ಕುಂಭಮೇಳ;  ಕೊರೋನಾ ಸೋಂಕಿತ 19 ಮಂದಿ ಆಸ್ಪತ್ರೆಯಿಂದ ಪರಾರಿ, ಯಾವ ರಾಜ್ಯದವರು?

By Suvarna News  |  First Published Apr 18, 2021, 3:09 PM IST

ಕೊರೋನಾ ಎರಡನೇ ಅಲೆ ಅಬ್ಬರ/  ಕೊರೋನಾ ನಡುವೆ ಕುಂಭಮೇಳ ಆಯೋಜನೆ/ ಕುಂಭಮೇಳದಲ್ಲಿ ಭಾಗವಹಿಸಿ ಕೊರೋನಾ ಸೋಂಕು ತಗುಲಿದ್ದವರು ಆಸ್ಪತ್ರೆಯಿಂದಲೇ ಎಸ್ಕೇಪ್/ ರಾಜಜಸ್ಥಾನ ಮೂಲದ ನಿವಾಸಿಗಳು


ಡೆಹ್ರಾಡೂನ್ (ಏ. 18) ಕೊರೋನಾ ಆತಂಕದ ನಡುವೆ ಹರಿದ್ವಾರದಲ್ಲಿ ಕುಂಭಮೇಳ ನಡೆದಿದೆ.  ಕೊಂಚ  ತಡವಾಗಿ ಎಚ್ಚರಿಕೆ ತೆಗೆದುಕೊಂಡು ಕುಂಭ  ಮೇಳವನ್ನು ಅರ್ಧಕ್ಕೆ ಸ್ಥಗಿತಮಾಡಲಾಗಿತ್ತು.

ಕುಂಭಮೇಳ ಕೊರೋನಾ ಸೂಪರ್ ಸ್ಪ್ರೆಡರ್  ಆಗಬಹುದು ಎಂದು ಹೇಳಲಾಗಿತ್ತು.  ಕುಂಭಮೇಳದಲ್ಲಿ  ಭಾಗವಹಿಸಿ ಕೊರೋನಾ ಸೋಂಕಿಗೆ  ಸಿಲುಕಿದ್ದವರು ಆಸ್ಪತ್ರೆ ಸೇರಿದ್ದರು. ಆದರೆ ಸೋಂಕು ಹೊತ್ತುಕೊಂಡೆ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದಾರೆ.

Latest Videos

undefined

COVID-19 ಸೋಂಕಿನಿಂದ ಬಳಲುತ್ತಿದ್ದ 19 ಜನ ರೋಗಿಗಳು ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾರೆ. ರಾಜಸ್ಥಾನದ  ನಿವಾಸಿಗಳು  ತಪ್ಪಿಸಿಕೊಂಡಿದ್ದು ಆಸ್ಪತ್ರೆ ಸಿಬ್ಬಂದಿ ಮತ್ತು ಪೊಲೀಸರಿಗೆ ದೊಡ್ಡ ತಲೆನೋವಿ ತಂದಿದೆ.

ಕರ್ನಾಟಕದಲ್ಲಿ ಕೊರೋನಾ ಪರಿಸ್ಥಿತಿ ಏನಾಗಿದೆ? 

ತಪ್ಪಿಸಿಕೊಂಡವರ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.   ತೆಹ್ರಿ ಜಿಲ್ಲೆಯ ಅಧಿಕಾರಿಗಳು  ಇಲ್ಲಿಂದ ತಪ್ಪಿಸಿಕೊಂಡವರ ಬಗ್ಗೆ ರಾಜಸ್ಥಾನ ಸರ್ಕಾರಕ್ಕೂ ಮಾಹಿತಿ ನೀಡಿದ್ದಾರೆ. ಹರಿದ್ವಾರ, ಉಜ್ಜಯಿನಿ, ನಾಸಿಕ್, ಪ್ರಯಾಗ್ ರಾಜ್ ನಲ್ಲಿ ಜನ ಸೇರಿದ್ದರು.   ನಾಲ್ಕು ತಿಂಗಳ ಕಾಲ ಕುಂಭ ಮೇಳ ವಿವಿಧ ಹಂತದಲ್ಲಿ ನಡೆಯುವುದರಲ್ಲಿತ್ತು.

ಸುಪ್ರೀಂಗೆ ವಕೀಲರ ಅರ್ಜಿ;  ಕುಂಭ ಮೇಳದಲ್ಲಿ ಲಕ್ಷಾಂತರ ಜನ ಸೇರುವುದನ್ನು ತಡೆಯಲಾಗದ ಸರ್ಕಾರಗಳ ಮೇಲೆ ಯಾವ ಕ್ರಮ ತೆಗೆದುಕೊಳ್ಳಬೇಕು?  ಧಾರ್ಮಿಕ ಸಭೆ ಸಮಾರಂಭ ಆಯೋಜನೆಯಾಗದಂತೆ ನೋಡಿಕೊಲ್ಳಬೇಕು ಎಂದು ಆಗ್ರಹಿಸಿ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ.

ವಕೀಲ ವಿಶಾಲ್ ತಿವಾರಿ ಮನವಿ ಸಲ್ಲಿಸಿದ್ದು ಕಳೆದ ವರರ್ಷದ ತಬ್ಲಿಘಿ ಜಮಾತ್ ಸಭೆ ಟೀಕೆಗೆ ಒಳಗಾಗಿತ್ತು. ಮತ್ತೆ ಈ ವರ್ಷ  ಅಂಥದ್ದೇ ಕೊರೋನಾ ಆತಂಕದ ಸ್ಥಿತಿಯಲ್ಲಿ ಕುಂಭಮೇಳ ನಡೆದಿದೆ. ಚುನಾವಣೆ ಹಮ್ಮಿಕೊಂಡಿರುವ ಆಯೋಗಕ್ಕೂ ಸೂಕ್ತ ನಿರ್ದೇಶನ ನೀಡಬೇಕು ಎಂದು ವಕೀಲರು ಕೇಳಿಕೊಂಡಿದ್ದಾರೆ. 

ಕುಂಭಮೇಳದಲ್ಲಿ ಸೇರಿದ್ದ 1700  ಕ್ಕೂ ಅಧಿಕ ಮಂದಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕುಂಭ ಮೇಳ ಆಯೋಜನೆ ಮಾಡಿದ್ದನ್ನು ಟೀಕಿಸಿದ್ದರು. 

 

 

click me!