Bengaluru Crime: ಆಟೋದಲ್ಲಿ ಕುಳಿತ್ತಿದ್ದಕ್ಕೆ ಜಗಳ: ಇಟ್ಟಿಗೆಯಿಂದ ಹೊಡೆದು ಹತ್ಯೆ

By Girish Goudar  |  First Published Mar 16, 2022, 6:06 AM IST

*  ಬೆಂಗಳೂರಿನ ಕೋಡಿಹಳ್ಳಿ ಜಂಕ್ಷನ್‌ನಲ್ಲಿ ನಡೆದ ಘಟನೆ
*  ಆಟೋ ಚಾಲಕರಿಬ್ಬರ ಸೆರೆ
*  ಮಂಜುನಾಥ್‌ ಕೊಲೆಯಾದ ದುರ್ದೈವಿ
 


ಬೆಂಗಳೂರು(ಮಾ.16):  ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮೂವರು ಆಟೋ ಚಾಲಕರ ಮಧ್ಯೆ ಉಂಟಾದ ಜಗಳ, ಒಬ್ಬನ ಕೊಲೆಯೊಂದಿಗೆ(Murder)ಘಟನೆ ಜೆ.ಬಿ.ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಕೋಡಿಹಳ್ಳಿ ಜಂಕ್ಷನ್‌ ಸಮೀಪ ನಡೆದಿದೆ. ಇಂದಿರಾ ನಗರ ಸಮೀಪದ ದೂಪನಹಳ್ಳಿ ಮಂಜುನಾಥ್‌ (32) ಕೊಲೆಯಾದ ದುರ್ದೈವಿ. ರಾಮನಗರ ತಾಲೂಕಿನ ಕೈಲಾಂಚ ಹೋಬಳಿ ಮಧುಸೂದನ್‌ ಹಾಗೂ ಕುಣಿಗಲ್‌ ತಾಲೂಕು ಹುಲಿಯೂರು ದುರ್ಗದ ಹಿತೇಶ್‌ಗೌಡ ಬಂಧಿತರು.

ಮಧುಸೂದನ್‌ ಮುನಿಕೊಳಲು, ಹಿತೇಶ್‌ಗೌಡ ಉಲ್ಲಾಳದಲ್ಲಿ ವಾಸವಾಗಿದ್ದರು. ಹತ್ಯೆ ಸಂಬಂಧ ಇಬ್ಬರು ಆಟೋ ಚಾಲಕರನ್ನು ಜೆ.ಬಿ.ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸೋಮವಾರ ರಾತ್ರಿ 1.30ರಲ್ಲಿ ಕೋಡಿಹಳ್ಳಿ ಜಂಕ್ಷನ್‌ ಬಳಿಯ ಜೆ.ಡಿ.ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನಲ್ಲಿ ಮದ್ಯ ಸೇವಿಸಿ ಚಾಲಕರು ಹೊರ ಬಂದಾಗ ಈ ಕೃತ್ಯ ನಡೆದಿದೆ.

Tap to resize

Latest Videos

ಕಾರು ಚಾಲಕನ ಕೈ-ಕಾಲು ಕಟ್ಟಿ ನೇಣಿಗೆ, ಮಾಜಿ DCM ಸವದಿ ಸಹೋದರನ ಡ್ರೈವರ್ ಭೀಕರ ಹತ್ಯೆ

ತನ್ನ ಕುಟುಂಬದ ಜತೆ ದೂಪನಹಳ್ಳಿಯಲ್ಲಿ ನೆಲೆಸಿದ್ದ ಮೃತ ಮಂಜುನಾಥ್‌, ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ಮದ್ಯ ವ್ಯಸನಿ ಆಗಿದ್ದ ಆತ, ಪ್ರತಿದಿನ ರಾತ್ರಿ ಮದ್ಯ ಸೇವಿಸಿ ಮನೆಗೆ ತೆರಳುತ್ತಿದ್ದ. ಅಂತೆಯೇ ಕೋಡಿಹಳ್ಳಿ ಜಂಕ್ಷನ್‌ ಸಮೀಪದ ಜೆ.ಜಿ.ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ತೆರಳಿ ರಾತ್ರಿ ಮಂಜುನಾಥ್‌ ಮದ್ಯ ಸೇವಿಸಿದ್ದಾನೆ. ಬಳಿಕ ಬಾರ್‌ನಿಂದ ಹೊರ ಬಂದ ಆತ, ಕುಡಿದ ಅಮಲಿನಲ್ಲಿ ಮಧುಸೂದನ್‌ ಆಟೋ ಹತ್ತಿ ಕುಳಿತಿದ್ದಾನೆ. ಅದೇ ಹೊತ್ತಿಗೆ ಕಂಠಮಟ ಮದ್ಯ(Alcohol) ಸೇವಿಸಿ ಬಾರ್‌ನಿಂದ ಹೊರ ಬಂದ ಮಧುಸೂದನ್‌, ಹಿತೇಶ್‌ಗೌಡ ಆರೋಪಿಗಳು, ಮಂಜುನಾಥ್‌ಗೆ ಆಟೋದಿಂದ ಕೆಳಗೆ ಇಳಿಯುವಂತೆ ಹೇಳಿದ್ದಾರೆ. ಇದಕ್ಕೆ ಆತ ಆಕ್ಷೇಪಿಸಿದ್ದರಿಂದ ಜಗಳ ಶುರುವಾಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿಗಳು(Accused), ಮಂಜುನಾಥ್‌ ತಲೆಗೆ ಸಿಮೆಂಟ್‌ ಇಟ್ಟಿಗೆ ಹಾಗೂ ಕಲ್ಲಿನಿಂದ ಹೊಡೆದಿದ್ದಾರೆ. ತೀವ್ರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಹಣಕ್ಕಾಗಿ ಹೆಂಡತಿಯನ್ನೇ ಕೊಂದು ಹಾಕಿದ ಪಾಪಿ ಗಂಡ

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಮಾ.4 ರಂದು ನಡೆದಿದ್ದ ಮಹಿಳೆಯ ಕೊಲೆ(Murder) ಪ್ರಕರಣದ ರಹಸ್ಯ ಬಯಲಾಗಿದೆ. ಹೌದು, ಘಟನೆ ಹನ್ನೆರಡು ದಿನಗಳ ನಂತರ ಕೊಲೆ ರಹಸ್ಯ ಬಯಲಾಗಿದೆ. ಹೆಂಡತಿಯ ರೇಪ್ & ಮರ್ಡರ್(Rape and Murder) ಆಗಿದೆ ಅಂತ ದೂರು ನೀಡಿದ ಆಕೆಯ ಗಂಡನೇ ಹಂತಕನಾಗಿದ್ದಾನೆ. ಬಸವರಾಜ ಎಂಬಾತನೇ ಹೆಂಡತಿಯನ್ನ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. 

ಹೌದು, ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಮಾ.4 ರಂದು ಹೊಲದಲ್ಲಿ ಗೋದಿಗೆ ನೀರುಣಿಸುತ್ತಿದ್ದ ಮಹಿಳೆಯ(Women) ಬರ್ಬರ ಹತ್ಯೆ ನಡೆದಿತ್ತು. ಕಬ್ಬು ಮಾರಾಟದ ಹಣ ಆಕೆಯ ಅಕೌಂಟ್‌ಗೆ ಜಮೆ ಆಗಿತ್ತು. ಹಣಕ್ಕಾಗಿ ಗಂಡ ತನ್ನ ಹೆಂಡತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದನು. ಘಟನೆಯಲ್ಲಿ ಶಾಮಲಾ(33) ಎಂಬ ಮಹಿಳೆಯ ಕೊಲೆ ಮಾಡಲಾಗಿತ್ತು. 

ಬಟ್ಟೆ ಬಿಚ್ಚಿದ ಸ್ಥಿತಿಯಲ್ಲಿ ಶವ(Deadbody) ಪತ್ತೆಯಾಗಿತ್ತು. ರೇಪ್ & ಮರ್ಡರ್ ಅಂತ ಗಂಡ ಹಾಗೂ ಮನೆಯವರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆ ಆರಂಭಿಸಿದ್ದ ಪೊಲೀಸರು ಇದೀಗ ಮಹಿಳೆಯನ್ನ ಕೊಲೆ ಮಾಡಿದ್ದು ಆಕೆಯ ಗಂಡನೇ ಎಂದು ಹೇಳಿದ್ದಾರೆ. 

Gadag Crime: ಹೆಂಡ್ತಿಗೆ 23 ಸಲ ಮಚ್ಚು ಬೀಸಿ ಕೊಲ್ಲಲೆತ್ನಿಸಿದ ಇಜಾಜ್‌ ಅರೆಸ್ಟ್‌

ತನಿಖೆ ಆರಂಭಿಸಿದ ಪೊಲೀಸರಿಗೆ(Police) ಗಂಡನೇ ಕೊಲೆ ಮಾಡಿರುವ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ  ಬಸವರಾಜನನ್ನ ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಕಬ್ಬಿನ ಹಣ ಕೊಡದಿದ್ದಕ್ಕೆ ಹೆಂಡತಿಯನ್ನು ಕೊಂದು ರೇಪ್ & ಮರ್ಡರ್‌ ಸ್ಟೋರಿ ಕಟ್ಟಿದ್ದ ಪತಿ ಬಸವರಾಜ. 

ಹೆಂಡತಿ ಸತ್ತ ನಂತರ ಆಕೆಯ ಬ್ಲೌಜ್ ಬಿಚ್ಚಿ, ಸೀರೆ ಮೇಲೆತ್ತಿ ರೇಪ್ ಎಂದು ಬಿಂಬಿಸಲು ಯತ್ನಿಸಿದ್ದ ಪತಿ ಬಸವರಾಜ. ಕುಡಿತದ ಚಟದಿಂದ ಹಣ ಹಾಳು ಮಾಡ್ತಾನೆ ಅಂತ ಶಾಮಲಾ ಗಂಡನಿಗೆ ಹಣ ಕೊಡಲು ಹಿಂದೇಟು ಹಾಕಿದ್ದಳು. ಹಣ ಕೊಡದಕ್ಕೆ ಹೆಂಡತಿಯನ್ನೇ ಕೊಂದು ಹಾಕಿದ್ದ ಪಾಪಿ ಗಂಡ. ಒಮ್ಮೆ ಹೆಂಡತಿ ಇನ್ನೊಮ್ಮೆ ತಾನು ಗ್ರಾಮ ಪಂಚಾಯತ್ ಸದಸ್ಯನಾಗಿದ್ದ ಆರೋಪಿ ಬಸವರಾಜ. 
 

click me!