ಜಿಂಬಾಬ್ಬೆ 344: ಅಂತಾರಾಷ್ಟ್ರೀಯ ಟಿ20ಯಲ್ಲಿ ವಿಶ್ವದಾಖಲೆ!

By Naveen Kodase  |  First Published Oct 24, 2024, 11:20 AM IST

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಜಿಂಬಾಬ್ವೆ ಕ್ರಿಕೆಟ್‌ ತಂಡವು ಗರಿಷ್ಠ ಮೊತ್ತ ಕಲೆಹಾಕುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ನೈರೋಬಿ: ಗಾಂಬಿಯಾ ವಿರುದ್ಧ ಐಸಿಸಿ ಟಿ20 ವಿಶ್ವಕಪ್‌ನ ಆಫ್ರಿಕಾ ಖಂಡದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಜಿಂಬಾಬೈ ವಿಶ್ವದಾಖಲೆಯ 344 ರನ್ ಕಲೆಹಾಕಿದೆ. ಇದು ಅಂತಾರಾಷ್ಟ್ರೀಯ ಟಿ20ಯಲ್ಲೇ ಗರಿಷ್ಠ ರನ್. ಕಳೆದ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ದ ನೇಪಾಳ 314 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. 

ಬುಧವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಿಂಬಾಬ್ಬೆ 20 ಓವರಲ್ಲಿ 4 ವಿಕೆಟ್‌ಗೆ 344 ರನ್ ಗಳಿಸಿತು. ನಾಯಕ ಸಿಕಂದರ್ ರಜಾ 43 ಎಸೆತಗಳಲ್ಲಿ 7 ಬೌಂಡರಿ, 15 ಸಿಕರ್‌ನೊಂದಿಗೆ ಔಟಾಗದೆ 133 ರನ್‌ ಸಿಡಿಸಿದರು. ಜಿಂಬಾಬ್ ಇನ್ನಿಂಗ್ಸ್‌ನಲ್ಲಿ 27 ಸಿಕ್ಸರ್, 30 ಬೌಂಡರಿ ದಾಖಲಾಯಿತು. ಗಾಂಬಿಯಾದ ಮೂಸಾ 93 ರನ್ ಬಿಟ್ಟುಕೊಟ್ಟರು. ಇದು ಟಿ20ಯಲ್ಲಿ ಗರಿಷ್ಠ. ಬೃಹತ್ ಗುರಿ ಬೆನ್ನತ್ತಿದ ಗಾಂಬಿಯಾ 14.4 ಓವರ್‌ಗಳಲ್ಲಿ ಕೇವಲ 54ಕ್ಕೆ ಆಲೌಟಾಯಿತು. ಈ ಮೂಲಕ ಜಿಂಬಾಬ್ವೆ 290 ರನ್ ಗೆಲುವು ಸಾಧಿಸಿತು.

Tap to resize

Latest Videos

undefined

ಪುಣೆ ಟೆಸ್ಟ್: ಭಾರತ ಎದುರು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಆಯ್ಕೆ; ಭಾರತ ತಂಡದಲ್ಲಿ 3 ಮಹತ್ವದ ಬದಲಾವಣೆ

93 ರನ್: ಗಾಂಬಿಯಾದ ಮೂಸಾ 93 ರನ್ ಬಿಟ್ಟು ಕೊಟ್ಟರು. 2019ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾದ ರಜಿತಾ 75 ರನ್ ನೀಡಿದ್ದು ಈ ವರೆಗಿನ ದಾಖಲೆ.

290 ರನ್: ಜಿಂಬಾಬೈ 290 ರನ್ ಗೆಲುವು. 2023 ರಲ್ಲಿ ಮಂಗೋಲಿಯಾ ವಿರುದ್ಧ ನೇಪಾಳ 273 ರನ್ ಗಳಿಂದ ಜಯಗಳಿಸಿದ್ದು ಈವರೆಗಿನ ದಾಖಲೆ.

ಟೆಸ್ಟ್‌: ಬಾಂಗ್ಲಾದೇಶ ಎದುರು ದಕ್ಷಿಣ ಆಫ್ರಿಕಾ ಮೇಲುಗೈ

ಮೀರ್‌ಪುರ: ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿದೆ. ಬಾಂಗ್ಲಾದ 106 ರನ್‌ಗೆ ಉತ್ತರವಾಗಿ ದ.ಆಫ್ರಿಕಾ 308 ರನ್‌ ಗಳಿಸಿ, ಮೊದಲ ಇನ್ನಿಂಗ್ಸ್‌ನಲ್ಲಿ 202 ರನ್‌ ಮುನ್ನಡೆ ಪಡೆಯಿತು. ಕೈಲ್‌ ವೆರೈನ್‌ 114 ರನ್‌ ಸಿಡಿಸಿದರು. ಬಾಂಗ್ಲಾದ ತೈಜುಲ್‌ ಇಸ್ಲಾಂ 5 ವಿಕೆಟ್‌ ಕಿತ್ತರು. ಬಳಿಕ 2ನೇ ಇನ್ನಿಂಗ್ಸ್‌ ಆರಂಭಿಸಿರುವ ಬಾಂಗ್ಲಾ 2ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 101 ರನ್‌ ಗಳಿಸಿದ್ದು, ಇನ್ನೂ 101 ರನ್‌ ಹಿನ್ನಡೆಯಲ್ಲಿದೆ.

ಭಾರತ ‘ಎ’ ತಂಡದಲ್ಲಿ ಕರ್ನಾಟಕದ ದೇವದತ್‌

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ‘ಎ’ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಕರ್ನಾಟಕದ ದೇವದತ್‌ ಪಡಿಕ್ಕಲ್‌ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಋತುರಾಜ್ ಗಾಯಕ್ವಾಡ್‌ ನಾಯಕತ್ವದ ತಂಡದಲ್ಲಿ ಇಶಾನ್‌ ಕಿಶನ್‌, ತನುಶ್‌ ಕೋಟ್ಯನ್‌, ನಿತೀಶ್‌ ಕುಮಾರ್‌ ಕೂಡಾ ಇದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವೆ 5 ಪಂದ್ಯಗಳ ಟೆಸ್ಟ್‌ ಸರಣಿ ನ.22ರಿಂದ ಆರಂಭಗೊಳ್ಳಲಿದೆ. ಅದಕ್ಕೂ ಮುನ್ನ ಭಾರತ ‘ಎ’ ತಂಡ ಆಸ್ಟ್ರೇಲಿಯಾ ‘ಎ’ ವಿರುದ್ಧ 2 ಪಂದ್ಯಗಳನ್ನಾಡಲಿದ್ದು, ಬಳಿಕ ಭಾರತ ಹಿರಿಯರ ತಂಡದ ಜೊತೆ ಅಭ್ಯಾಸ ಪಂದ್ಯಗಳನ್ನಾಡಲಿದೆ.

ಪುಣೆ ಟೆಸ್ಟ್‌ಗೆ ಸ್ಪಿನ್‌ ಸ್ನೇಹಿ ಪಿಚ್‌: ಮತ್ತೆ 3 ಸ್ಪಿನ್ನರ್‌ ಜೊತೆ ಕಣಕ್ಕಿಳಿಯುತ್ತಾ ಭಾರತ?

ತಂಡ: ಋತುರಾಜ್‌, ಅಭಿಮನ್ಯು ಈಶ್ವರನ್‌, ಸಾಯಿ ಸುದರ್ಶನ್‌, ನಿತೀಶ್‌, ಪಡಿಕ್ಕಲ್‌, ರಿಕ್ಕಿ ಭುಯಿ, ಬಾಬಾ ಇಂದ್ರಜಿತ್‌, ಇಶಾನ್‌, ಅಭಿಷೇಕ್‌ ಪೊರೆಲ್‌, ಮುಕೇಶ್‌ ಕುಮಾರ್‌, ಖಲೀಲ್‌, ಯಶ್‌ ದಯಾಳ್‌, ನವ್‌ದೀಪ್‌ ಸೈನಿ, ಮಾನತ್‌ ಸುಥಾರ್‌, ತನುಶ್‌.
 

click me!