ದಕ್ಷಿಣ ಕನ್ನಡ: ಮಾದಕ ವಸ್ತು ಮಿಶ್ರಿತ 100 ಕೆ.ಜಿ.ಚಾಕೊಲೆಟ್‌ ವಶ

By Kannadaprabha News  |  First Published Jul 21, 2023, 6:32 AM IST

ನಗರದ ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿದ ಪೊಲೀಸರು ಮಾದಕ ವಸ್ತು ಮಿಶ್ರಿತ 100 ಕೆ.ಜಿ. ಚಾಕೊಲೆಟ್‌ಗಳನ್ನು ಬುಧವಾರ ವಶಪಡಿಸಿಕೊಂಡಿದ್ದಾರೆ.


ಮಂಗಳೂರು (ಜು.21) :  ನಗರದ ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿದ ಪೊಲೀಸರು ಮಾದಕ ವಸ್ತು ಮಿಶ್ರಿತ 100 ಕೆ.ಜಿ. ಚಾಕೊಲೆಟ್‌ಗಳನ್ನು ಬುಧವಾರ ವಶಪಡಿಸಿಕೊಂಡಿದ್ದಾರೆ.

ನಗರದ ರಥಬೀದಿಯಲ್ಲಿ ಮನೋಹರ್‌ ಶೇಟ್‌ ಮತ್ತು ನಗರದ ಫಳ್ನೀರ್‌ನ ಗೂಡಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಬೆಚನ್‌ ಸೋನ್ಕರ್‌ ಎಂಬಾತ ಮಾದಕ ವಸ್ತು ಮಿಶ್ರಿತ ‘ಬಾಂಗ್‌’ ಎಂಬ ಚಾಕೊಲೆಟ್‌ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಪಾಂಡೇಶ್ವರ ಪೊಲೀಸರು ಈ ದಾಳಿ ನಡೆಸಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲೆಂದೇ ಈ ಚಾಕೊಲೆಟ್‌ಗಳನ್ನು ಉತ್ತರ ಭಾರತದಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

Tap to resize

Latest Videos

ಡಿಕ್ಷನರಿ ಒಳಗೆ ಡ್ರಗ್‌್ಸ ಬಚ್ಚಿಟ್ಟು ಪೂರೈಸುತ್ತಿದ್ದ ವಿದೇಶಿಗ

ಚಾಕಲೆಟ್‌ನ ಮಾದರಿಯನ್ನು ಹೆಚ್ಚಿನ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅಲ್ಲಿಂದ ಬರುವ ವರದಿ ಆಧಾರದಲ್ಲಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ನಗರದ ಹಲವೆಡೆ ಮಾದಕವಸ್ತು ಲೇಪಿತ ಅಂಶವನ್ನೊಳಗೊಂಡ ಚಾಕಲೆಟ್‌ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಬಂದರು ಠಾಣೆ ಇನ್‌ಸ್ಪೆಕ್ಟರ್‌ ರಾಘವೇಂದ್ರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ನಗರದ ಬಂದರು, ರಥಬೀದಿ ಸೇರಿ ಸುತ್ತಮುತ್ತಲ ಪ್ರದೇಶದ 60ಕ್ಕೂ ಅಧಿಕ ಅಂಗಡಿಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ.

ವಿಚಾರಣಾಧೀನ ಕೈದಿಗೆ ಗಾಂಜಾ ಪೂರೈಕೆ ಮಾಡಲು ಯತ್ನ. ಓರ್ವ ಯುವಕ ಅರೆಸ್ಟ್

click me!