Bengaluru Crime: ನಕಲಿ ದಾಖಲೆ ಬಳಸಿ ಎನ್‌ಆರ್‌ಐಗಳ ಸೈಟ್‌ ಮಾರಾಟ..!

By Girish Goudar  |  First Published Mar 16, 2022, 4:41 AM IST

*  ಯಲಹಂಕ ಸುತ್ತಲಿನ ನಿವೇಶನದ ಮಾಲಿಕರ ಮಾಹಿತಿ ಪಡೆದು ಬಳಿಕ ನಕಲಿ ದಾಖಲೆ ಸೃಷ್ಟಿ
*  ಸಬ್‌ ರಿಜಿಸ್ಟ್ರಾರ್‌ ಕಚೇರಿ ನಕಲಿ ಸೀಲು ಬಳಸಿ ಕೃತ್ಯ
*  ಸೈಟ್‌ನಲ್ಲಿ ಗಳಿಸಿ ಜೂಜಿನಲ್ಲಿ ಕಳೆದ
 


ಬೆಂಗಳೂರು(ಮಾ.16):  ಸಬ್‌ ರಿಜಿಸ್ಟ್ರಾರ್‌ ಕಚೇರಿಗಳ ನಕಲಿ ಸೀಲು ಹಾಗೂ ಛಾಪಾ ಕಾಗದ ಬಳಸಿ ಅಕ್ರಮ ಭೂ ವ್ಯವಹಾರದಲ್ಲಿ(Land Scam) ತೊಡಗಿದ್ದ ಜಾಲವೊಂದು ಯಲಹಂಕ ಉಪ ನಗರ ಠಾಣೆ ಪೊಲೀಸರ(Police) ಬಲೆಗೆ ಬಿದ್ದಿದೆ.

ಯಲಹಂಕದ ಅಟ್ಟೂರು ಲೇಔಟ್‌ನ ಪ್ರದೀಪ್‌ ಅಲಿಯಾಸ್‌ ಪಾಯಿಜನ್‌ ಪ್ರದೀಪ್‌, ಚಿಕ್ಕಬೊಮ್ಮಸಂದ್ರದ ಧರ್ಮಲಿಂಗಂ, ಮಂಜುನಾಥ, ಯಾರಬ್‌ ಅಲಿಯಾಸ್‌ ಅಬ್ದುಲ್‌ ರಬ್‌, ಮಂಜುನಾಥ, ಕೊಡಿಗೇಹಳ್ಳಿಯ ಅಬ್ದುಲ್‌ ಘನಿ, ಶ್ಯಾಂಪುರದ ಶಬಾನಾ ಬಾನು ಹಾಗೂ ಕುಣಿಗಲ್‌ ತಾಲೂಕಿನ ಹುಲಿಯೂರು ದುರ್ಗದ ರಾಮಯ್ಯ ಅಲಿಯಾಸ್‌ ಆಟೋ ರಾಮ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) ವಿವಿಧ ಮುಖಬೆಲೆಯ 2130 ನಕಲಿ ಛಾಪಾ ಕಾಗದಗಳು ಹಾಗೂ ಸಬ್‌ ರಿಜಿಸ್ಟ್ರಾರ್‌ ಕಚೇರಿಯ 17 ಸೀಲುಗಳನ್ನು ಜಪ್ತಿಯಾಗಿದೆ.

Tap to resize

Latest Videos

Bengaluru Drug Bust: ಕುರ್ಕುರೆ, ಚಕ್ಕುಲಿ ಪ್ಯಾಕೆಟಲ್ಲಿ ಡ್ರಗ್ಸ್‌ ತುಂಬಿಸಿ ಮಾರಾಟ..!

ಇತ್ತೀಚೆಗೆ ವಿದೇಶದಲ್ಲಿ(Foreign) ನೆಲೆಸಿರುವ ಬೆಂಗಳೂರು(Bengaluru) ಮೂಲದ ವೈದ್ಯ ಪ್ರಶಾಂತ್‌ ರೆಡ್ಡಿ ಅವರ ಸೇರಿದ ಕೋಟ್ಯಂತರ ರು. ಮೌಲ್ಯದ 2400 ಅಡಿಗಳ ವಿಸ್ತೀರ್ಣದ ನಿವೇಶನವನ್ನು ಅಕ್ರಮವಾಗಿ ಕಬಳಿಸಲು ಯತ್ನಿಸಿದ ಆರೋಪಿಗಳು, ಈ ಬಗ್ಗೆ ಪ್ರಶ್ನಿಸಿದ ವೈದ್ಯರ ತಂದೆ ಜಯಪ್ರಕಾಶ್‌ ಅವರಿಗೆ ಜೀವ ಬೆದರಿಕೆ(Life Threatening) ಹಾಕಿದ್ದರು. ಯಲಹಂಕ ಉಪ ನಗರ ಠಾಣೆಯಲ್ಲಿ ವೈದ್ಯರ ತಂದೆ ದಾಖಲಿಸಿದ ದೂರಿನ ಮೇರೆಗೆ ತನಿಖೆ ನಡೆಸಿದಾಗ ಭೂ ಮಾಫಿಯಾ ಜಾಲವು ಬೆಳಕಿಗೆ ಬಂದಿತು ಎಂದು ಈಶಾನ್ಯ ವಿಭಾಗದ ಡಿಸಿಪಿ ಅನೂಪ್‌ ಶೆಟ್ಟಿ ತಿಳಿಸಿದ್ದಾರೆ.

ಅಟ್ಟೂರು ಲೇಔಟ್‌ನ ರಿಯಲ್‌ ಎಸ್ಟೇಟ್‌ ಏಜೆಂಟ್‌ ಪ್ರದೀಪ್‌, ಭೂ ಮಾಫಿಯಾ ಜಾಲದ ಮಾಸ್ಟರ್‌ ಮೈಂಡ್‌. ಯಲಹಂಕ ಸುತ್ತಮುತ್ತ ಖಾಲಿ ನಿವೇಶನಗಳು ಹಾಗೂ ಜಮೀನುಗಳ ವಾರಸುದಾರರ ವಿವರ ಕಲೆ ಹಾಕುತ್ತಿದ್ದ. ಅದರಲ್ಲೂ ವಿದೇಶಿ ನೆಲೆಸಿರುವ ವ್ಯಕ್ತಿಗಳಿಗೆ ಸೇರಿದ ನಿವೇಶನಗಳು ಆತನ ಪ್ರಮುಖ ಗುರಿಯಾಗಿತ್ತು. ತರುವಾಯ ಆ ನಿವೇಶನಗಳಿಗೆ ತನ್ನ ಹೆಸರಿನಲ್ಲಿ ನಕಲಿ ದಾಖಲೆಗಳನ್ನು(Fake Documents) ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಹಣದಾಸೆ ತೋರಿಸಿ ಇನ್ನುಳಿದ ಆರೋಪಿಗಳನ್ನು ಪ್ರದೀಪ್‌ ಬಳಸಿಕೊಂಡಿದ್ದ. ಇದುವರೆಗೆ ಯಲಹಂಕ ವ್ಯಾಪ್ತಿಯಲ್ಲಿ 6 ನಿವೇಶನಗಳ ಕಬಳಿಕೆ ಬಗ್ಗೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

ಖಾಲಿ ನಿವೇಶನಗಳಿಗೆ 1990ರಲ್ಲೇ ನೋಂದಣಿ ಆಗಿರುವ ನಕಲಿ ಛಾಪಾ ಕಾಗದ ಮತ್ತು ಉಪನೋಂದಣಾಕಾರಿ ಕಚೇರಿ ನಕಲಿ ಸೀಲುಗಳನ್ನು ಬಳಸಿ ಬೇರೆಯವರ ಹೆಸರುಗಳಲ್ಲಿ ಕ್ರಯ ಪತ್ರ ಸೃಷ್ಟಿಸುತ್ತಿದ್ದ. ಆನಂತರ ಜಿಪಿಎ ರಿಜಿಸ್ಟರ್‌, ಸೇಲ್‌ ಅಗ್ರಿಮೆಂಟ್‌ ಮತ್ತು ಸೇಲ್‌ಡೀಡ್‌ಗಳ ಮೂಲಕ ಮಾರುತ್ತಿದ್ದರು.

Bengaluru Crime: ಅಪ್ರಾಪ್ತೆಯ ಪ್ರಜ್ಞೆ ತಪ್ಪಿಸಿ ವೇಶ್ಯಾವಾಟಿಕೆ ದಂಧೆ: ಮಹಿಳೆಯರಿಂದಲೇ ಹೇಯ ಕೃತ್ಯ..!

ರೌಡಿ, ಸ್ಟ್ಯಾಪ್‌ ವೆಂಡ​ರ್ಸ್‌ ಬೆಂಬಲ

ಎರಡ್ಮೂರು ವರ್ಷಗಳಿಂದ ಭೂ ಮಾಫಿಯಾದಲ್ಲಿ ಈ ಆರೋಪಿಗಳು ತೊಡಗಿದ್ದು, ಇದೇ ಮೊದಲ ಬಾರಿಗೆ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ. ಆರೋಪಿಗಳ ಪೈಕಿ ಆಟೋ ರಾಮ ಕ್ರಿಮಿನಲ್‌ ಹಿನ್ನೆಲೆಯುವಳ್ಳನಾಗಿದ್ದಾನೆ. ಇನ್ನುಳಿದಂತೆ ಕೆಲವರು ಸ್ಟ್ಯಾಂಪ್‌ ವೆಂಡರ್‌ ಹಾಗೂ ಬ್ರೋಕರ್‌ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಸೈಟ್‌ನಲ್ಲಿ ಗಳಿಸಿ ಜೂಜಿನಲ್ಲಿ ಕಳೆದ

ಪ್ರದೀಪ್‌ ವೃತ್ತಿಪರ ಜೂಜುಕೋರನಾಗಿದ್ದು, ಬೆಂಗಳೂರು ಮಾತ್ರವಲ್ಲದೆ ದೊಡ್ಡಬಳ್ಳಾಪುರ, ನೆಲಮಂಗಲ, ಕುಣಿಗಲ್‌ ಸೇರಿದಂತೆ ಇತರೆಡೆ ಜೂಜು ಅಡ್ಡೆಗಳಲ್ಲಿ ಆತ ಕಾಯಂ ಆಟಗಾರನಾಗಿದ್ದ. ರಿಯಲ್‌ ಎಸ್ಟೇಟ್‌ ದಂಧೆಯಲ್ಲಿ(Real Estate Racket) ಸಂಪಾದಿಸಿದ ಹಣವನ್ನು ಆತ ಜೂಜಾಟದಲ್ಲಿ(Gambling) ತೊಡಗಿಸುತ್ತಿದ್ದ. ಇದೇ ಜೂಜು ಅಡ್ಡೆಯಲ್ಲೇ ಆತನಿಗೆ ರೌಡಿ ಆಟೋ ರಾಮನ ಪರಿಚಯವಾಗಿತ್ತು. ಒಂದು ಬಾರಿ ಜೂಜಾಟದಲ್ಲಿ ಹಣ ಕಳೆದುಕೊಂಡು ಪಾಪ್ಪರ್‌ ಆಗಿದ್ದ ಪ್ರದೀಪ್‌ನಿಗೆ 20 ಲಕ್ಷವನ್ನು ರಾಮ ಸಾಲ ಕೊಟ್ಟಿದ್ದ. ಈ ಸಾಲವನ್ನು ನಿವೇಶನ(Site)  ಮಾರಾಟ ಮಾಡಿ ಆತ ತೀರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
 

click me!