Davanagere: ಮಾಯಕೊಂಡ ಮತ್ತೆ 10 ಕ್ವಿಂಟಾಲ್‌ ಅಡಿಕೆ ಕಳವು

By Kannadaprabha News  |  First Published Oct 15, 2022, 8:44 AM IST
  • ಮಾಯಕೊಂಡ ಮತ್ತೆ 10 ಕ್ವಿಂಟಾಲ್‌ ಅಡಿಕೆ ಕಳವು
  • 350 ಅಡಿಕೆ ಮರಗಳಿಂದ ಅಡಿಕೆ ಕುಂಚಗಳನ್ನು ಬಿಸಾಡಿ ಹೋದ ಕಳ್ಳರು
  • ನುರಿತ ಅಡಿಕೆ ಕಳ್ಳರ ತಂಡದಿಂದ ಕೃತ್ಯವು ನಡೆದ ಸಾಧ್ಯತೆ

ದಾವಣಗೆರೆ ಅ.(15) : ಭಾರೀ ಮಳೆ ಭೀತಿಗೆ ಸಿಲುಕಿರುವ ರೈತರ ನಿದ್ದೆಯನ್ನು ಕದಡಿರುವ ಅಡಿಕೆ ಕಳ್ಳರು ಎರಡು ತೋಟಗಳಲ್ಲಿ 350ಕ್ಕೂ ಹೆಚ್ಚು ಮರಗಳಲ್ಲಿ ಸುಮಾರು 10 ಕ್ವಿಂಟಾಲ್‌ಗಿಂತಲೂ ಅಧಿಕ ಅಡಿಕೆ ಕಳವು ಮಾಡಿದ ಘಟನೆ ತಾಲೂಕಿನ ಮಾಯಕೊಂಡ ಗ್ರಾಮದಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಮಾಯಕೊಂಡ ಗ್ರಾಮದ ಪ್ರಭು ಮತ್ತು ಲೋಕೇಶ್‌ ಎಂಬ ರೈತರ ಅಕ್ಕಪಕ್ಕದÜ ಎರಡು ಅಡಿಕೆ ತೋಟಗಳಿಗೆ ಕಳೆದ ರಾತ್ರಿದಾಂಗುಡಿ ಇಟ್ಟಿರುವ ಅಡಿಕೆ ಕಳ್ಳರು 10 ಕ್ವಿಂಟಲ್‌ಗಿಂತಲೂ ಅಧಿಕ ಅಡಿಕೆ ಕಳವು ಮಾಡಿದ್ದಾರೆ. ಎರಡೂ ತೋಟಗಳ 350ಕ್ಕೂ ಹೆಚ್ಚು ಅಡಿಕೆ ಮರಗಳಲ್ಲಿದ್ದ 10 ಕ್ವಿಂಟಲ್‌ಗೂ ಅಧಿಕ ಅಡಿಕೆ ಕಳವು ಮಾಡಿದ್ದಾರೆ.

ದಾವಣಗೆರೆಯಿಂದ ‘ಮೀಸಲಾತಿ ಸುಂಟರಗಾಳಿ’ ಶುರು

Latest Videos

undefined

ಸುರಿಯುವ ಮಳೆಯ ಮಧ್ಯೆಯೂ ಮಾಯಕೊಂಡ ಹಾಗೂ ಸುತ್ತಮುತ್ತಲಿನ ಭಾಗದ ಸಂಪೂರ್ಣ ಅರಿವು ಇರುವಂತಹವರೇ ಅಡಿಕೆ ಕಳ್ಳತನ ಮಾಡಿರುವ ಸಾಧ್ಯತೆ ಇದೆ. ಇದೇ ಮಾಯಕೊಂಡ ಮಾರ್ಗವಾಗಿ ಚಿತ್ರದುರ್ಗ ಜಿಲ್ಲೆ, ಚನ್ನಗಿರಿ ಕಡೆಗೆ, ದಾವಣಗೆರೆ ಕಡೆಗೆ ಹಾಗೂ ಬೆಂಗಳೂರು ಕಡೆಗೆ ಹೋಗಲು ಮುಖ್ಯ ಮಾರ್ಗಗಳು ಹಾಗೂ ಒಳ ದಾರಿಗಳು ಇರುವ ಸಂಪೂರ್ಣ ಅರಿವು ಇರುವಂತಹ ಅಡಿಕೆ ಕಳ್ಳರೇ ಇಂತಹ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗುತ್ತಿದೆ.

ಈಗಷ್ಟೇ ಫಲ ಕೊಡಲಾರಂಭಿಸಿದ್ದ, 2-3 ಆಳುಗಳ ಎತ್ತರದಲ್ಲಷ್ಟೇ ಇರುವ ಅಡಿಕೆ ಬೆಳೆ ಬಗ್ಗೆ ತಿಳಿದಿರುವವರೇ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಮರಗಳಲ್ಲಿದ್ದ ಅಡಿಕೆ ಕೊಯ್ದು, ಅಡಿಕೆ ಕುಂಚದಿಂದ ಬೇರ್ಪಡಿಸಿರುವ ಕಳ್ಳರು ಎಲ್ಲಾ 350ಕ್ಕೂ ಹೆಚ್ಚು ಅಡಿಕೆ ಕುಂಚಗಳನ್ನು ಅಕ್ಕಪಕ್ಕದ ಹೊಲಗಳಲ್ಲಿ ಬಿಸಾಡಿ ಹೋಗಿದ್ದಾರೆ. ಬೆಳಿಗ್ಗೆ ರೈತರಾದ ಪ್ರಭು, ಲೋಕೇಶ ತೋಟಕ್ಕೆ ಬಂದಾಗ ಅಡಿಕೆ ಕಳುವು ಮಾಡಿರುವ ವಿಚಾರ ಇಡೀ ಊರಿನವರಿಗೆ ಗೊತ್ತಾಗಿದೆ. ಈ ಬಗ್ಗೆ ಇಬ್ಬರೂ ಅಡಿಕೆ ಬೆಳೆಗಾರರು ಮಾಯಕೊಂಡ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ವಿಷಯ ತಿಳಿದ ಮಾಯಕೊಂಡ ಪೊಲೀಸ್‌ ಠಾಣೆಯ ಅಪರಾಧ ವಿಭಾಗದ ಪಿಎಸ್‌ಐ ಪಡವಳಕರ, ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಮಾಯಕೊಂಡ ಪೊಲೀಸ್‌ ಠಾಣೆಯ ವ್ಯಾಪಿಯಲ್ಲಿ ಪದೇಪದೇ ಅಡಿಕೆ ಕಳವು ಪ್ರಕರಣಗಳು ವರದಿಯಾಗುತ್ತಿದ್ದರೂ, ಈವರೆಗೆ ಅಡಿಕೆ ಕಳ್ಳರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿಲ್ಲ. ಇದೀಗ ಗುರುವಾರ ತಡರಾತ್ರಿ ಅಡಿಕೆ ಕಳವು ಪ್ರಕರಣದ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಅಡಿಕೆ ಕಳವು ತಡೆಗೆ ದಾವಣಗೆರೆ ತಾಲೂಕಿನಲ್ಲಿ ಈಚೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ ರೈತರೊಂದಿಗೆ ಸಭೆ ನಡೆಸಿ, ಸಾಕಷ್ಟುಎಚ್ಚರಿಕೆ ಕ್ರಮಗಳ ಬಗ್ಗೆ ಸೂಚಿಸಿದ್ದರು. ಅದರ ಬೆನ್ನಲ್ಲೇ ಅಡಿಕೆ ಕಳವು ಪ್ರಕರಣ ಮತ್ತೆ ನಡೆದಿದ್ದು, ಇಲಾಖೆಗೂ ಸವಾಲಾಗಿದೆ.

Big 3: ಮೂಲಸೌಕರ್ಯ ಕೊರತೆ: ದಾವಣಗೆರೆಯ ಹೊಸ ಚಿಕ್ಕನಹಳ್ಳಿ ನಿವಾಸಿಗಳ ನರಕಯಾತನೆ

ಅಡಿಕೆ ಬೆಳೆಗಾರರಲ್ಲಿ ಹೆಚ್ಚುತ್ತಿರುವ ಆತಂಕ

ಪದೇಪದೇ ಮಾಯಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಅಡಿಕೆ ಕಳ್ಳತನ ಪ್ರಕರಣಗಳಿಂದಾಗಿ ಅಡಿಕೆ ಬೆಳೆಗಾರರು ತೀವ್ರ ಆತಂಕಕ್ಕೆ ಸಿಲುಕಿದ್ದಾರೆ. ಮಾಯಕೊಂಡ ವ್ಯಾಪ್ತಿಯಲ್ಲಿಯೇ ಅನೇಕ ಸಲ ಅಡಿಕೆ ಕಳವು ಪ್ರಕರಣಗಳು ವರದಿಯಾಗಿದ್ದರೂ, ಒಬ್ಬನೇ ಒಬ್ಬ ಅಡಿಕೆ ಕಳ್ಳನ ಬಂಧನವಾಗಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಅಡಿಕೆ ಬೆಳೆಗಾರರು ರಾತ್ರಿ ಇಡೀ ತೋಟದಲ್ಲೇ ಮೊಕ್ಕಾಂ ಮಾಡಿ, ತೋಟ ಕಾಪಾಡಿಕೊಳ್ಳಬೇಕಾಗುತ್ತದೆ ಎಂದು ಅಡಿಕೆ ಕಳೆದುಕೊಂಡ ರೈತರು, ಇತರೆ ಅಡಿಕೆ ಬೆಳೆಗಾರರು ಆತಂಕ ವ್ಯಕ್ತಪಡಿಸಿದರು.

click me!