
ಬೆಳಗಾವಿ (ಜೂ.27) (ಜೂ.27) ಬಟ್ಟೆಅಂಗಡಿಯಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದ ಮಹಿಳೆ ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ಈ ಬಗ್ಗೆ ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಡಗಾಂವ ಪ್ರದೇಶ ವಜ್ಜೆಗಲ್ಲಿ ನಿವಾಸಿ ಪೂಜಾ ಶಂಕರ ಬೈಲೂರ (24) ಕಾಣೆಯಾದ ಮಹಿಳೆ. ಮೇ 11ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಬಟ್ಟೆಅಂಗಡಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಗೆ ಹೋದವಳು ಇದುವರೆಗೆ ಮನೆಗೆ ಮರಳಿಲ್ಲ ಎಂದು ಆಕೆಯ ತಾಯಿ, ಅಲಾರವಾಡ ಗ್ರಾಮದ ನಿವಾಸಿ ಶಾರದಾ ನೀಲನೂರ ದೂರಿನಲ್ಲಿ ತಿಳಿಸಿದ್ದಾರೆ.
ಏಳು ದಿನಗಳ ಹಿಂದೆ ಕಾಣೆಯಾಗಿದ್ದ ಕೃಷಿಕ; ಅರಣ್ಯಪ್ರದೇಶದಲ್ಲಿ ಮೃತದೇಹ ಪತ್ತೆ!
ಕಾಣೆಯಾದ ಪೂಜಾ ಶಂಕರ ಬೈಲೂರ, 4.2 ಅಡಿ ಎತ್ತರ, ಗೋದಿಗೆಂಪು ಮೈ ಬಣ್ಣ, ಕಾಣೆಯಾದ ದಿನ ಹಸಿರು ಬಣ್ಣದ ಚೂಡಿದಾರ, ಹಸಿರು ಬಣ್ಣದ ವೇಲ್ ಧರಿಸಿದ್ದಳು ಎನ್ನಲಾಗಿದೆ. ಕೊರಳಲ್ಲಿ ಬೆಳ್ಳಿ ಸರ ಇದೆ. ಈ ಚಹರೆಯುಳ್ಳ ಮಹಿಳೆ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಕ್ಷಣ ಪೊಲೀಸ್ ಕಂಟ್ರೋಲ್ ರೂಮ್-08312405233, 2405278, ಪೊಲೀಸ್ ಇನಸ್ಪೆಕ್ಟರ್ ಮೊ. 9480804107, ಪಿಎಸ್‌ಐ ಮೊ. 9480804048 ಮಾಳಮಾರುತಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ-08312405251 ಗೆ ಸಂಪರ್ಕಿಸುವಂತೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳೊಂದಿಗೆ ತಾಯಿ ನಾಪತ್ತೆ
ಮದ್ದೂರು: ತಾಲೂಕಿನ ನಂಬಿನಾಯಕನಹಳ್ಳಿಯ ಪೂಜಾ ಪಾಟೀಲ… (25), ದೀಕ್ಷಿತಾ(6), ಯಶಿಕಾ(4) ಮಕ್ಕಳೊಂದಿಗೆ ಜೂ.22ರಂದು ಕಾಣೆಯಾಗಿರುವ ಬಗ್ಗೆ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯು 5 ಅಡಿ ಎತ್ತರವಿದ್ದು, ದುಂಡು ಮುಖ, ಸಾಧಾರಣ ಮೈಕಟ್ಟು. ಮನೆಯಿಂದ ಹೋಗುವಾಗ ಸಿಮೆಂಚ್ ಕಲರ್ ಚೂಡಿದಾರ್ ಧರಿಸಿದ್ದರು. ದೀಕ್ಷಿತಾ ಕೋಲು ಮುಖ, ಸಾಧಾರಣ ಮೈಕಟ್ಟು. ಮನೆಯಿಂದ ಹೋಗುವಾಗ ಕೆಂಪು ಕಲರ್ ಫ್ರಾಕ್ ಧರಿಸಿದ್ದರು. ಯಶಿಕಾ ದುಂಡು ಮುಖ, ಸಾಧಾರಣ ಮೈಕಟ್ಟು. ಮನೆಯಿಂದ ಹೋಗುವಾಗ ಕಾಫಿ ಕಲರ್ ಫ್ರಾಕ್ ಧರಿಸಿರುತ್ತಾರೆ. ಇವರ ಸುಳಿವು ಸಿಕ್ಕಲ್ಲಿ ಕೊಪ್ಪ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.
ಮಗುವಿನಂತೆ ಬೆಳೆಸಿದ್ದ ದ್ರಾಕ್ಷಿ ಬೆಳೆಗೆ ತಪ್ಪು ಔಷಧ ಸಿಂಪಡಣೆ: ಬೆಳೆ ನಾಶಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ರೈತ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ