Corruption in Energy Dept: ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭಾರೀ ಅಕ್ರಮ: ಸುನಿಲ್‌ ಕುಮಾರ್!

By Suvarna NewsFirst Published Jan 1, 2022, 1:31 PM IST
Highlights

ನಿರಂತರ ಜ್ಯೋತಿ ವಿದ್ಯುತ್ ಯೋಜನೆ ಅಕ್ರಮ, ಭ್ರಷ್ಟಾಚಾರದಲ್ಲಿ ಹಲವಾರು ಅಧಿಕಾರಿಗಳು ಭಾಗಿಯಾಗಿದ್ದೂ  224 ಕೋಟಿ ರೂ. ವೆಚ್ಚದ ಕಾಮಗಾರಿಗಳಲ್ಲಿ ಲೋಪವಾಗಿದೆ ಎಂದು ಇಂಧನ ಸಚಿವ ಸುನಿಲ್‌ ಕುಮಾರ್‌ ತಿಳಿಸಿದ್ದಾರೆ. 

ಶಿವಮೊಗ್ಗ (ಜ.1): ಶಿವಮೊಗ್ಗದ (Sivamogga) ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂಧನ ಸಚಿವ ಸುನಿಲ್ ಕುಮಾರ್ (Sunil Kumar) ನಿರಂತರ ಜ್ಯೋತಿ ವಿದ್ಯುತ್ ಯೋಜನೆ (Niranthara Jyothi Scheme) ಕುರಿತಂತೆ ಸಭೆ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯುತ್ತಿದ್ದು ಸಭೆಯಲ್ಲಿ ಶಾಸಕರಾದ ಆಯನೂರು ಮಂಜುನಾಥ್,  ರುದ್ರೆಗೌಡ, ಅಶೋಕ್ ನಾಯ್ಕ್, ಮೇಯರ್ ಸುನಿತಾ ಅಣ್ಣಪ್ಪ ಸೇರಿದಂತೆ ಮೆಸ್ಕಾಂ ಅಧಿಕಾರಿಗಳು ಭಾಗಿಯಾಗಿದ್ದಾರೆ.

ನಿರಂತರ ಜ್ಯೋತಿ ವಿದ್ಯುತ್ ಯೋಜನೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂದು  ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. "ಈ ಅಕ್ರಮ, ಭ್ರಷ್ಟಾಚಾರದಲ್ಲಿ (Curruption) ಹಲವಾರು ಅಧಿಕಾರಿಗಳು ಭಾಗಿಯಾಗಿದ್ದೂ  224 ಕೋಟಿ ರೂ. ವೆಚ್ಚದ ಕಾಮಗಾರಿಗಳಲ್ಲಿ ಲೋಪವಾಗಿದೆ. ಟೆಂಡರ್ ಪ್ರಕಾರ ಯಾವುದೇ ಕಾಮಗಾರಿ ನಡೆದಿಲ್ಲ. ಕಾರ್ಮಿಕ ನಿಯಮಾವಳಿ ಪಾಲಿಸಿಲ್ಲ. ಸರ್ಕಾರದ ನಿರ್ದೇಶನದಂತೆ ಈ ಯೋಜನೆ ಅನುಷ್ಠಾನವಾಗಿಲ್ಲ" ಎಂದು ಸುನಿಲ್‌ ಕುಮಾರ್‌ ಮಾಹಿತಿ ನೀಡಿದ್ದಾರೆ. 

ಈ ಬೆನ್ನಲ್ಲೇ  24 ಗಂಟೆಯಲ್ಲಿ  ತನಿಖೆ ನಡೆಸಿ, ಇಬ್ಬರು ಅಧಿಕಾರಿಗಳ ಸಸ್ಪೆಂಡ್ ಮಾಡಲು ಸೂಚಿಸುತ್ತೆನೆ.  ಜತೆಗೆ ಎಸಿಬಿ ಅಥವಾ ಸಿಬಿಐ ತನಿಖೆಗೊಳಪಡಿಸುವುದರ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ತಿಳಿಸುತ್ತೇನೆ ಎಂದು ಇಂಧನ ಸಚಿವ ಹೇಳಿದ್ದಾರೆ. "ಇಡೀ ಪ್ರಕರಣವನ್ನು ತನಿಖೆಗೊಳಪಡಿಸುತ್ತೇವೆ.ಬೆಂಗಳೂರಿಗೆ ತೆರಳಿ ತನಿಖೆ ಸ್ವರೂಪವನ್ನು ತಿಳಿಸುತ್ತೆನೆ.ಯಾವುದೇ ಭ್ರಷ್ಟಾಚಾರ ನಡೆಸಲು ಬಿಡುವುದಿಲ್ಲ" ಎಂದು ಸುನೀಲ್‌ ಕುಮಾರ್‌ ಹೇಳಿದ್ದಾರೆ.

ಬಹುಕೋಟಿ ಭೂ ಹಗರಣ ಕೇಸ್‌: ಭ್ರಷ್ಟರಿಗೆ ಎಸಿಬಿ ತನಿಖೆ ಬಿಸಿ!

ಇತ್ತೀಚಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(BDA)ದ ಬಹುಕೋಟಿ ಭೂ ಹಗರಣ ಸಂಬಂಧ ಐಎಎಸ್‌ ಹಾಗೂ ಕೆಎಎಸ್‌ ಅಧಿಕಾರಿಗಳು ಸೇರಿ ಸುಮಾರು 25ಕ್ಕೂ ಹೆಚ್ಚಿನ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ (ACB)ದ ತನಿಖೆ ‘ಕಂಟಕ’ ಎದುರಾಗಿದ್ದು, ಅಧಿಕಾರಿಗಳ ವಿಚಾರಣೆಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ(Government of Karnataka) ಎಸಿಬಿ ಪತ್ರ ಬರೆದಿದೆ.

ಈ ಪತ್ರದ ಬೆನ್ನಲ್ಲೇ ಬಿಡಿಎ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿರುವುದಾಗಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು, ಈಗ ಭೂ ಹಗರಣದ(Land Scam) ಸುಳಿಯಲ್ಲಿ ಸಿಲುಕಿರುವ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಅನುಮತಿ ನೀಡುತ್ತಾರೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಸರ್ಕಾರದ ನಿರ್ಧಾರದ ಬಳಿಕ ಮುಂದಿನ ಹೆಜ್ಜೆಯಿಡಲು ಎಸಿಬಿ ತೀರ್ಮಾನಿಸಿದೆ. ವಿಧಾನಸಭಾ ಅಧಿವೇಶನಕ್ಕೂ ಮುನ್ನವೇ ಅಕ್ರಮ ಭೂ ವ್ಯವಹಾರ ಸಂಬಂಧ ಸರ್ಕಾರಕ್ಕೆ ಎಸಿಬಿ ಸಮಗ್ರ ವರದಿ ಕೂಡಾ ಸಲ್ಲಿಸಿದೆ ಎಂದು ಮೂಲಗಳು ಹೇಳಿವೆ.

ಅಕ್ರಮ ಭೂ ವ್ಯವಹಾರ ದೂರು ಹಿನ್ನೆಲೆಯಲ್ಲಿ ನ.20 ಹಾಗೂ 23ರಂದು ಬಿಡಿಎ ಕೇಂದ್ರ ಕಚೇರಿ ಮತ್ತು ಶಾಖಾ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ವೇಳೆ ಭೂ ಪರಿಹಾರ ವಿತರಣೆ, ಬಡಾವಣೆಗಳ ಅಭಿವೃದ್ಧಿ, ಭೂ ಸ್ವಾಧೀನ, ನಿವೇಶನ ಮಂಜೂರಾತಿ ಸೇರಿದಂತೆ ನಾನಾ ವಿಧದ ಅಕ್ರಮ ಪತ್ತೆ ಹಚ್ಚಿದ ಎಸಿಬಿ, ಸರಿ ಸುಮಾರು ₹200 ಕೋಟಿಗೂ ಅಧಿಕ ಮೊತ್ತದ ಹಗರಣ ನಡೆದಿದೆ ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ಹೇಳಿತ್ತು. ಇನ್ನು ದಾಳಿ ವೇಳೆ ಬಿಡಿಎ ಕಚೇರಿಯಲ್ಲಿ ಜಪ್ತಿಯಾದ ಕಡತಗಳ ರಾಶಿಯನ್ನು ಎಸಿಬಿ ಶೋಧಿಸಿದಂತೆ 25ಕ್ಕೂ ಅಧಿಕಾರಿಗಳಿಗೆ ಭೂ ಉರುಳು ಸುತ್ತಿಕೊಂಡಿದೆ ಎಂದು ‘ಕನ್ನಡಪ್ರಭ’ ಎಸಿಬಿ ಮೂಲಗಳು ಹೇಳಿವೆ.

ಇದನ್ನೂ ಓದಿ:

1) Robbery in Bengaluru: ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ!

2) Gujarat Crime: ಪತ್ನಿ ಸಹಾಯದಿಂದ ಅಪ್ರಾಪ್ತೆ ರೇಪ್‌ ಮಾಡಿದ ಗಂಡ, ಇಬ್ಬರೂ ಅರೆಸ್ಟ್‌!

3) Rowdy Shot in Bengaluru: ಎಸ್‌ಐಗೆ ಚಾಕು ಇರಿದಿದ್ದ ರೌಡಿಗೆ ಗುಂಡೇಟಿನ ಪಾಟ!

click me!