ತನ್ನದೇ ಆಸ್ಪತ್ರೆಯ ನರ್ಸ್ ಸ್ನಾನ ಮಾಡುವ ವಿಡಿಯೋ ಮಾಡಿದ  ಕಾಮಿ ಡಾಕ್ಟರ್!

By Suvarna News  |  First Published Aug 20, 2021, 10:38 PM IST

* ತನ್ನದೇ ಆಸ್ಪತ್ರೆಯ ನರ್ಸ್ ಸ್ನಾನ ಮಾಡುವಾಗ ವಿಡಿಯೋ ಮಾಡಿದ ಡಾಕ್ಟರ್
* ವಿಡಿಯೋ ತೋರಿಸಿ ಬ್ಲಾಕ್ ಮೇಲ್
* ಲೈಂಗಿಕವಾಗಿ ಸಹಕರಿಸಲು ಒತ್ತಾಯ
* ಮಹಿಳೆಯೇ ಬ್ಲಾಕ್ ಮೇಲ್ ಗೆ ಮುಂದಾಗಿದ್ದಳು ಎಂಬ ಮಾಹಿತಿಯೂ ಇದೆ


ರಾಂಪುರ(ಆ. 20)  ತನ್ನದೇ ಆಸ್ಪತ್ರೆಯ ನರ್ಸ್ ಸ್ನಾನ ಮಾಡುವಾಗ ವಿಡಿಯೋ ಮಾಡಿಕೊಂಡ ವೈದ್ಯ ತನ್ನೊಂದಿಗೆ ಲೈಂಗಿಕ ಸಂಬಂಧ  ಬೆಳೆಸುವಂತೆ ಬೆದರಿಕೆ ಹಾಕಿದ್ದ. 

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮಹಿಳೆ ದೂರು ದಾಖಲಿಸಿದ್ದಾರೆ. ರಾಂಪುರ್ ಜಿಲ್ಲೆಯ ಶಹಬಾದ್ ಪ್ರದೇಶದ ಸಮುದಾಯ ಆರೋಗ್ಯ ಕೇಂದ್ರದ ನರ್ಸ್ ಆರೋಪ ಮಾಡಿದ್ದಾರೆ.

Tap to resize

Latest Videos

ತನ್ನೊಂದಿಗೆ ಲೈಂಗಿಕವಾಗಿ ಸಹಕರಿಸದೇ ಇದ್ದರೆ ಈ ವಿಡಿಯೋವನ್ನು ನಿನ್ನ ಗಂಡನಿಗೆ ತೋರಿಸಿ ಡಿವೋರ್ಸ್ ಕೊಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ.  ಅಲ್ಲದೇ ಸಮಯ ಸಿಕ್ಕಾಗ ಅತ್ಯಾಚಾರಕ್ಕೂ ಯತ್ನ ಮಾಡಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.

ಯೋನಿ ಮತ್ತು ಗುದದ್ವಾರದಲ್ಲಿ ಚಿನ್ನ ಬಚ್ಚಿಟ್ಟಿದ್ದ ಕಿರಾತಕಿಯರು

ಈ ಬಗ್ಗೆ ಮಾಹಿತಿ ನೀಡಿರುವ ಮಿಲಕ್ ಸರ್ಕಲ್ ಆಫೀಸರ್ ಓಂಕಾರ್ ನಾಥ್ ಶರ್ಮಾ, ಆ ಮಹಿಳೆ ವೈದ್ಯನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರವೂ ತನಿಖೆ ವೇಳೆ ಗೊತ್ತಾಗಿದೆ.  ಆತನನ್ನೇ ಬ್ಲಾಕ್ ಮೇಲ್ ಮಾಡಲು ಮುಂದಾಗಿರುವುದು ಪ್ರಾಥಮಿಕ ಮಾಹಿತಿಯಲ್ಲಿ ಗೊತ್ತಾಗಿದೆ.45 ವರ್ಷ ವಯಸ್ಸಿನ ವೈದ್ಯನಿಗೂ ಮದುವೆಯಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿ ವೈದ್ಯನ ಪತ್ನಿಯೂ ಡಾಕ್ಟರ್ ಹತ್ತು ವರ್ಷದ ಹಿಂದೆ ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದರು. ಎರಡೂ ಕಡೆಯಿಂದ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 

click me!