ಮದುವೆಯಾಗಲು ಲಿಂಗ ಬದಲಾಯಿಸಿದ ಬೆನ್ನಲ್ಲೇ ಶಾಕ್, ಸತಿ ಪತಿಯಾಗಲು ನಿರಾಕರಿಸಿದ ಗೆಳೆಯ!

Published : Feb 21, 2024, 09:44 PM ISTUpdated : Feb 21, 2024, 09:46 PM IST
ಮದುವೆಯಾಗಲು ಲಿಂಗ ಬದಲಾಯಿಸಿದ ಬೆನ್ನಲ್ಲೇ ಶಾಕ್, ಸತಿ ಪತಿಯಾಗಲು ನಿರಾಕರಿಸಿದ ಗೆಳೆಯ!

ಸಾರಾಂಶ

ಗೆಳೆಯನ ಮೇಲೆ ಮೋಹ, ಪ್ರೀತಿ. ಕೊನೆಗೆ ಆತನನ್ನೇ ಮದುವೆಯಾಗಲು ಬಯಸಿದ್ದಾನೆ. ಇಬ್ಬರು ಮಾತುಕತೆ ನಡೆಸಿ ಒಬ್ಬ ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಆದರೆ ಆಪರೇಶನ್ ಬೆನ್ನಲ್ಲೇ ಆಘಾತ ಎದುರಾಗಿದೆ. ಮದುವೆಯಾಗಲು ನಿರಾಕರಿಸಿ ಆತ ಪರಾರಿಯಾದ ಘಟನೆ ನಡೆದಿದೆ.  

ಇಂದೋರ್(ಫೆ.21) ಒಬ್ಬರಿಗೊಬ್ಬರ ಮೇಲೆ ಪ್ರೀತಿ ಶುರುವಾಗಿದೆ. ಗೆಳೆಯರ ಪ್ರೀತಿಗೆ ಮದುವೆ ಅರ್ಥ ನೀಡಲು ಇಬ್ಬರು ಮಂದಾಗಿದ್ದಾರೆ. ಇದಕ್ಕಾಗಿ ಒಬ್ಬ ಶಸ್ತ್ರ ಚಿಕಿತ್ಸೆ ಮೂಲಕ ಲಿಂಗ ಪರಿವರ್ತನೆ ಮಾಡಿ ಗೆಳೆಯನ ವರಿಸಲು ನಿರ್ಧರಿಸಿದ್ದಾರೆ. ಹುಡುಗಿಯಾಗಲು ಬಯಸಿದವರ ಸುದೀರ್ಘ ಶಸ್ತ್ರಚಿಕಿತ್ಸೆ ಬಳಿಕ ಹುಡುಗಿಯಾಗಿದ್ದಾನೆ. ಆದರೆ ಮತ್ತೊರ್ವ ಗೆಳೆಯ ಮದುವೆಯಾಗಲು ನಿರಾಕರಿಸಿದ ಘಟನೆ ಮಧ್ಯಪ್ರದೇಶ ಇಂದೋರ್‌ನಲ್ಲಿ ನಡೆದಿದೆ. ಇದೀಗ ಹುಡುಗಿಯಾ ವ್ಯಕ್ತಿ ಗೆಳೆಯನ ವಿರುದ್ಧ ದೂರು ದಾಖಲಿಸಿದ್ದು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಉತ್ತರ ಪ್ರದೇಶದ ಕಾನ್ಪುರ ಮೂಲದ ಯುವಕ 2021ರಲ್ಲಿ ಸಾಮಾಜಿಕ ಮಾಧ್ಯಮದ ಮೂಲಕ ವೈಭವ್ ಶುಕ್ಲಾ ಅನ್ನೋ ಯುವಕನ ಪರಿಚಯವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಚಾಟಿಂಗ್ ಶುರಮಾಡಿದ ಇಬ್ಬರು ಆತ್ಮೀಯರಾಗಿದ್ದಾರೆ. ಹಲವು ಭಾರಿ ಬೇಟಿಯಾಗಿದ್ದಾರೆ. ಈ ವೇಳೆ ವೈಭವ್ ಶುಕ್ಲಾ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಯನ್ನು ನಡೆಸಿದ್ದಾನೆ. ಇದೇ ವೇಳೆ   ಲಿಂಗ ಪರಿವರ್ತನೆ ಮಾಡಿಕೊಂಡರೆ ನಿನ್ನನ್ನೆ ಮದುವೆಯಾಗುವುದಾಗಿ ಕಾನ್ಪುರದ ಮೂಲಕ ಯುವಕನಿಗೆ ವೈಭವ್ ಶುಕ್ಲಾ ಹೇಳಿದ್ದಾನೆ. 

ಬಾಲ್ಯದ ಗೆಳತಿ ಮದ್ವೆಯಾಗಲು ಹುಡುಗನಾಗಿ ಬದಲಾದ: ಆದ್ರೂ ಒಪ್ಪದ ಯುವತಿಯ ಕತ್ತು ಸೀಳಿ ಕೊಂದ ಪಾಪಿ!

ಹಲವು ಬಾರಿ ವೈಭವ್ ಶುಕ್ಲಾ, ಕಾನ್ಪುರ ಮೂಲದ ಗೆಳೆಯನನ್ನು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಬಳಸಿಕೊಂಡಿದ್ದಾನೆ. ಇತ್ತ ವೈಬವ್ ಶುಕ್ಲಾ ಮದುವೆಯಾಗಲು ನಿರ್ಧರಿಸಿದ ಕಾನ್ಪುರ ಮೂಲದ ವ್ಯಕ್ತಿ ಲಿಂಗ ಪರಿವರ್ತನೆ ಮಾಡಲು ಮುಂದಾಗಿದ್ದಾನೆ. ದುಬಾರಿ ಹಣ ಪಾವತಿ ಮಾಡಿ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾನೆ. ಕಾನ್ಪುರದ ಮೂಲದ ಯುವಕ ಹುಡುಗಿಯಾಗಿ ಲಿಂಗ ಪರಿವರ್ತನೆ ಮಾಡಿಕೊಂಡ ಬೆನ್ನಲ್ಲೇ ಆಘಾತ ಎದುರಾಗಿದೆ.

ವೈಭವ್ ಶುಕ್ಲಾ ಮದುವೆಗೆ ನಿರಾಕರಿಸಿದ್ದಾನೆ. ಇಷ್ಟೇ ಅಲ್ಲ ಫೋನ್ ಸ್ವಿಚ್ ಮಾಡಿ ಸಂಪರ್ಕಕ್ಕೂ ಸಿಗದೆ ಪರಾರಿಯಾಗಿದ್ದಾನೆ. ವೈಭವ್ ಶುಕ್ಲಾಗಾಗಿ ಲಿಂಗ ಪರಿವರ್ತನೆ ಮಾಡಿಕೊಂಡ ಕಾನ್ಪುರದ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ. ನನ್ನ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಆತನ ಸೂಚನೆಯಂತೆ ನಾನು ಲಿಂಗ ಪರಿವರ್ತನೆ ಮಾಡಿಕೊಂಡಿದ್ದೇನೆ. ಇಗೀದ ಮದುವೆಯಾಗಲು ನಿರಾಕರಿಸಿದ್ದಾನೆ. ದುಬಾರಿ ಹಣ ಖರ್ಚು ಮಾಡಿದ್ದೇನೆ. ಇದೀಗ ನನ್ನ ಸ್ಥಿತಿ ಅತಂತ್ರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ದೇಶದಲ್ಲಿ ಇನ್ಮುಂದೆ ಸೆಕ್ಸ್‌ ಚೇಂಜ್‌ ಬ್ಯಾನ್‌: ಟ್ರಾನ್ಸ್‌ಜೆಂಡರ್‌ ಮದುವೆಗೂ ಇಲ್ಲ ಅನುಮತಿ!

ವೈಭವ್ ಶುಕ್ಲಾ ವಿರುದ್ಧ ಪೊಲೀಸರು ಅಸ್ವಾಭಾವಿಕ ಲೈಂಕಿಕ ಕ್ರಿಯೆ, ವಂಚನೆ ಸೇರಿದಂತೆ ಕೆಲ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇತ್ತ ಸಾಮಾಜಿಕ ಮಾಧ್ಯಮದಲ್ಲಿ ಪರಿಚಯವಾಗಿ ಆತನ ಮಾತು ಕೇಳಿ ಲಿಂಗ ಬದಲಾಯಿಸಿಕೊಂಡ ಕಾನ್ಪುರದ ಯುವಕ ಪರಿಸ್ಥಿತಿ ಅತಂತ್ರವಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ