ಕ್ರಿಕೆಟ್‌ ಕಿಟಲ್ಲಿ ಡ್ರಗ್ಸ್‌ ಇಟ್ಟು ಸರಬರಾಜು..!

By Kannadaprabha NewsFirst Published Apr 17, 2021, 7:48 AM IST
Highlights

ಬೆಂಗಳೂರಿನಿಂದ ಗಲ್ಫ್‌ ದೇಶಗಳಿಗೆ ಸಪ್ಲೈ| ಕೇರಳದ ಕಾಸರಗೋಡು ನಿವಾಸಿ ಎಸ್‌.ನಶಾಂತ್‌ ಬಂಧಿತ| ಆರೋಪಿಯಿಂದ 20 ಲಕ್ಷ ಮೌಲ್ಯದ ಮಾದಕ ವಸ್ತು ಅಂಪೇಟಮೈನ್‌ ಜಪ್ತಿ| ಮಾದಕ ವಸ್ತು ಮಾರಾಟ ಮಾಡುವುದನ್ನೇ ದಂಧೆಯನ್ನಾಗಿಸಿಕೊಂಡಿದ್ದ ಆರೋಪಿ| 

ಬೆಂಗಳೂರು(ಏ.17): ಕ್ರಿಕೆಟ್‌ ಸಾಮಗ್ರಿಗಳಲ್ಲಿ ಮಾದಕ ವಸ್ತುಗಳನ್ನಿಟ್ಟು ಗಲ್ಫ್‌ ದೇಶಗಳಿಗೆ ಕೊರಿಯರ್‌ ಮೂಲಕ ಪೂರೈಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬ ಕೇಂದ್ರ ಮಾದಕ ನಿಯಂತ್ರಣ ದಳದ(ಎನ್‌ಸಿಬಿ) ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ.

ಕಾಸರಗೋಡು ನಿವಾಸಿ ಎಸ್‌.ನಶಾಂತ್‌ ಬಂಧಿತ. ಆರೋಪಿಯಿಂದ 20 ಲಕ್ಷ ಮೌಲ್ಯದ ಮಾದಕ ವಸ್ತು ಅಂಪೇಟಮೈನ್‌ ಜಪ್ತಿ ಮಾಡಲಾಗಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು: ಕೇರಳದಿಂದ ಬಸ್ಸಿನ ಲಗೇಜ್‌ ಬಾಕ್ಸಲ್ಲಿ ಗಾಂಜಾ ಸಾಗಾಟ

ಆರೋಪಿ ಮಾದಕ ವಸ್ತು ಮಾರಾಟ ಮಾಡುವುದನ್ನೇ ದಂಧೆಯನ್ನಾಗಿಸಿಕೊಂಡಿದ್ದ. ಬೆಂಗಳೂರಿನಿಂದ ದೋಹಾ ಮತ್ತು ಕತಾರ್‌ ದೇಶಕ್ಕೆ ಮಾದಕ ವಸ್ತುವನ್ನು ಕುಝಿಯಲ್‌ ಎಂಬ ಹೆಸರಿಗೆ ಕೊರಿಯರ್‌ ಕಳಿಸುತ್ತಿದ್ದ. ಯಾರಿಗೂ ಅನುಮಾನ ಬಾರದಂತೆ ಕ್ರಿಕೆಟಿಗರು ಬಳಸುವ ಕೈಗವಸು ಹಾಗೂ ಸುರಕ್ಷ ಕವಚದಲ್ಲಿ ಮಾದಕ ವಸ್ತುವನ್ನಿಟ್ಟು ಪೂರೈಕೆ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮಂಗಳೂರಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಕಲೆ ಹಾಕ ಬೇಕಿದೆ ಎಂದು ಎನ್‌ಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
 

click me!