ಬಿಟ್ ಕಾಯಿನ್ ನಲ್ಲಿ ಹಣ ಹೂಡಿಕೆ ಮಾಡಿ ಕೋಟಿ ಕೋಟಿ ಹಣ ಮಾಡಬೇಕೆಂಬ ಆಸೆಯಿಂದ ಮಧ್ಯವರ್ತಿಯ ಮಾತು ನಂಬಿ ಬರೋಬ್ಬರಿ 87 ಲಕ್ಷ ಹಣ ಕಳೆದುಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.
ವರದಿ- ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಮೈಸೂರು (ಜು.20): ಬಿಟ್ ಕಾಯಿನ್ ನಲ್ಲಿ ಹಣ ಹೂಡಿಕೆ ಮಾಡಿ ಕೋಟಿ ಕೋಟಿ ಹಣ ಮಾಡಬೇಕೆಂಬ ಆಸೆಯಿಂದ ಮಧ್ಯವರ್ತಿಯ ಮಾತು ನಂಬಿ ಬರೋಬ್ಬರಿ 87 ಲಕ್ಷ ಹಣ ಕಳೆದುಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬೆಚ್ಚಿ ಬೀಳುವ ಸಂಗತಿಗಳು ಹೊರಬರುತ್ತಿದೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಹೌದು, ಸುಲಭವಾಗಿ ಹಣಗಳಿಸಬೇಕು. ಕೋಟಿ ಕೋಟಿ ಹಣ ಸಂಪಾದನೆ ಮಾಡಬೇಕೆಂಬ ಆಸೆಯಿಂದ ಮೈಸೂರಿನ ಇಬ್ಬರು ವ್ಯಕ್ತಿಗಳು ಲಕ್ಷ ಲಕ್ಷ ಹಣ ಕಳೆದುಕೊಂಡ ಎರೆಡು ಪ್ರತ್ಯೇಕ ಪ್ರಕರಣಗಳು ಬೆಳಕಿಗೆ ಬಂದಿದೆ. ಮೈಸೂರಿನ ಬೃಂದಾವನ ಬಡಾವಣೆಯ ನಿವಾಸಿ ವಿಜಯಲಕ್ಷ್ಮೀ ಕೂಡಿಟ್ಟಿದ್ದ ಅಲ್ಪ ಸ್ವಲ್ಪ ಹಣ ಜೊತೆಗೆ ಬ್ಯಾಂಕ್ ನಲ್ಲಿ ಸಾಲಮಾಡಿ ಬಿಟ್ ಕಾಯಿನ್ ನಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಮೊಹಮ್ಮದ್ ಜಾವೇದ್ ಕೂಡ ಬ್ಯಾಂಕ್ ನಲ್ಲಿ ಸಾಲ ಮಾಡಿ 35 ಲಕ್ಷ ಹಣವನ್ನ ಬಿಟ್ ಕಾಯಿನ್ ಹಾಗೂ ಕ್ರಿಪ್ಟೋ ಕರೆನ್ಸಿಗೆ ಹೂಡಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ ಮಾತ್ರವಲ್ಲ, ನಾಳೆಯಿಂದ ಡಾಕ್ಟರ್ ಆಗಲಿದ್ದಾರೆ
ಟೆಲಿಗ್ರಾಂ ಮೂಲಕ ಪರಿಚಯ: ಇಬ್ಬರು ಕೂಡ ಟೆಲಿಗ್ರಾಂನಲ್ಲಿ ಬಂದ ಇನ್ವೇಟೇಷನ್ ಮೂಲಕ ಟ್ರೇಡರ್ಸ್ ಪರಿಚಯ ಮಾಡಿಕೊಂಡಿದ್ದಾರೆ. ಬಿಟ್ ಕಾಯಿನ್ ನಿಂದ ಸುಲಭವಾಗಿ ಹಣ ಗಳಿಸಬಹುದೆಂದು ನಂಬಿಕೆ ಬರುವ ರೀತಿ ಚಾಟ್ ಮಾಡಿದ್ದಾರೆ. ಜೊತೆಗೆ ಹಣ ಗಳಿಸಿದವರ ನಕಲಿ ಸ್ಕ್ರೀನ್ ಶಾಟ್ ಕಳುಹಿಸಿ ನಂಬಿಸಿದ್ದಾರೆ. ಆನ್ಲೈನ್ ವಂಚಕರ ಮಾತಿಗೆ ಮರುಳಾದ ಮೈಸೂರಿನ ಇಬ್ಬರು ಬರೋಬ್ಬರಿ 87 ಲಕ್ಷ ಹಣ ಕಳುಹಿಸಿ ಪಂಗನಾಮ ಹಾಕಿಸಿಕೊಂಡಿದ್ದಾರೆ. ಈ ಸಂಬಂಧ ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಎರೆಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.
50 ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ: ಇನ್ನು ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬೆಚ್ಚಿ ಬೀಳುವ ಸಂಗತಿಗಳು ಹೊರ ಬರುತ್ತಿದೆ. ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡಲು ಹಣವನ್ನ ವಂಚಕರು ನೇರವಾಗಿ ಅವರ ಅಕೌಂಟ್ ಗೆ ಹಣ ಹಾಕಿಸಿಕೊಂಡಿಲ್ಲ. ಬದಲಾಗಿದೆ ಮೊಹಮ್ಮದ್ ಜಾವೇದ್ ಅವರು ಬಳಿ 35 ಲಕ್ಷ ಹಣವನ್ನ 15 ಅಕೌಂಟ್ಸ್ ಗಳಿಗೆ ಹಣ ವರ್ಗಾವಣೆ ಮಾಡಿಸಿದ್ದಾರೆ. ವಿಜಯಲಕ್ಷ್ಮೀ ಅವರ ಬಳಿ 52 ಲಕ್ಷ ಹಣವನ್ನ 36 ಅಕೌಂಟ್ಸ್ ಗಳಿಗೆ ಹಣ ಹಾಕಿಸಿದ್ದಾರೆ. ಅಕೌಂಟ್ಸ್ ಗಳನ್ನ ಫ್ರೀಜ್ ಮಾಡಲು ಮುಂದಾದಗ ಪೊಲೀಸರಿಗೆ ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿದೆ. ಒಟ್ಟಾರೆ ಇಬ್ಬರು ವ್ಯಕ್ತಿಗಳಿಂದ 87 ಲಕ್ಷ ಹಣವನ್ನ 51 ಅಕೌಂಟ್ಸ್ ಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಜೈಲಲ್ಲೇ ಟ್ರೈನಿಂಗ್..? ಕೊಲೆಗಾರರು ಉಗ್ರರಾಗಿದ್ದು ಹೇಗೆ ಗೊತ್ತಾ..?
ಕಾಶ್ಮೀರ ಶ್ರೀನಗರಕ್ಕೂ ಉಂಟು ಬಿಟ್ ಕಾಯಿನ್ ನಂಟು: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ 2 ಅಕೌಂಟ್, ಕೇರಳ, ಬೆಂಗಳೂರು, ಮಧ್ಯಪ್ರದೇಶ್, ಜಾರ್ಖಂಡ್, ಉತ್ತರಪ್ರದೇಶ ಸೇರಿದಂತೆ ವಿವಿಧ ಭಾಗದಲ್ಲಿ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದ್ದು ಹಣ ವಾಪಸ್ ಕೊಡಿಸಲು ಅಸಾಧ್ಯವಾಗಿದೆ. ಹೀಗಾಗಿ ಬಿಟ್ ಕಾಯಿನ್ ಮೇಲೆ ಹಣ ಹೂಡಿಕೆ ಮಾಡುವ ಮುನ್ನ ಎಚ್ಚರವಹಿಸುವಂತೆ ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ. ಒಟ್ಟಾರೆ ಬಿಟ್ ಕಾಯಿನ್, ಷೇರ್ ಗಳ ಮೇಲೆ ಹಣ ಹೂಡಿಕೆ ಮಾಡುವ ಮುನ್ನ ಅದರ ಬಗ್ಗೆ ಪೂರ್ಣ ಅಧ್ಯಾಯನ ಮಾಡಿ ಹಣ ಹೂಡಿಕೆ ಮಾಡಿದ್ರೆ ಒಳ್ಳೆಯದು. ಇಲ್ಲವಾದಲಿ ಈ ರೀತಿ ಪ್ರಕರಣಗಳು ದಿನ ನಿತ್ಯ ನಡೆಯುತ್ತಲೇ ಇರುತ್ತದೆ.