ಸೈಕೋ ಟೆಕ್ಕಿ ದಿಲ್ಲಿ ಪ್ರಸಾದ್‌ನ ಮೊಬೈಲ್ ನಲ್ಲಿ 208 ಖಾಸಗಿ ವೀಡಿಯೊಗಳು ಪತ್ತೆ!

By Ravi Janekal  |  First Published Feb 5, 2023, 12:19 PM IST

ಮೂರು ನಕಲಿ ಇನ್ಸ್ಟಾಗ್ರಾಮ್ ಖಾತೆಗಳನ್ನು ಬಳಸಿಕೊಂಡು ಮುಗ್ಧ ಯುವತಿಯರೊಂದಿಗೆ ಕಳ್ಳಾಟವಾಡುತ್ತಿದ್ದ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಸೈಕೋ ದಿಲ್ಲಿ ಪ್ರಸಾದನ ಇನ್ನಷ್ಟು ವಂಚನೆಗಳು ಬಯಲಿಗೆ ಬಂದಿವೆ.


ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು

ಬೆಂಗಳೂರು (ಫೆ.5) : ಮೂರು ನಕಲಿ ಇನ್ಸ್ಟಾಗ್ರಾಮ್ ಖಾತೆಗಳನ್ನು ಬಳಸಿಕೊಂಡು ಮುಗ್ಧ ಯುವತಿಯರೊಂದಿಗೆ ಕಳ್ಳಾಟವಾಡುತ್ತಿದ್ದ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಸೈಕೋ ದಿಲ್ಲಿ ಪ್ರಸಾದನ ಇನ್ನಷ್ಟು ವಂಚನೆಗಳು ಬಯಲಿಗೆ ಬಂದಿವೆ.

Tap to resize

Latest Videos

ಈ ಪ್ರಕರಣದ ಬೆನ್ನುಹತ್ತಿರುವ ಆಗ್ನೇಯ ವಿಭಾಗ ಸೈಬರ್ ಪೊಲೀಸರಿಗೆ ತನಿಖೆ ವೇಳೆ ಮತ್ತಷ್ಟು ಸ್ಪೋಟ ಸತ್ಯಗಳು ಬಯಲಾಗಿವೆ. ಆರೋಪಿ ಕಾಮುಕ ಕನ್ನಪಲ್ಲಿ ದಿಲ್ಲಿ ಪ್ರಸಾದ್ ನಿಜ ಬಣ್ಣ ಬಯಲಾಗಿದ್ದು, ಆರೋಪಿ ಬಳಿ ಯುವತಿಯರ 208 ಖಾಸಗಿ ವಿಡಿಯೋಗಳು ಪತ್ತೆಯಾಗಿವೆ. 

ಹೆಣ್ಣು ಮಕ್ಕಳೇ ಹುಷಾರ್! ಕೆಲಸ ಕೊಡಿಸೊದಾಗಿ ನಂಬಿಸಿ ಯುವತಿಯ ಅತ್ಯಾಚಾರ ಎಸಗಿದ ಕಾಮುಕ ಟೆಕ್ಕಿ!

ಅದರಲ್ಲಿ ಪ್ರಸಾದನದೇ ಎನ್ನಲಾದ  60 ವಿಡಿಯೋ ಗಳು ಪತ್ತೆಯಾಗಿದ್ದು, ವಿಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದ. ಯುವತಿಯರ ಅವಶ್ಯಕತೆ ಅರಿತು ವಂಚನೆಯ ಜಾಲ ಬೀಸ್ತಿದ್ದ. ಇನ್ಸ್ ಸ್ಟಾಗ್ರಾಮ್(Instagram) ಮೂಲಕ ಪರಿಚಯ ಮಾಡಿಕೊಂಡು ಹಲವರ ಜೊತೆ ಬ್ಲಾಕ್ ಮೇಲ್ ಮಾಡಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ.‌ ಮದುವೆ ಆಗೋವರೆಗೂ ಯುವತಿಯರನ್ನು ಯೂಸ್ ಮಾಡಿಕೊಳ್ತಿದ್ದ ಆರೋಪಿ  ಮದುವೆಯಾದ ಬಳಿಕ ಅವರನ್ನು ಅವೈಡ್ ಮಾಡ್ತಿದ್ದ. 

 6 ಯುವತಿಯರು ಒಬ್ಬಳು ಲವರ್ ನ ಬಳಸಿಕೊಂಡಿರೋದು ಗೊತ್ತಾಗಿದೆ. ಗರ್ಲ್ ಫ್ರೆಂಡ್ ಗೂ ಇದೇ ರೀತಿ ಲೈಂಗಿಕ ಕ್ರಿಯೆ ನಡೆಸಿ ವಂಚಿಸೋ ಪ್ಲಾನ್ ಈತನದ್ದಾಗಿತ್ತು ಅಂತಾ ತನಿಖೆಯಲ್ಲಿ ಗೊತ್ತಾಗಿದೆ. ಯುವತಿಯರಿಗೆ ಸೆಕ್ಸ್ ವಿಡಿಯೋ ಕಳಿಸುತ್ತಿದ್ದ ಆರೋಪಿ, ಅದೇ ರೀತಿ ಸೆಕ್ಸ್ ವಿಡಿಯೋ ಮಾಡಿ ಕಳಿಸುವಂತೆ ಹೇಳುತ್ತಿದ್ದ. ವಿವಿಧ ಆ್ಯಂಗಲ್ ನಲ್ಲಿ ಸೆಕ್ಸ್ ವಿಡಿಯೋ ಕಳಿಸಲು ಬ್ಲಾಕ್ ಮೇಲ್ ಮಾಡ್ತಿದ್ದ. ವೀಡಿಯೊ ಕಳಿಸದಿದ್ರೆ ಸೊಷಿಯಲ್ ಮೀಡಿಯಾದಲ್ಲಿ ನಗ್ನ ಪೋಟೋ ವಿಡಿಯೋ ಹಾಕುವುದಾಗಿ ಬೆದರಿಕೆ ಹಾಕ್ತಿದ್ದ. 

ಮತ್ತೊಬ್ಬನೊಟ್ಟಿಗೆ ಮದುವೆ ಆದ ಬಳಿಕವೂ ದೈಹಿಕ ಸಂಪರ್ಕಕ್ಕೆ ಒತ್ತಾಯ: ಗೆಳತಿಯ ಖಾಸಗಿ ವಿಡಿಯೋ ಬಳಸಿ Blackmail: ಬಂಧನ

ಇನ್ಸ್ ಸ್ಟಾಗ್ರಾಮ್ ನಲ್ಲಿ ಯುವತಿಯ ಹೆಸರಲ್ಲಿ ಅಕೌಂಟ್ ತೆರೆದು ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಟೆಕ್ಕಿ ಪ್ರಸಾದ್(Tech Prasad) ತಾನು ಕೆಲಸ ಗಿಟ್ಟಿಸಲು ಮೈ ಮಾರಿಕೊಂಡಿದ್ದೇನೆ ಎಂದು ಹೇಳಿ ನಂಬಿಸ್ತಿದ್ದ.  ಯುವತಿಯರ ರೀತಿ ಚಾಟ್ ಮಾಡಿ ನಗ್ನ ವಿಡಿಯೋ ಕಳಿಸಿಕೊಂಡು ಸೆಕ್ಸ್ ಗೆ ಆಹ್ವಾನ ನೀಡ್ತಿದ್ದ. ಓಯೋ ರೂಮ್ ಗೆ ಕರೆಸಿ ಬಲವಂತವಾಗಿ ಆತ್ಯಾಚಾರ ಮಾಡಿರೋದು ಸೌತ್ ಈಸ್ಟ್ ಸೈಬರ್ ಪೊಲೀಸ್ರ ವಿಚಾರಣೆ ವೇಳೆ ಗೊತ್ತಾಗಿದೆ.

click me!