ಮಹಿಳೆ ದಿನಸಿ ಅಂಗಡಿ ನಡೆಸುತ್ತಿದ್ದು, ಅತ್ಯಾಚಾರದ ಆರೋಪಿಯಾಗಿರುವ ಆಕೆಯ ಮಗ ಅಪ್ರಾಪ್ತನಾಗಿರುವುದರಿಂದ ಆತನ ಗುರುತು ಪತ್ತೆಯಾಗಿಲ್ಲ. ಇನ್ನು, ಗುಂಡೇಟು ಬಿದ್ದಿರುವ ಮಹಿಳೆಯನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2021 ರಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದ (Rape) ಹದಿಹರೆಯದ ಬಾಲಕನ (Minor Boy) ತಾಯಿಯನ್ನ (Mother) ಸಂತ್ರಸ್ಥೆ (Survivor) ಶೂಟ್ (Shoot) ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ (National Capital) ದೆಹಲಿಯಲ್ಲಿ (Delhi) ನಡೆದಿದೆ. ಗುಂಡಿಕ್ಕಿ ಗಾಯಗೊಳಿಸಿದ 16 ವರ್ಷದ ಬಾಲಕಿಯನ್ನು ಇಂದು ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ. ರಾಷ್ಟ್ರ ರಾಜಧಾನಿಯ ಭಜನ್‌ಪುರ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಸಂಜೆ 5.30 ರ ಸುಮಾರಿಗೆ ಬಾಲಕಿ 50 ವರ್ಷದ ಮಹಿಳೆಯ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾಳೆ ಎಂದು ತಿಳಿದುಬಂದಿದೆ.
ಮಹಿಳೆ ದಿನಸಿ ಅಂಗಡಿ ನಡೆಸುತ್ತಿದ್ದು, ಅತ್ಯಾಚಾರದ ಆರೋಪಿಯಾಗಿರುವ ಆಕೆಯ ಮಗ ಅಪ್ರಾಪ್ತನಾಗಿರುವುದರಿಂದ ಆತನ ಗುರುತು ಪತ್ತೆಯಾಗಿಲ್ಲ. ಇನ್ನು, ಗುಂಡೇಟು ಬಿದ್ದಿರುವ ಮಹಿಳೆಯನ್ನು ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ದೌರ್ಜನ್ಯವೆಂದರೆ ಮಹಿಳೆಯರೇ ಹೆಚ್ಚಾಗಿ ನೋವು ಅನುಭವಿಸೋದೇಕೆ?
16 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ನೋಯ್ಡಾದಲ್ಲಿ ಆರೋಪಿ ಬಂಧನ
ಇನ್ನೊಂದೆಡೆ, ಉತ್ತರ ಪ್ರದೇಶದ ನೋಯ್ಡಾದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವಾಗಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಅತ್ಯಾಚಾರ ಮಾಡಿರುವ ಆರೋಪಿಯನ್ನು ಬಂಧಿಸಿರುವುದಾಗಿ ಯುಪಿ ಪೊಲೀಸರು ಜನವರಿ 7, 2023, ಅಂದರೆ ಇಂದು ಮಾಹಿತಿ ನೀಡಿದ್ದಾರೆ. ಸಂತ್ರಸ್ತೆಯ ತಂದೆಯ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದ್ದು, ವ್ಯಕ್ತಿ ಸಂತ್ರಸ್ತೆಯನ್ನು ತಮ್ಮ ಮನೆಯಿಂದ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ಥೆ ತಂದೆ ದೂರು ನೀಡಿದ್ದಾರೆ.
ತಮ್ಮ ಮಗಳನ್ನು ತಮ್ಮ ಮನೆಯಿಂದ ಕರೆದೊಯ್ದು, ಒತ್ತೆಯಾಳಾಗಿ ಇಟ್ಟುಕೊಂಡು ಆರೋಪಿ ಅತ್ಯಾಚಾರವೆಸಗಿದ್ದಾರೆ. ತನ್ನ ಬಾಲಕಿಗೆ ಆರೋಪಿಯ ಪರಿಚಯವತ್ತು ಎಂದು ಅಪ್ರಾಪ್ತ ವಯಸ್ಕಳ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಪೋಲಿಸ್ ಮೀನಾಕ್ಷಿ ಕಾಟ್ಯಾಯನ್ ಮಾಹಿತಿ ನೀಡಿದ್ದಾರೆ. ಇನ್ನು, ಸಂತ್ರಸ್ಥೆ ಅಪ್ರಾಪ್ತ ವಯಸ್ಸಿನವರಾಗಿರುವುದರಿಂದ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಡಿಸಿಪಿ ಮೀನಾಕ್ಷಿ ಕಾಟ್ಯಾಯನ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಾಡೆಲ್ ಆಗಬೇಕೆಂಬ ಕನಸಿನೊಂದಿಗೆ ನಗರಕ್ಕೆ ಬಂದ ಯುವತಿ ಮೇಲೆ ಅತ್ಯಾಚಾರ
ದೂರು ಸ್ವೀಕರಿಸಿದ ನಂತರ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದು, ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದೂ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ 16 ವರ್ಷದ ಬಾಲಕಿ ಮೇಲೆ ರೇಪ್..!
ಈ ರೀತಿ ಅತ್ಯಾಚಾರ ಘಟನೆ ಆಗಾಗ್ಗೆ ವರದಿಯಾಗುತ್ತಲೇ ಇರೋದು ನಿಜಕ್ಕೂ ಕಾನೂನು ಸುವ್ಯವಸ್ಥೆಯ ಮೇಲೆ ಅನುಮಾನ ಮೂಡುತ್ತದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಡಿಸೆಂಬರ್ 2022ರಲ್ಲಿ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ 8 ಮಂದಿಯನ್ನು ಬಂಧಿಸಲಾಗಿತ್ತು. ಶುಕ್ರವಾರ ರಾತ್ರಿ ಮತ್ತು ಶನಿವಾರದ ನಡುವೆ ಈ ಘಟನೆ ನಡೆದಿದ್ದು, ಆರೋಪಿಗಳು ಬಾಲಕಿಯನ್ನು ತಮ್ಮ ಹಳ್ಳಿಯಲ್ಲಿರುವ ಖಾಲಿ ಬಂಗಲೆಗೆ ಕರೆತಂದರು ಮತ್ತು ಮರುದಿನ ಬೆಳಗಿನ ಜಾವದವರೆಗೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: Maharashtra: 16 ವರ್ಷದ ಬಾಲಕಿ ಮೇಲೆ 12 ಗಂಟೆಗಳ ಕಾಲ ಸಾಮೂಹಿಕ ಅತ್ಯಾಚಾರ; 8 ಮಂದಿ ಬಂಧನ