ತಾಂತ್ರಿಕ ದೋಷವಿದ್ದ ಮಿಕ್ಸರ್ ಗ್ರೈಂಡರ್ ಮಾರಾಟ; ನೊಂದ ಮಹಿಳೆಗೆ 20,000 ಪರಿಹಾರ  ನೀಡಲು ಕೋರ್ಟ್ ಆದೇಶ

By Ravi Nayak  |  First Published Aug 6, 2022, 2:28 PM IST

ಮಹಿಳೆಯೊಬ್ಬರಿಗೆ ತಾಂತ್ರಿಕ ದೋಷವಿದ್ದ ಮಿಕ್ಸರ್ ಡ್ರೈಂಡರ್ ಮಾರಾಟ ಮಾಡಿದ ಕಾರಣಕ್ಕಾಗಿ ಗ್ರಾಹಕರಿಗೆ ಒಟ್ಟು 20,189ರೂ. ಪರಿಹಾರ ನೀಡುವಂತೆ ಉಡುಪಿಯ ಖಾಸಗಿ ಮಾರಾಟ ಮಳಿಗೆಗೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.


ವರದಿ- ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಆ.6) : ಆ ಮಹಿಳೆ ನಾಲ್ಕು ಸಾವಿರ ರೂಪಾಯಿ ನೀಡಿ ಮಿಕ್ಸರ್ ಗ್ರೈಂಡರ್ ಖರೀದಿಸಿದ್ದರು. ಖರೀದಿಸಿ ಮನೆಗೆ ತಂದಾಗಲೇ ಅದರಲ್ಲಿದ್ದ ದೋಷ ಪತ್ತೆಯಾಗಿತ್ತು. ಈ ಬಗ್ಗೆ ಮಾರಾಟಗಾರರು ಸೂಕ್ತ ರೀತಿಯಲ್ಲಿ ಸ್ಪಂದಿಸದೆ ಹೋದಾಗ, ಮಹಿಳೆ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ 5 ಪಟ್ಟು ಹೆಚ್ಚು ಮೊತ್ತದ ಪರಿಹಾರ ನೀಡಲು ಗ್ರಾಹಕ ನ್ಯಾಯಾಲಯ ತೀರ್ಪು ನೀಡಿದೆ.

Latest Videos

undefined

ಕ್ಯಾರಿ ಬ್ಯಾಗ್‌ಗೆ 12 ರೂ : ಕೋರ್ಟ್ ಮೆಟ್ಟಿಲೇರಿದ ಗ್ರಾಹಕನಿಗೆ ಸಿಕ್ತು 21,000 ರೂ. ಪರಿಹಾರ

ತಾಂತ್ರಿಕ ದೋಷವಿದ್ದ ಮಿಕ್ಸರ್ ಡ್ರೈಂಡರ್ ಮಾರಾಟ ಮಾಡಿದ ಕಾರಣಕ್ಕಾಗಿ ಗ್ರಾಹಕರಿಗೆ ಪರಿಹಾರ ನೀಡುವಂತೆ ಉಡುಪಿಯ ಖಾಸಗಿ ಮಾರಾಟ ಮಳಿಗೆಗೆ ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ನೀಡಿದೆ.ಉಪನ್ಯಾಸಕಿಯ ಪರ ತೀರ್ಪು ನೀಡಿದ ಜಿಲ್ಲಾ ಗ್ರಾಹಕರ ಆಯೋಗ 20,189 ರೂ. ಪರಿಹಾರ ಒದಗಿಸಬೇಕೆಂದು ಆದೇಶಿಸಿದೆ.

ಪ್ರಕರಣದ ವಿವರ

ಉಪನ್ಯಾಸಕಿ ಅನಿತಾ ಎರಡು ವರ್ಷಗಳ ಹಿಂದೆ ಉಡುಪಿಯ ಮಳಿಗೆಯೊಂದರಿಂದ,  4,239ರೂ.ಗಳನ್ನು ನೀಡಿ ಮಿಕ್ಸರ್ ಗೈಂಡರ್ ಖರೀದಿಸಿದ್ದರು. ಆದರೆ ಮೂರೇ ತಿಂಗಳಲ್ಲಿ ಅದರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಮಿಕ್ಸಿಗೆ ಎರಡು ವರ್ಷಗಳ ಗ್ಯಾರಂಟಿ ಮತ್ತು 5 ವರ್ಷಗಳ ವಾರೆಂಟಿ ಇರುವುದರಿಂದ ಹೊಸ ಮಿಕ್ಸಿ ಕೊಡುವಂತೆ ಗ್ರಾಹಕಿ ಮನವಿ ಮಾಡಿದ್ದರು.

ಆದರೆ ಬದಲಿ ಮಿಕ್ಸಿಯನ್ನು ಕೊಡಲು ಒಪ್ಪದೇ ಅದೇ ಮಿಕ್ಸಿಯನ್ನು ಸರಿಪಡಿಸಿ ಕೊಟ್ಟಿದ್ದರು ಅದರ ಅನಂತರವೂ ಮೂರು ತಿಂಗಳಿಗೊಮ್ಮೆ ಮಿಕ್ಸಿಯಲ್ಲಿ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಿ ದ್ದವು. ಬದಲಿ ಮಿಕ್ಸಿ ಕೊಡಲು ಒಪ್ಪದಿದ್ದಾಗ ಗ್ರಾಹಕಿ ಅನಿತಾ, ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ತಾನು ಮಿಕ್ಸಿ ಖರೀದಿಸಿದ ಮಳಿಗೆ ಮತ್ತು ಮಿಕ್ಸಿಯ ಕಂಪನಿ ವಿರುದ್ಧ ದಾವೆ ಹೂಡಿದರು.

ಕೋಲಾರದ ವಿದ್ಯಾರ್ಥಿನಿಗೆ ಗ್ರಾಹಕ ನ್ಯಾಯಾಲಯದಲ್ಲಿ ಜಯ : ಮರಳಿತು ಹಣ

ಗ್ರಾಹಕಿಯ ದೂರನ್ನು ಪರಿಶೀಲಿಸಿದ ಆಯೋಗ ಖರೀದಿಸಿದ್ದ ಮಿಕ್ಸಿಯ ದರ, ಅದರ ಬಡ್ಡಿಯ ಮೊತ್ತ, ಅವರ ಕೆಲಸದಲ್ಲಾದ ತೊಂದರೆ, ಮಾನಸಿಕ ಮತ್ತು ದೈಹಿಕ ಶ್ರಮ, ಓಡಾಟದ ಖರ್ಚು ಕೋರ್ಟ್ ವ್ಯವಹಾರದ ಖರ್ಚು ಹೀಗೆ ಒಟ್ಟು 20,189 ರೂ. ನೀಡಬೇಕೆಂದು ಆಯೋಗದ ಅಧ್ಯಕ್ಷ ಸುನೀಲ ಮಾಸರೆಡ್ಡಿ ಆದೇಶ ಹೊರಡಿಸಿದಾರೆ.

ಈ ಪ್ರಕರಣ ದಾಖಲಿಸಲು ಉಪನ್ಯಾಸಕಿ ಸುಜಾತ ಸುಧೀರ್ ನ್ಯಾಯವಾದಿಗಳಾದ ವಿದ್ಯಾ ಭಟ್ , ಅಂಜಲಿನ್, ಜಯಶ್ರೀ ಶೆಟ್ಟಿ ಹಾಗೂ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಿಬ್ಬಂದಿಗಳು ಸಹಕಾರ ನೀಡಿದ್ದಾರೆ.

click me!