*ಕಾಲೇಜಿಗೆ ಹೋಗುವಾಗ ಪುಂಡರು ಕಿರುಕುಳ
*ಪೋಷಕರ ಬಳಿ ಹೇಳಿಕೊಂಡಿದ್ದ ವಿದ್ಯಾರ್ಥಿನಿ
*ನೊಂದ ಯುವತಿ ರಾಧಿಕಾ ನೇಣಿಗೆ ಶರಣು
ಚಿತ್ರದುರ್ಗ (ಡಿ. 21) : ಪುಂಡರ ಕಿರುಕುಳದಿಂದ (Mischief) ನೊಂದ ವಿದ್ಯಾರ್ಥಿನಿ ನೇಣಿಗೆ ಶರಣಾದ (Suicide) ಘಟನೆ ಚಿತ್ರದುರ್ಗದ ಹೊಸದುರ್ಗ ತಾಲೂಕಿನ (Hosadurga) ಶೀರನಕಟ್ಟೆ ಗ್ರಾಮದಲ್ಲಿ ನಡೆದಿದೆ. ಶೀರನಕಟ್ಟೆ ಗ್ರಾಮದ ಮನೆಯಲ್ಲಿ 17 ವರ್ಷದ ವಿದ್ಯಾರ್ಥಿನಿ ರಾಧಿಕಾ (Radhika) ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿದ್ಯಾರ್ಥಿನಿ ಕಾಲೇಜಿಗೆ ಹೋಗುವಾಗ, ಬರುವಾಗ ಹಿಂಬಾಲಿಸಿ ಪುಂಡರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಮುದ್ದಪ್ಪ, ಸುದೀಪ್, ಕೋಟಿ, ಅಭಿ ಎಂಬುವರು ಯುವತಿ ಕಾಲೇಜಿಗೆ ಹೋಗುವಾಗ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿನಿ ಕಾಲೇಜಿಗೆ ಹೋಗುವಾಗ ಜಡೆ ಹಿಡಿದು ಎಳೆಯುವುದು ಸೇರಿದಂತೆ ಅಶ್ಲೀಲವಾಗಿ ( Dirty Word) ಮಾತಾಡಿ ಪುಂಡರು ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಮೃತ ಬಾಲಕಿ ಪೋಷಕರ ಬಳಿ ಕೂಡ ಹೇಳಿಕೊಂಡಿದ್ದಳು ಎಂದು ತಿಳಿದುಬಂದಿದೆ. ಈ ಬೆನ್ನಲ್ಲೇ ಮೃತ ಬಾಲಕಿಯ ಪೋಷಕರು ಹೊಸದುರ್ಗ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ಶೀಘ್ರದಲ್ಲೇ ಧರಣಿ ನಡೆಸಲಾಗುವುದು ಎಂದು ತಿಳಿದುಬಂದಿದೆ.
ಠಾಣೆಯಿಂದ ಎಸ್ಕೇಪ್ ಆಗಿ ಆರೋಪಿ ಆತ್ಮಹತ್ಯೆ
ಪತ್ನಿ ಆತ್ಮಹತ್ಯೆ ಪ್ರಕರಣ ಸಂಬಂಧ ಬಂಧಿತನಾಗಿದ್ದ ಕಾರ್ಪೆಂಟರ್‌ವೊಬ್ಬ ಸೋಮವಾರ (ಡಿ. 20) ಬೆಳಗ್ಗೆ ಪೊಲೀಸ್ ಠಾಣೆಯಿಂದ ಸಿನಿಮೀಯ ಶೈಲಿಯಲ್ಲಿ ತಪ್ಪಿಸಿಕೊಂಡು 30 ಅಡಿ ಎತ್ತರದ ಸ್ಕೈವಾಕ್‌ನಿಂದ ಜಿಗಿದು ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಕೆ.ಆರ್.ಪುರದಲ್ಲಿ ನಡೆದಿದೆ. ಆನಂದಪುರದ ನಿವಾಸಿ ಶಕ್ತಿವೇಲು (32) ಮೃತ ದುರ್ದೈವಿ.
ಒಂದೂವರೆ ವರ್ಷದ ಹಿಂದೆ ತಮಿಳುನಾಡು ಮೂಲದ ಶಕ್ತಿವೇಲು ಹಾಗೂ ಸಂಗೀತಾ ಪ್ರೇಮ ವಿವಾಹವಾಗಿದ್ದರು. ವಿವಾಹದ (Marriage) ಬಳಿಕ ಸಣ್ಣಪುಟ್ಟವಿಚಾರಗಳಿಗೆ ಶಕ್ತಿವೇಲು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಶನಿವಾರವೂ ಸತಿ-ಪತಿ ಜಗಳವಾಡಿದ್ದರು. ಆಗ ಬೇಸರಗೊಂಡ ಸಂಗೀತಾ(30), ತನ್ನ ತಂದೆಗೆ ವಾಟ್ಸಾಪ್ ನಲ್ಲಿ ಮೆಸೇಜ್ ಕಳುಹಿಸಿ ನೇಣು ಬಿಗಿದುಕೊಂಡಿದ್ದಳು.
Suicide Attempt Rescue: ಆತ್ಮಹತ್ಯೆಗೆ ಯತ್ನಿಸಿದ ಸ್ನೇಹಿತನ ರಕ್ಷಿಸಲು ಹೋದವನಿಗೆ ಗುಂಡು!
ಸಂಗೀತಾಳ ತಂದೆ ದೂರು ಆಧರಿಸಿ ಕೆ.ಆರ್.ಪುರ ಠಾಣೆಯಲ್ಲಿ ಐಪಿಸಿ 306(ಆತ್ಮಹತ್ಯೆಗೆ ಪ್ರಚೋದನೆ) ಹಾಗೂ ಐಪಿಸಿ 498 (ವರದಕ್ಷಿಣೆ ಕಿರುಕುಳ) ಆರೋಪಡಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಬಂಧನ ಭೀತಿಯಿಂದ ಪರಾರಿ ಆಗಿದ್ದ ಶಕ್ತಿವೇಲು ಭಾನುವಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.
ಪ್ರೇಮಿ ಸಾವಿನ ಸುಳ್ಳು ಸುದ್ದಿಗೆ ಪ್ರೇಯಸಿ ಬಲಿ..!
ತಮ್ಮ ಮದುವೆಗೆ ವಿರೋಧಿಸಿದ್ದ ಪ್ರಿಯತಮೆ ಕುಟುಂಬದವರ ಒಲೈಕೆಗೆ ಪೊಲೀಸ್(Police) ಹೆಸರಿನಲ್ಲಿ ಗೆಳೆಯನಿಂದ ಯುವಕನೊಬ್ಬ ಮಾಡಿದ ಹುಸಿ ಕರೆ ಕೊನೆಗೆ ಪ್ರಿಯತಮೆ ಸಾವಿಗೆ ಕಾರಣವಾದ ದಾರುಣ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಬಿದರಕಲ್ಲು ಸಮೀಪ ಬುಧವಾರ ನಡೆದಿದೆ.
ಪ್ರಿಯಕರ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾನೆ ಎಂಬ ಸುಳ್ಳು ಸುದ್ದಿ ನಂಬಿ ದೊಡ್ಡಬಿದರಕಲ್ಲು ಸಮೀಪದ ಸುವರ್ಣ ನಗರದ ನಿವಾಸಿ ಸಾಕಮ್ಮ(24) ಆತ್ಮಹತ್ಯೆ ಮಾಡಿಕೊಂಡರೆ, ಇತ್ತ ಸುಳ್ಳು ಕರೆ ಮಾಡಿಸಿ ಪ್ರಿಯತಮೆ ಜೀವಕ್ಕೆ ಎರವಾದ ಆರೋಪದ ಮೇರೆಗೆ ಮೃತಳ ಪ್ರಿಯಕರ ಕಮಲಾ ನಗರದ ಅರುಣ್ ಹಾಗೂ ಆತನ ಗೆಳೆಯ ಗೋಪಾಲ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ.
Accident in Bengaluru: ನಡುರಾತ್ರಿ ಬೈಕ್‌ಗಳ ನಡುವೆ ಭೀಕರ ಡಿಕ್ಕಿ: ಇಬ್ಬರು ಬಲಿ!
ಹಾಸನ(Hassan) ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಾಕಮ್ಮ ಹಾಗೂ ಅರುಣ್, ಯಶವಂತಪುರ ಸಮೀಪದ ಮೆಟ್ರೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಒಂದೆಡೆ ಕೆಲಸ ಮಾಡುತ್ತಿದ್ದರಿಂದ ಇಬ್ಬರ ಮಧ್ಯೆ ಸ್ನೇಹವಾಗಿ ಬಳಿಕ ಪ್ರೇಮಕ್ಕೆ(Love) ತಿರುಗಿತ್ತು. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಅವರು, ಕೊನೆಗೆ ಮದುವೆಯಾಗಲು(Marriage) ನಿರ್ಧರಿಸಿದ್ದರು. ಅಂತೆಯೇ ತಮ್ಮ ಮನೆಯಲ್ಲಿ ತಮ್ಮ ಪ್ರೇಮ ವಿಚಾರವನ್ನು ಇಬ್ಬರು ಪ್ರಸ್ತಾಪಿಸಿದ್ದರು. ಆದರೆ ಈ ಪ್ರೇಮ ವಿವಾಹಕ್ಕೆ(Love Marriage) ಎರಡು ಕುಟುಂಬಗಳು ವಿರೋಧಿಸಿವೆ ಎಂದು ಪೊಲೀಸರು ಹೇಳಿದ್ದಾರೆ.