತಿ ಬಲೆಯಲ್ಲಿ ಬೀಳಿಸಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ಪೊಲೀಸ್!

Published : Jul 22, 2024, 05:12 PM IST
ಹಳ್ಳಿ ಹುಡುಗಿಯನ್ನು ಪ್ರೀತಿ ಬಲೆಯಲ್ಲಿ ಬೀಳಿಸಿ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ಪೊಲೀಸ್!

ಸಾರಾಂಶ

ಮುಗ್ದ ಹಳ್ಳಿ ಹುಡಿಗಿಯನ್ನು ಪ್ರೀತಿ ಬಲೆಯಲ್ಲಿ ಬೀಳಿಸಿದ ಪೊಲೀಸ್ ಪೇದೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇತ್ತ ಸರ್ಕಾರಿ ಕೆಲಸ, ಎಲ್ಲಕ್ಕಿಂತ ಹೆಚ್ಚು ಜವಾಬ್ದಾರಿ ಹೊಂದಿರು ವ್ಯಕ್ತಿ ಎಂದು ಪೊಲೀಸಪ್ಪ ಕೇಳಿದ್ದೆಲ್ಲಾ ಕೊಟ್ಟಿದ್ದಾಳೆ. ಆದರೆ ಆಕೆಯ ಅಶ್ಲೀಲ ವಿಡಿಯೋ ಚಿತ್ರೀಕರಿಸಿಕೊಂಡ ಪೊಲೀಸ್ ಬ್ಲಾಕ್‌ಮೇಲ್ ಆರಂಭಿಸಿದ್ದಾನೆ.  

ಭೋಜಪುರ್(ಜು.22) ಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪೇದೆ, ಇಡೀ ಊರಿನಲ್ಲಿ ಹವಾ ಇಟ್ಟಿದ. ಇಷ್ಟೇ ಆಗಿದ್ದರೆ ಸಮಸ್ಯೆ ಇರಲಿಲ್ಲ. ಈತ ಅದೇ ಹಳ್ಳಿಯ ಹುಡುಗಿಯ ಮುಂದೆ ಪ್ರೀತಿಯ ನಾಟಕವಾಡಿದ್ದಾನೆ. ಮುಗ್ದ ಹುಡುಗಿ ಪೊಲೀಸ್ ಪೇದೆಯ ಮೋಸದಾಟಕ್ಕೆ ಬಿದ್ದಿದ್ದಾಳೆ. ಅಲ್ಲಿಂದ ಶುರುವಾಯ್ತು ನೋಡಿ ಹುಡುಗಿಯ ಸಂಕಷ್ಟ. ಪೊಲೀಸ್ ಮೋಸ ಮಾಡಲ್ಲ, ಅವರಿಗೆ ಜವಾಬ್ದಾರಿ ಇದೆ ಎಂದುಕೊಂಡು ಹಳ್ಳಿ ಹುಡುಗಿ ಆತ್ಮೀಯವಾಗಿದ್ದಾಳೆ. ಇತ್ತ ಪೊಲೀಸ್ ಪೇದೆ ಲೈಂಗಿಕ ಸಂಪರ್ಕವನ್ನೂ ಬೆಳೆಸಿದ್ದಾನೆ. ಇದೇ ವೇಳೆ ಕೆಲ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಹುಡುಗಿ ಮದುವೆ ವಿಚಾರ ಹೇಳುತ್ತಿದ್ದಂತೆ ಪೊಲೀಸ್ ಪೇದೆ ಸಾಧ್ಯವಿಲ್ಲ ಎಂದಿದ್ದಾನೆ. ಇಷ್ಟೇ ಅಲ್ಲ ದೈಹಿಕ ಸಂಪರ್ಕ ನಿರಾಕರಿಸಿದೆ ವಿಡಿಯೋ ಬಿಡುಗಡೆ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡಿದ ಘಟನೆ ಉತ್ತರ ಪ್ರದೇಶದ ಭೋಜ್‌ಪುರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಭೋಜ್‌ಪುರ್ ಪೊಲೀಸ್ ಠಾಣೆಯ ಪೇದೆ ಮೋನು ಕುಮಾರ್ ಮೋಸದಾಟಕ್ಕೆ ಅಮಾಯಕ ಹೆಣ್ಣುಮಗಳು ಬದುಕು ದುಸ್ತರವಾಗಿದೆ. ಹಳ್ಳಿಯ ಪೊಲೀಸ್ ಠಾಣೆಯಲ್ಲಿ ಮೋನು ಕುಮಾರ್ ಆಡಿದ್ದೇ ಆಟವಾಗಿತ್ತು. ರಿವಾಲ್ವರ್ ಹಿಡಿದು ಗ್ರಾಮಸ್ಥರನ್ನು ಹದ್ದು ಬಸ್ತಿನಲ್ಲಿಟ್ಟಿದ್ದ. ಇದರ ನಡುವೆ ಅಮಾಯಕ ಹೆಣ್ಣುಮಗಳ ಮೇಲೆ ಈತನ ಕಣ್ಣು ಬಿದ್ದಿದೆ. ಈಕೆಯ ಮುಂದೆ ಪ್ರೀತಿಯ ನಾಟಕವಾಡಿದ್ದಾನೆ.

ಹೆಣ್ಣು, ಪ್ರಾಣಿ ಮಾತ್ರವಲ್ಲ ಅತ್ಯಾಚಾರಕ್ಕೆ ಕಾರಿನ ಎಕ್ಸ್‌ಹಾಸ್ಟ್ ಹೊರತಾಗಿಲ್ಲ, ವಿಡಿಯೋ ವೈರಲ್!

ಮುಗ್ದ ಹೆಣ್ಣುಮಗಳು ಪೊಲೀಸ್ ಪ್ರೀತಿ ನಾಟಕದಲ್ಲಿ ಬಂಧಿಯಾಗಿದ್ದಾಳೆ. ಇದನ್ನೇ ಬಳಸಿಕೊಂಡ ಮೋನು ಕುಮಾರ್ ಈಕೆ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇತ್ತ ಹುಡುಗಿ ಮದುವೆ ವಿಚಾರ ಪ್ರಸ್ತಾಪಿಸಿದ್ದಾಳೆ. ಈ ವೇಳೆ ಮೋನು ಕುಮಾರ್ ಹೊಸ ತಂತ್ರ ಪ್ರಯೋಗಿಸಿದ್ದಾನೆ. 

ರಿವಾಲ್ವರ್ ಬಳಸಿ ಗದರಿಸಿದ್ದಾನೆ. ಜೊತೆಗೆ ಲೈಂಗಿಕ ಕ್ರಿಯೆ ನಡೆಸಿ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿದ್ದಾನೆ. ಈ ವಿಚಾರ, ಬಾಯ್ಬಿಟ್ಟರೆ, ದೂರು ನೀಡಿದರೆ ಕುಟುಂಬವನ್ನೂ ನಿರ್ನಾಮ ಮಾಡುತ್ತೇನೆ ಎಂದು ಬೆದರಿಸಿದ್ದಾನೆ. ಇದರ ನಡುವೆ ಕುಟುಂಬಸ್ಥರು ಬೇರೊಬ್ಬರ ಜೊತೆ ಮದುವೆ ಮಾಡಲು ತಯಾರಿ ನಡೆಸಿದ್ದಾರೆ. ಈ ಮಾಹಿತಿ ಅರಿತ ಮೋನು ಕುಮಾರ್ ಹುಡುಗನಿಗೆ ಅಶ್ಲೀ ವಿಡಿಯೋ ಕಳುಹಿಸಿ ಮದುವೆಯನ್ನೂ ಮುರಿದಿದ್ದಾನೆ. ಜೊತೆಗೆ ಪ್ರತಿ ದಿನ ರಾತ್ರಿ ಠಾಣೆಗೆ ಬಂದು ಸಹಕರಿಸುವಂತೆ ತಾಕೀತು ಮಾಡಿದ್ದಾನೆ. ಬೇರೆ ದಾರಿ ಕಾಣದ ಹೆಣ್ಣು ಮಗಳು ದೂರು ನೀಡಿದ್ದಾರೆ. ಮೋನು ಕುಮಾರ್ ವಿರುದ್ದ ಅತ್ಯಾಚಾರ ಹಾಗೂ ಬೆದರಿಕೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು  ತನಿಖೆ ಆರಂಭಿಸಿದ್ದಾರೆ.

ಶಿವ ದೇವಸ್ಥಾನದ ಗರ್ಭಗುಡಿ ಪಕ್ಕದಲ್ಲೇ ಜೋಡಿಯ ರೊಮ್ಯಾನ್ಸ್ ದೃಶ್ಯ ಸೆರೆ, ಭಕ್ತರ ಆಕ್ರೋಶ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ