Vijayapura: ಉರುಸ್ ವೇಳೆ ದಲಿತ ಯುವಕನನ್ನ ಕಟ್ಟಿ ಹಾಕಿ ಥಳಿತ: 14 ಜನರ ಬಂಧನ

By Govindaraj S  |  First Published Nov 12, 2022, 10:42 AM IST

ವಿಜಯಪುರ ತಾಲೂಕಿನ ಡೊಮನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ದಾವಲ್‌ ಮಲ್ಲಿಕ್‌ ಉರುಸು ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಈ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಸಾಗರ್‌ ಹರಿಜನ್‌ ಹಾಗೂ ಅಲ್ಲಿದ್ದ ಕೆಲ ಹುಡುಗರ ನಡುವೆ ಗಲಾಟೆ ನಡೆದಿದೆ.


ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ನ.12): ಹಬ್ಬ ಹರಿದಿನ, ಜಾತ್ರೆ-ಉರುಸ್‌ಗಳಲ್ಲಿ ಹಾಡುಗಳನ್ನ ಹಚ್ಚಿ ಡಾನ್ಸ್‌ ಮಾಡೋದು ಈಗೀನ ಟ್ರೆಂಡ್‌ ಆಗಿದೆ. ಜೊತೆಗೆ ಗಲಾಟೆಗಳಿಗು ಈ ಡಿಜೆ ಸಾಂಗ್‌ಗಳು ಕಾರಣವಾಗ್ತಿವೆ. ಕ್ಷುಲ್ಲಕ ಕಾರಣಕ್ಕೆ ಶುರುವಾಗೋ ವಾಗ್ವಾದಗಳು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ ಹೊಡೆದ ಬಡೆದಾಟಗಳಿಗೆ ಸಾಕ್ಷಿಯಾಗಿ ಬಿಡುತ್ವೆ. ಇಂಥದ್ದೆ ಘಟನೆಯೊಂದು ವಿಜಯಪುರ ಜಿಲ್ಲೆಯ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ ಡೋಮನಾಳ ಗ್ರಾಮದಲ್ಲಿ ನಡೆದಿದೆ. ಸವರ್ಣೀಯರು ದಲಿತ ಯುವಕನನ್ನ ಕಟ್ಟಿ ಥಳಿಸಿದ್ದಾರೆ. ಡಿಜೆ ಸೌಂಡ್‌ ಕಾರಣಕ್ಕೆ ದಲಿತ ಯುವಕನ ಮೇಲೆ ಹಲ್ಲೆ ನಡೆದಿರೋದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಪೊಲೀಸರು 14 ಜನರನ್ನ ಬಂಧಿಸಿ, ದಲಿತ ಕುಟುಂಬಕ್ಕೆ ರಕ್ಷಣೆ ನೀಡಿದ್ದಾರೆ.

Tap to resize

Latest Videos

ಉರುಸ್ ಕಾರ್ಯಕ್ರಮದಲ್ಲಿ ದಲಿತ ಯುವಕನಿಗೆ ಹಲ್ಲೆ: ವಿಜಯಪುರ ತಾಲೂಕಿನ ಡೊಮನಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ದಾವಲ್‌ ಮಲ್ಲಿಕ್‌ ಉರುಸು ಕಾರ್ಯಕ್ರಮ ಅದ್ದೂರಿಯಾಗಿ ನಡೆದಿತ್ತು. ಈ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಸಾಗರ್‌ ಹರಿಜನ್‌ ಹಾಗೂ ಅಲ್ಲಿದ್ದ ಕೆಲ ಹುಡುಗರ ನಡುವೆ ಗಲಾಟೆ ನಡೆದಿದೆ. ಪರಸ್ಪರ ವಾಗ್ವಾದ ಉಂಟಾಗಿತ್ತು. ಬಳಿಕ ಇದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ವೇಳೆ ಸಾಗರ್‌ ಮೇಲೆ ಕೆಲವರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಸಾಗರ್‌ ಹಾಗೂ ಆತನ ಸಹೋದರ ಪ್ರತಿರೋಧ ಒಡ್ಡಿದ್ದಾರೆ. ಬಳಿಕ ಸಾಗರ್‌ ನನ್ನ ಎಳೆದು ತಂದು ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ನೂರಾರು ಜನ ಸೇರಿದ್ದರು ಬಿಡಿಸಿಕೊಳ್ಳುವ ಪ್ರಯತ್ನವನ್ನ ಯಾರೊಬ್ಬರು ಮಾಡಿಲ್ಲ.

Vijayapura: ಪರೀಕ್ಷೆಯಲ್ಲಿ ಕಡಿಮೆ ಅಂಕ, ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!

ಡಿಜೆ ಸಾಂಗ್‌ ವಿಚಾರವಾಗಿ ಶುರುವಾದ ಗಲಾಟೆ: ದಲಿತ ಯುವಕ ಸಾಗರ್‌ ಥಳಿಸಿದ ಪ್ರಕರಣಕ್ಕೆ ಕಾರಣವಾಗಿರೋದು ಡಿಜೆ ಹಾಡು ಎನ್ನಲಾಗಿದೆ. ಉರುಸ್‌ ವೇಳೆ ಕೆಲ ಯುವಕರು ಡಿಜೆ ಹಾಕಿ ಡಾನ್ಸ್‌ ಮಾಡಿದ್ದಾರೆ. ಈ ವೇಳೆ ಸಾಗರ್‌ ಕೂಡ ಕುಣಿದು ಕುಪ್ಪಳಿಸಿದ್ದಾನೆ. ಆದ್ರೆ ಈ ವೇಳೆ ಡಿಜೆ ಇಟ್ಟುಕೊಂಡಿದ್ದ ಯುವಕರು ಹಾಡನ್ನ ಬಂದ್‌ ಮಾಡಿದ್ದಾರೆ. ಈ ವೇಳೆ ಹಾಡು ಬಂದ್‌ ಮಾಡಿದ್ದಕ್ಕೆ ಸಾಗರ್‌ ಕೋಪಗೊಂಡಿದ್ದಾನೆ. ಡಿಜೆ ಬಂದ್‌ ಮಾಡಿದ್ದು ಯಾರೆಂದು ಬೈದಿದ್ದಾನೆ. ಇದಕ್ಕೆ ಪ್ರತಿಯಾಗಿ ಡಿಜೆ ನಮ್ದು ನಾವು ಬಂದ್‌ ಮಾಡ್ತಿವಿ ಎಂದು ರಿಪ್ಲೈ ಬಂದಿದೆ. ಈ ವೇಳೆ ಸಾಗರ್‌ ಹಾಗೂ ಡಿಜೆ ಹೊಂದಿದ್ದ ಯುವಕನ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆ ಯುವಕರ ಗಲಾಟೆ ಕಂಡು ಅದನ್ನ ಅಲ್ಲೆ ಶಮನ ಮಾಡಬೇಕಿದ್ದ ಮುಖಂಡರು ಸುಮ್ಮನಾಗಿದ್ದಾರೆ.

ಮನೆಗೆ ಹೋದವನನ್ನ ಮತ್ತೆ ಎಳೆದು ತಂದ್ರು: ಡಿಜೆ ಸಲುವಾಗಿ ಗಲಾಟೆ ನಡೆದಾಗ ಸಾಗರ್‌ ಸಹೋದರ ಕೂಡ ಬಂದು ತಡೆಯೋದಕ್ಕೆ ಪ್ರಯತ್ನಿಸಿದ್ದಾನೆ. ಹಲ್ಲೆ ನಡೆದಾಗ ಹಲ್ಲೆ ನಡೆಸಿದವರ ವಿರುದ್ಧ ಪ್ರತಿರೋಧವನ್ನು ಸಹೋದರರು ತೋರಿಸಿದ್ದಾರೆ. ಅಲ್ಲಿಗೆ ಎಲ್ಲ ಮುಗಿದು ಸಾಗರ್‌ ಹಾಗೂ ಅವನ ಸಹೋದರ ಮನೆಗೆ ವಾಪಾಸ್‌ ಆಗಿದ್ದಾರೆ. ಆದ್ರೆ ಉರುಸುನಲ್ಲಿದ್ದ ಕೆಲವರು ಮತ್ತೆ ಸಾಗರ್‌ ಮನೆಗೆ ಹೋಗಿ ಸಾಗರ್‌ ನನ್ನ ಕರೆ ತಂದು ಥಳಿಸಿದ್ದಾರೆ. ಬಳಿಕ ಅಲ್ಲೆ ಇದ್ದ ಕಂಬಕ್ಕೆ ಸಾಗರ್‌ನನ್ನ ಕಟ್ಟಿಹಾಕಿ ವಿಕೃತಿ ಮೆರೆದಿದ್ದಾರೆ.

ಈ ಕಡೆಗೆ ತಲೆ ಹಾಕಲ್ಲ ಬಿಡಿ ಅಂದ್ರು ಬಿಡಲಿಲ್ಲ: ಕಂಬಕ್ಕೆ ಕಟ್ಟಿಹಾಕಿದಾಗ ಸಾಗರ್‌ ಈ ಕಡೆಗೆ ತಲೆ ಹಾಕಲ್ಲ ಬಿಟ್ಟು ಬಿಡಿ ಎಂದು ಬೇಡಿಕೊಂಡಿದ್ದಾನೆ. ಆದ್ರೆ ಯಾರೋಬ್ಬರು ಸಾಗರ್‌ ಮಾತನ್ನ ಕಿವಿಗೆ ಹಾಕಿಕೊಂಡಿಲ್ಲ. ಬದಲಿಗೆ ನಿನಗೆ ಬುದ್ಧಿ ಬರಬೇಕು ಅಂತಾ ನಿಂದಿಸಿ ಹಲ್ಲೆ ನಡೆಸಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದಾಗ ಅಲ್ಲೆ ನೂರಾರು ಜನರಿದ್ದರು ಗಲಾಟೆ ಬಿಡಿಸಿ ಕಳುಹಿಸುವ ಕೆಲಸ ಮಾಡಿಲ್ಲ. ಬದಲಿಗೆ ನಿಂತು ಮೋಜು ನೋಡಿದ್ದಾರೆ.

Vijayapura: ಭೀಮಾತೀರದಿಂದ ಜಿಲ್ಲಾ ಕೇಂದ್ರಕ್ಕೆ ಗನ್ ದಂಧೆ, ಖತರ್ನಾಕ್ ರೌಡಿಶೀಟರ್ ಬಂಧನ!

ವಿಡಿಯೋ ಮಾಡಿ ಹರಿಬಿಟ್ಟರು, 14 ಜನರ ಬಂಧನ: ದಲಿತ ಯುವಕನನ್ನ ಕಟ್ಟಿ ಹಾಕಿ ಹಲ್ಲೆ ನಡೆಸುವಾಗ ಅಲ್ಲೆ ಇದ್ದ ಕೆಲವರು ಇದನ್ನ ಮೊಬೈಲ್‌ನಲ್ಲಿ ಸೆರೆಹಿಡಿದು ಮಾಧ್ಯಮಗಳಿಗೆ ನೀಡಿದ್ದಾರೆ. ಬಳಿಕ ವಿವಾದ ಹಬ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗ್ರಾಮೀಣ ಠಾಣೆ ಸಿಪಿಐ ಸಂಗಮೇಶ ಪಾಲಬಾವಿ ಹಾಗೂ ಪಿಎಸ್‌ಐ ಉಪ್ಪಾರ್‌ ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ರಾತ್ರೋರಾತ್ರಿ ಹಲ್ಲೆ ನಡೆಸಿದ್ದ 14 ಜನರನ್ನ ಬಂಧಿಸಿದ್ದಾರೆ. ದಲಿತ ಕುಟುಂಬಕ್ಕೆ ರಕ್ಷಣೆ ನೀಡಿದ್ದಾರೆ.

click me!