ವಿಜಯಪುರ ಪೆನ್ಸಿಲ್ ಪ್ಯಾಕಿಂಗ್ ಹೆಸರಲ್ಲಿ 10 ಲಕ್ಷ ಪಂಗನಾಮ, ಕಂಗಾಲಾದ ಮಹಿಳೆ..!

By Kannadaprabha NewsFirst Published Feb 21, 2024, 11:00 PM IST
Highlights

ಇನ್‌ಸ್ಟಾಂ ಗ್ರಾಂನಲ್ಲಿ ಬಂದ ಪಾರ್ಟ್ ಟೈಮ್ ಜಾಬ್ ಮಾಹಿತಿಯೊಂದನ್ನು ನಂಬಿ ಹಣ ಹಾಕಿದ್ದ ವಿಜಯಪುರದ ಗೃಹಿಣಿಯೊಬ್ಬರಿಗೆ ಬರೋಬ್ಬರಿ ₹10.58 ಲಕ್ಷ ರುಪಾಯಿ ಟೋಪಿ ಹಾಕಲಾಗಿದೆ.

ಶಶಿಕಾಂತ ಮೆಂಡೆಗಾರ

ವಿಜಯಪುರ(ಫೆ.21): ಇನ್‌ಸ್ಟಾಂ ಗ್ರಾಂನಲ್ಲಿ ಬಂದ ಪಾರ್ಟ್ ಟೈಮ್ ಜಾಬ್ ಆಫರ್ ನಂಬಿದ ಮಹಿಳೆಯೊಬ್ಬಳು ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದಾಳೆ. ಹೀಗಾಗಿ ಆ ಮಹಿಳೆ ಈಗ ಮೋಸದ ಜಾಲಕ್ಕೆ ಒಳಗಾಗಿದ್ದಾಳೆ. ಇನ್‌ಸ್ಟಾಂ ಗ್ರಾಂನಲ್ಲಿ ಬಂದ ಪಾರ್ಟ್ ಟೈಮ್ ಜಾಬ್ ಮಾಹಿತಿಯೊಂದನ್ನು ನಂಬಿ ಹಣ ಹಾಕಿದ್ದ ವಿಜಯಪುರದ ಗೃಹಿಣಿಯೊಬ್ಬರಿಗೆ ಬರೋಬ್ಬರಿ ₹10.58 ಲಕ್ಷ ರುಪಾಯಿ ಟೋಪಿ ಹಾಕಲಾಗಿದೆ.

ನಗರದ ಸೇನಾ ನಗರ ನಿವಾಸಿ ನಂದಾದೇವಿ (ಹೆಸರು ಬದಲಿಸಲಾಗಿದೆ) ಇನ್‌ಸ್ಟಾಂ ಗ್ರಾಂ ನಲ್ಲಿ ನಟರಾಜ ಪೆನ್ಸಿಲ್ ಪ್ಯಾಕಿಂಗ್ ಮಾಡುವ ಪಾರ್ಟ್ ಟೈಂ ಕೆಲಸ ಇದೆ ಎಂಬುದನ್ನು ನೋಡಿದ್ದಾಳೆ. ಬಳಿಕ ಅಲ್ಲಿರುವ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಿದಾಗ ಅವರು ನಿಮ್ಮ ಅಡ್ರೆಸ್ ಕಳಿಸಿ ನಾವು ಮೆಟಿರಿಯಲ್ಸ್ ಕಳಿಸ್ತೆವೆ ಎಂದಿದ್ದಾರೆ. ಜೊತೆಗೆ ನಾವು ಕಳಿಸುವ ಕಚ್ಚಾ ಮೆಟಿರಿಯಲ್ ಗೆ ನೀವು ಡೆಪಾಸಿಟ್ ಹಣ ಕಟ್ಟಬೇಕು ಎಂದು ಹೇಳಿ ಹಂತಹಂತವಾಗಿ ಬರೋಬ್ಬರಿ 10,58,062 ರೂಪಾಯಿಗಳನ್ನು ಆನಲೈನ್ ಮೂಲಕ ಕಟ್ಟಿಸಿಕೊಂಡಿದ್ದಾರೆ. ಬಳಿಕ ಸಂಪರ್ಕಿಸಿದ್ರೆ ಮೆಟಿರಿಯಲ್ ಬರುತ್ತೆ ಅಂತ ಒಮ್ಮೆ ಹೇಳಿದ್ರೆ, ಬಿಸಿನೆಸ್ ಸ್ಟಾಪ್ ಆಗಿದೆ ನಿಮಗೆ ವಾಪಸ್ ಹಣ ಹಾಕ್ತಿವಿ ಎಂದು ಹೇಳಿ ತಿಂಗಳಾನುಗಟ್ಟಲೇ ನಂಬಿಸುತ್ತಲೇ ಬಂದಿದ್ದಾರೆ. ಇವರನ್ನು ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿರುವ ಗೃಹಿಣಿ ಇದೀನ್ನಗರದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮನೆ ಲೀಜ್‌ಗೆ ಇದೆ ಅಂತಾ ಜಾಹೀರಾತು ನೀಡಿ ಬಂದವರಿಗೆ ವಂಚಿಸುತ್ತಿದ್ದ ಖತರ್ನಾಕ್ ಜೋಡಿ ಅರೆಸ್ಟ್

ವಂಚನೆ ಯಾವಾಗ ಹೇಗೆ?

ನಟರಾಜ ಪೆನ್ಸಿಲ್ ಗಳನ್ನು ಪ್ಯಾಕಿಂಗ್ ಮಾಡುವ ಪಾರ್ಟ್ ಟೈಮ್ ಜಾಬ್ ಇದೆ, ಈ ಕೆಲಸ ಮಾಡಿದ್ರೆ ವಾರಕ್ಕೆ 15 ಸಾವಿರ ರೂಪಾಯಿ ಗಳಿಸಬಹುದು ಎಂದು ಇನ್ಸಟಾಗ್ರಾಂನಲ್ಲಿ ಸಂದೇಶವನ್ನು ಹಾಕಲಾಗಿತ್ತು. ಇದನ್ನು ನೋಡಿದ ನಂದಾದೇವಿ ಮನೆಯಲ್ಲೇ ಕುಳಿತು ಅರೆಕಾಲಿಕ ಕೆಲಸ ಮಾಡಿ ವಾರಕ್ಕೆ 15 ಸಾವಿರ ಗಳಿಸಬಹುದು ಎಂದು ಯೊಚಿಸಿ ಅಲ್ಲಿದ್ದ ಮೂರು ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿದ್ದಾಳೆ, ಆಗ ಮಿಕ ಬಂದು ಬಲೆಗೆ ಬಿತ್ತು ಎಂದುಕೊಂಡ ವಂಚಕರು ನಿಮ್ಮ ಫೊಟೊ, ಆಧಾರ್ ಕಾರ್ಡ್ ಕಳಿಸಿ ಎಂದಿದ್ದಾರೆ. ನಂಬಿದ ಗೃಹಿಣಿ ದಾಖಲೆ ಕಳಿಸಿದ ಬಳಿಕ ಆಕೆಗೆ ಒಂದು ಡೂಪ್ಲಿಕೇಟ್ ಐಡಿ ಕಾರ್ಡ್ ಕಳಿಸಿ ನಂಬಿಸಿದ್ದಾರೆ. ಬಳಿಕ ಕೆಲಸ ಸಿಕ್ತು ಎಂದು ನಂಬಿದ ಗೃಹಿಣಿ ಅವರು ಹೇಳಿದಂತೆಲ್ಲ ಮಾಡಿ ತನ್ನ ತಂದೆಯ ಖಾತೆಯಿಂದ ಅವರಿಗೆ ಆನಲೈನ್ ಮೂಲಕ 10,58,062 ಟ್ರಾನ್ಸಫರ್ ಮಾಡಿದ್ದಾಳೆ. ಕಳೆದ ಅಗಸ್ಟ್ 13ರಿಂದ ಅಕ್ಟೋಬರ್ 17ರ ವರೆಗೆ ಅಂದ್ರೆ ಕೇವಲ 2ತಿಂಗಳಿನಲ್ಲಿ ಹತ್ತು ಲಕ್ಷ ಹಣ ಪಡೆದುಕೊಂಡು ವಂಚಿಸಿದ್ದಾರೆ.

ವಂಚನೆ ಗೊತ್ತಾಗಿದ್ದು ಹೇಗೆ?

ಲಕ್ಷ ಲಕ್ಷ ಹಣ ಪಡೆದು ಪೆನ್ಸಿಲ್ ಪ್ಯಾಕಿಂಗ್ ಮೆಟಿರಿಯಲ್ಸ್ ಸಹ ಕಳಿಸದೆ ಇರುವುದರಿಂದ ಜೊತೆಗೆ ವಂಚಕರು ಗೃಹಿಣಿಯ ಕರೆ ಸ್ವೀಕರಿಸದಿದ್ದಾಗ ಆಕೆ ತನ್ನ ತಂದೆ-ತಾಯಿಯ ಎದುರು ಈ ವಿಚಾರ ತಿಳಿಸಿದ್ದಾಳೆ. ಬಳಿಕ ಅವರು ತಮಗೆ ಗೊತ್ತಿರುವವರಿಗೆಲ್ಲ ವಿಚಾರಿಸಿದಾಗ ಇದೊಂದು ಫೇಕ್ ಜಾಬ್ ಸಂದೇಶವಿದ್ದು, ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಬಳಿಕ ವಂಚನೆಗೊಳಗಾದ ಕುಟುಂಬದವರು ಸೈಬರ್ ಕ್ರೈಂ ಹೆಲ್ಪಲೈನ್ 1930 ಸಂಖ್ಯೆಯನ್ನು ಸಂಪರ್ಕಿಸಿದ್ದಾರೆ.
ನಟರಾಜ ಪೆನ್ಸಿಲ್ ಪ್ಯಾಕಿಂಗ್ ಮಾಡುವ ಪಾರ್ಟ್ ಟೈಂ ಜಾಬ್ ಮಾಡಿದ್ರೆ ವಾರಕ್ಕೆ 15 ಸಾವಿರ ಗಳಿಸಬಹುದು ಎಂದು ಇನ್ಸಟಾಗ್ರಾಂ ನಲ್ಲಿ ಮಾಹಿತಿ ಬಂದಿತ್ತು. ಅದನ್ನು ನೋಡಿ ಅದರಲ್ಲಿದ್ದ ಮೊಬೈಲ್ ಸಂಖ್ಯೆಗಳಿಗೆ ಕರೆಮಾಡಿ ಅವರು ಹೇಳಿದಂತೆ ದಾಖಲೆ ಹಾಗೂ ಹಣ ಕಳಿಸಿದೆ. ಆನಲೈನ್ ಜಾಬ್ ನಂಬಿ ತಂದೆಯ ಖಾತೆಯಿಂದ ಅವರಿಗೆ 10 ಹಣ ಹಾಕಿದ್ದೇನೆ. ಆದ್ರೆ ಕೊನೆಗೆ ಅವರು ವಂಚಿಸಿರುವುದು ಗೊತ್ತಾದ ತಕ್ಷಣ ದೂರು ದಾಖಲಿಸಿದ್ದೇನೆ ಎಂದು ವಿಜಯಪುರ ಎಸ್ ಪಿ ಋಷಿಕೇಶ ಸೋನಾವಣೆ ತಿಳಿಸಿದ್ದಾರೆ. 

ವಿಜಯಪುರದ ಮಹಿಳೆಗೆ ಆನಲೈನ್ ಜಾಬ್ ಕೊಡ್ತಿವಿ ಎಂದು ನಂಬಿಸಿ ವಂಚಿಸಿರುವ ಕುರಿತು ದೂರು ದಾಖಲಾಗಿದೆ, ಈ ಕುರಿತು ನಮ್ಮ ಕ್ರೈಂ ಠಾಣೆಯ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಆದಷ್ಟು ಬೇಗ ವಂಚಕರನ್ನು ಹಿಡಿದು ಮೋಸ ಹೋದವರಿಗೆ ನ್ಯಾಯ ಕೊಡಿಸಲಾಗುವುದು. ಈ ಹಿಂದೆಯೂ ಆನಲೈನ್ ನಲ್ಲಿ ಮೋಸ ಮಾಡುತ್ತಿರುವ ಸಾಕಷ್ಟು ಪ್ರಕರಣಗಳು ದಾಖಲಾಗಿವೆ, ಅವುಗಳನ್ನು ನಮ್ಮ ಖಾಕಿಪಡೆ ಬೇಧಿಸಿದೆ. ಆದ್ರೆ ಯಾರೂ ಸಹ ಈ ರೀತಿ ಹಣದ ಆಸೆಗೆ ಸಾಮಾಜಿಕ ಜಾಲತಾಣಗಳಲ್ಲಿನ ಮಾಹಿತಿಗಳನ್ನು ನಂಬಿ ಮೋಸ ಹೋಗದಿರಿ.

click me!