ಕಲಬುರಗಿ: ವೀಸಾ ಕೊಡಿಸುವುದಾಗಿ ಹೇಳಿ 1.80 ಲಕ್ಷ ಪಡೆದು ಮೋಸ

By Kannadaprabha News  |  First Published Apr 10, 2024, 11:04 AM IST

ಕಲಬುರಗಿ ನಗರದ ಹೀರಾಪುರ ಹೀರಾನಗರದ ಸಾಹೇಬಲಾಲ್ ಎಂಬುವವರಿಗೆ ಮೋಸ ಮಾಡಲಾಗಿದ್ದು, ಅವರು ಈ ಸಂಬಂಧ ಆರ್.ಜಿ. ನಗರ ಪೊಲೀಸ್ ಠಾಣೆಯಲ್ಲಿ ನಬಿ ಕಾಲೋನಿಯ ನಬಿ ನಾಟಿ ಕವಟೆ ಮತ್ತು ಅವರ ಪತ್ನಿ ಮುಮ್ತಾಜ್ ನಾಟಿಕವಟೆ ವಿರುದ್ಧ ದೂರು ಸಲ್ಲಿಸಿದ್ದಾರೆ.


ಕಲಬುರಗಿ(ಏ.10):  ಹೊರದೇಶಕ್ಕೆ ಹೋಗಲು ಮಗನಿಗೆ ವೀಸಾ ಕೊಡಿಸುವುದಾಗಿ ಹೇಳಿ 1.80 ಲಕ್ಷ ಪಡೆದು ನಕಲಿ ವೀಸಾ ನೀಡಿ ವ್ಯಕ್ತಿಯೊಬ್ಬರಿಗೆ ಮೋಸ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಹೀರಾಪುರ ಹೀರಾನಗರದ ಸಾಹೇಬಲಾಲ್ (45) ಎಂಬುವವರಿಗೆ ಮೋಸ ಮಾಡಲಾಗಿದ್ದು, ಅವರು ಈ ಸಂಬಂಧ ಆರ್.ಜಿ. ನಗರ ಪೊಲೀಸ್ ಠಾಣೆಯಲ್ಲಿ ನಬಿ ಕಾಲೋನಿಯ ನಬಿ ನಾಟಿ ಕವಟೆ ಮತ್ತು ಅವರ ಪತ್ನಿ ಮುಮ್ತಾಜ್ ನಾಟಿಕವಟೆ ವಿರುದ್ಧ ದೂರು ಸಲ್ಲಿಸಿದ್ದಾರೆ.

Latest Videos

undefined

ಬೆಂಗಳೂರಿನ ಖಾಸಗಿ ಟ್ರಸ್ಟ್‌ಗಳಿಗೆ ಹಂಚಲು ತೋರಿಸುತ್ತಿದ್ದ 30 ಕೋಟಿ ರೂ. ಮೌಲ್ಯದ ನೋಟುಗಳು ಪತ್ತೆ

ತಮಗೆ ಪರಿಚಿತರಾದ ಫಾತಿಮಾ ಬೇಗಂ ಅವರ ಮುಖಾಂತರ ಸಾಹೇಬಲಾಲ್ ಅವರು ನಬಿ ಕಾಲೋನಿಯ ನಬಿ ನಾಟಿಕವಟೆ ಮತ್ತು ಮುಮ್ತಾಜ್ ಅವರನ್ನು ಭೇಟಿಯಾಗಿದ್ದಾರೆ. ಹೊರದೇಶಕ್ಕೆ ಹೋಗಲು ಮಗನಿಗೆ ವೀಸಾ ಕೊಡಿಸುವುದಾಗಿ ಹೇಳಿ ನಬಿ ನಾಟಿಕವಟೆ ಮತ್ತು ಮುಮ್ತಾಜ್ ಅವರು ಸಾಹೇ¨ಲಾಲ್ ಅವರಿಂದ 1.80 ಲಕ್ಷ ರು. ಪಡೆದಿದ್ದಾರೆ. ನಂತರ ವೀಸಾ ನೀಡಿದ್ದು, ಅದು ಡುಪ್ಲಿಕೇಟ್ ವೀಸಾ ಎಂಬುದು ಗೊತ್ತಾಗಿದೆ. ಇದರಿಂದ ಸಾಹೇಬಲಾಲ್ ಅವರು ನಬಿ ನಾಟಿಕವಟೆ ಮತ್ತು ಮುಮ್ತಾಜ್ ಅವರನ್ನು ಭೇಟಿಯಾಗಿ ಓರಿಜಿನಲ್ ವೀಸಾ ಕೊಡಿ ಇಲ್ಲವೇ ಹಣ ವಾಪಸ್ ಕೊಡಿ ಎಂದು ಕೇಳಿದ್ದಾರೆ. ಸ್ವಲ್ಪ ದಿನ ಬಿಟ್ಟು ಹಣ ಕೊಡುವುದಾಗಿ ಹೇಳಿದ ನಬಿ ಮತ್ತು ಮುಮ್ತಾಜ್ ಅವರು ಈಗ ಹಣ ನೀಡದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಆರ್.ಜಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!