ರಾಮನಗರ: ಸಲಿಂಗ ಕಾಮಕ್ಕೆ ಬಲಿಯಾದನೇ ಅಪ್ರಾಪ್ತ?

By Suvarna News  |  First Published Jun 5, 2022, 5:54 PM IST

ವಿದ್ಯಾಭ್ಯಾಸದ ಜೊತೆಗೆ ಬಿಡುವಿನ ಸಮಯದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ತಾಯಿಗೆ ಆಸರೆಯಾಗಿದ್ದ ಮಗ ಕೆಲಸವಿದೆ ಎಂದು ಹೊರಹೋದ ಬಳಿಕ ವಾಪಸ್ ಬರಲಿಲ್ಲ. ರಾಮನಗರದ ಈ ಕೇಸ್ ಗೆ ಇದೀಗ ಟ್ವಿಸ್ಟ್ ಸಿಕ್ಕಿದೆ.


ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್

ರಾಮನಗರ (ಜೂ.5): ಆ ತಾಯಿಗೆ, ಆತ ಒಬ್ಬನೇ ಮಗ. ವಿದ್ಯಾಭ್ಯಾಸದ ಜೊತೆಗೆ ಬಿಡುವಿನ ಸಮಯದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ತಾಯಿಗೆ ಆಸರೆಯಾಗಿದ್ದ. ಆದರೆ ಅದೊಂದು ರಾತ್ರಿ ಸಣ್ಣದೊಂದು ಕೆಲಸವಿದೆ ಎಂದು ಹೇಳಿ ಹೋದವನು ವಾಪಾಸ್ ಮನೆಗೆ ಬಂದಿಲ್ಲ. ಈಗ ಬರುತ್ತಾನೆ, ನಾಳೆ ಬರುತ್ತಾನೇ ಎಂದು ಕಾದು ಕಾದು ಆ ತಾಯಿ ರೋಸಿ ಹೋಗಿದ್ದಾಳೆ. ಇನ್ನು ಆ ಯುವಕನ ಮಿಸ್ಸಿಂಗ್ ಕೇಸ್ ಮತ್ತೊಂದು ತಿರುವು ಪಡೆದುಕೊಂಡಿದ್ದು, ಹೋಮೊ ಸೆಕ್ಸ್ ಗೆ ಏನಾದರೂ ಬಲಿಯಾದ ಎಂಬ ಅನುಮಾನ ಕೂಡ ಕಾಡುತ್ತಿದೆ.  

Tap to resize

Latest Videos

ತನಗೆ ಪರಿಚಯಸ್ಥ ವಕೀಲನ ಕಚೇರಿ ಸ್ಥಳಾಂತರ ಇದೆ. ಹೀಗಾಗಿ ಹೋಗಿ ಬರುತ್ತೇನೆ ಎಂದು ಮನೆಯವರ ಬಳಿ ಹೇಳಿ ಹೋದ ಯುವಕನೊಬ್ಬ ಇದುವರೆಗೂ ಮನೆಗೆ ವಾಪಾಸ್ ಬಂದಿಲ್ಲ. ಅಂದಹಾಗೆ ರಾಮನಗರ ಜಿಲ್ಲೆ ಕನಕಪುರ ನಗರದ ಎಂಜಿ ರಸ್ತೆಯಲ್ಲಿ ವಾಸವಾಗಿರೋ ಗಾರ್ಮೆಂಟ್ಸ್ ವೊಂದರಲ್ಲಿ ಕೆಲಸ ಮಾಡುವ ಆಶಾ ಎಂಬಾ ಮಹಿಳೆಯ 17 ವರ್ಷದ ಮಗ ನಾಗೇಂದ್ರ ಪ್ರಸಾದ್ ಅಲಿಯಾಸ್ ಶ್ರೇಯಸ್ ಎಂಬಾತ  ಪತ್ತೆಯಾಗಿದ್ದು, ಮಗನ ಸುಳಿವು ಸಿಗದೇ ತಾಯಿ ದಿಕ್ಕಿ ತೋರದಂತೆ ಆಗಿದೆ.

ನಾಡಿನ ಜನರ ಚಡ್ಡಿ ಬಿಚ್ಚಿಸೋ ಕೆಲಸ ಮಾಡ್ಬೇಡಿ, ವಿಪಕ್ಷಕ್ಕೆ KUMARASWAMY ಎಚ್ಚರಿಕೆ 

ಅಂದಹಾಗೆ ಮೇ 19ರ ರಾತ್ರಿ 10 ಗಂಟೆ ಸುಮಾರಿಗೆ ತನಗೆ ಪರಿಚಯದ ವಕೀಲ ಶಂಕರೇಗೌಡ ಎಂಬಾತ ತನ್ನ ಕಚೇರಿ ಸ್ಥಳಾಂತರದ ಹಿನ್ನೆಲೆಯಲ್ಲಿ ಕರೆದಿದ್ದಾನೆ. ಹೋಗಿ ಬರುತ್ತೇನೆ ಎಂದು ತಾಯಿ ಆಶಾ ಬಳಿ ಹೇಳಿ ನಾಗೇಂದ್ರ ಪ್ರಸಾದ್ ಹೋಗಿದ್ದಾನೆ. ಆದರೆ ರಾತ್ರಿ ಎಷ್ಟು ಹೊತ್ತು ಆದರೂ ವಾಪಾಸ್ ಮನೆಗೆ ಬಂದಿಲ್ಲ. ಮಾರಾನೇ ದಿನ ಬೆಳಗ್ಗೆ ನಾಗೇಂದ್ರನ ಮೊಬೈಲ್ ಗೂ ಕರೆ ಮಾಡಿದ್ರು ಕರೆ ಸ್ವೀಕಾರ ಮಾಡಿಲ್ಲ.

 ಹೀಗಾಗಿ ವಕೀಲ ಶಂಕರೇಗೌಡ ಎಂಬಾತ ಬಳಿ ಹೋಗಿ ಕೇಳಿದ್ರು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ. ಹೀಗಾಗಿ ಸಾಕಷ್ಟು ಕಡೆ ಹುಡುಕಾಟ ನಡೆಸಿದ್ರು ಮಗ ನಾಗೇಂದ್ರನ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮೇ 24ರಂದು ಆಶಾ ಕನಕಪುರ ಟೌನ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ಸಂಬಂಧ ಕನಕಪುರ ಟೌನ್ ಪೊಲೀಸರು ವಕೀಲ ಶಂಕರೇಗೌಡ ಹಾಗೂ ಮೈಸೂರು ಮೂಲದ ಅರುಣ್ ಎಂಬಾತನ್ನ ಬಂಧಿಸಿ ಸಾಕಷ್ಟು ವಿಚಾರಣೆ ಮಾಡುತ್ತಿದ್ದಾರೆ.

ಅಂದಹಾಗೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಳೇ ಗಬ್ಬಾಡಿ ಗ್ರಾಮದ ಶಂಕರೇಗೌಡ, ಕನಕಪುರದಲ್ಲಿ ವಕೀಲ ವೃತ್ತಿ ಮಾಡುತ್ತಾನೆ. ಈಗಾಗಲೇ ಮದುವೆಯಾಗಿ ಮಗು ಇದ್ದರು ಸಲಿಂಗಕಾಮ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.  ಹೀಗಾಗಿಯೇ ಫೇಸ್ಬುಕ್ ಮೂಲಕ ಪರಿಚಯವಾದ ಮೈಸೂರು ಮೂಲದ ಅರುಣ್ ಎಂಬಾ ಯುವಕನನ್ನ ಪರಿಚಯ ಮಾಡಿಕೊಂಡು ಒಂದೂವರೆ ವರ್ಷದಿಂದ ಸಲಿಂಗಕಾಮ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.

40% ಭ್ರಷ್ಟಾಚಾರಕ್ಕೆ ಮಂತ್ರಿಸ್ಥಾನ ಕಳೆದುಕೊಂಡ ಈಶ್ವರಪ್ಪನಿಂದ ನಾನು ಪಾಠ ಕಲಿಬೇಕಾ?

ಅದೇ ರೀತಿ ಫೇಸ್ ಬುಕ್ ಮೂಲಕವೇ ಪರಿಚಯವಾದ ನಾಗೇಂದ್ರನನ್ನು ತನ್ನ ಕಚೇರಿಗೆ ಮೇ 19ರಂದು ಕರೆದು ಲೈಂಗಿಕ ಕ್ರಿಯೆ ಮಾಡಲು ಮುಂದಾಗಿದ್ದಾನೆ. ಆದರೆ ಅದಕ್ಕೆ ನಾಗೇಂದ್ರ ಪ್ರಸಾದ್ ವಿರೋಧ ವ್ಯಕ್ತಪಡಿಸಿದ್ದಾನೆ. ಆದರೆ ಆದಾದ ನಂತರ ಯುವಕ ನಾಗೇಂದ್ರನ ಸುಳಿವು ಇಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ.

ಹೀಗಾಗಿ ತಾಯಿ ಆಶಾ ದೂರಿನ ಅನ್ವಯ ಕಿಡ್ನಾಪಿಂಗ್ ಮತ್ತು ಪೋಕ್ಸೊ ಆಕ್ಟ್ ಅಡಿ ವಕೀಲ ಶಂಕರೇಗೌಡ ಹಾಗು ಅರುಣ್ ಎಂಬಾತನ್ನ ಬಂಧಿಸಿದ್ದಾರೆ. ಆದರೆ ನಾಗೇಂದ್ರ ಪ್ರಸಾದ್ ಮಾತ್ರ ಎಲ್ಲಿದ್ದಾನೆ, ಏನಾಗಿದ್ದಾನೆ. ಎಂಬುದು ಇದುವರೆಗೂ ಪತ್ತೆಯಾಗಿಲ್ಲ. ವಕೀಲ ಶಂಕರೇಗೌಡ ಕೂಡ ಬಾಯಿ ಬಿಡುತ್ತಿಲ್ಲ. ಈ ನಿಟ್ಟಿನಲ್ಲಿ ಪ್ರಕರಣ ಬೇದಿಸಲು ವಿಶೇಷ ತಂಡವನ್ನ ಕೂಡ ರಚನೆ ಮಾಡಲಾಗಿದೆ.

ಒಟ್ಟಾರೆ ಮಗ ನಾಪತ್ತೆಯಾಗಿರೋದು ತಾಯಿಗೆ ದಿಕ್ಕು ತೋಚದಂತೆ ಆಗಿದ್ದು, ಮಗ ಏನಾಗಿದ್ದನೋ ಎಂಬ ಆತಂಕಕ್ಕೆ ತಾಯಿಗೆ ಕಾಡುತ್ತಿದೆ. ಇನ್ನು ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರೆಸಿದ್ದಾರೆ.

click me!