ಕ್ರಿಕೆಟಿಗ ಯುಜುವೇಂದ್ರ ಚಾಹಲ್ ಬಿಜೆಪಿಗೆ ಸೇರ್ಪಡೆ! ಒಬಿಸಿ ಮೋರ್ಚಾ ಸಮಿತಿಯಲ್ಲಿ ಅವರ ಸ್ಥಾನ ಏನು?

Published : Nov 22, 2026, 08:27 AM ISTUpdated : Nov 22, 2026, 08:38 AM IST
Yuzvendra Chahal Joins BJP

ಸಾರಾಂಶ

Yuzvendra Chahal Joins BJP ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಬಿಜೆಪಿ ಸೇರ್ಪಡೆಯಾಗಿದ್ದು, ಪಕ್ಷದ ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ವಿಶೇಷ ಆಹ್ವಾನಿತರಾಗಿ ನೇಮಕ. ಈ ಅವಕಾಶ ನೀಡಿದ್ದಕ್ಕಾಗಿ ಅವರು ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಪಕ್ಷದ ಮುಖಂಡರಿಗೆ ಧನ್ಯವಾದ ಸಲ್ಲಿಸಿದ್ದಾರೆ.

Yuzvendra Chahal Joins BJP: ಕ್ರಿಕೆಟಿಗ ಯುಜ್ವೇಂದ್ರ ಚಾಹಲ್(Yuzvendra Chahal) ಶನಿವಾರ ಭಾರತೀಯ ಜನತಾ ಪಕ್ಷ (BJP) ಸೇರ್ಪಡೆಯಾಗಿದ್ದು, ಪಕ್ಷವು ಅವರನ್ನು ಹಿಂದುಳಿದ ವರ್ಗಗಳ (ಒಬಿಸಿ) ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ವಿಶೇಷ ಆಹ್ವಾನಿತರನ್ನಾಗಿ ನೇಮಿಸಲಾಗಿದೆ. ಈ ಹಿಂದೆ ಚಾಹಲ್ ಬಿಜೆಪಿಯ ಒಬಿಸಿ ಮೋರ್ಚಾದ ಅಧ್ಯಕ್ಷ ಅಮರಪಾಲ್ ಮೌರ್ಯ ಅವರನ್ನು ಭೇಟಿ ಮಾಡಿದ್ದಾಗಲೇ ಬಿಜೆಪಿ ಸೇರ್ಪಡೆ ಸುದ್ದಿಯಾಗಿತ್ತು. ಇದೀಗ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿರುವುದು ಕ್ರೀಡಾ ಮತ್ತು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಯುಜ್ವೇಂದ್ರ ಚಾಹಲ್ ಹೇಳಿದ್ದೇನು?

ಬಿಜೆಪಿ ಸೇರ್ಪಡೆಯಾಗಿರುವ ಕುರಿತು ಪ್ರತಿಕ್ರಿಯಿಸಿರುವ ಯುಜ್ವೇಂದ್ರ ಚಾಹಲ್, ಬಿಜೆಪಿ ಪಕ್ಷದಲ್ಲಿ ನನಗೆ ಒಂದು ಸ್ಥಾನ ಮತ್ತು ಗೌರವ ನೀಡಿದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ, ಗೌರವಾನ್ವಿತ ಗೃಹ ಸಚಿವ ಶ್ರೀ ಅಮಿತ್ ಶಾ ಜಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶ್ರೀ ನಿತಿನ್ ನಬಿನ್ ಜಿ ಮತ್ತು ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಶ್ರೀ ಅಮರಪಾಲ್ ಮೌರ್ಯ ಜಿ ಅವರಿಗೆ ನಾನು ಹೃತ್ಪೂರ್ವಕ ಧನ್ಯವಾದ ಹೇಳುತ್ತೇನೆ' ಎಂದು ಕ್ರಿಕೆಟಿಗ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಕರ್ನಾಟಕ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಮಧ್ವರಾಜ್

ಅಸ್ಸಾಂನ ಜೋಗೆನ್ ಮೋಹನ್, ಒಡಿಶಾದ ಮಮತಾ ಮೊಹಂತ, ಉತ್ತರ ಪ್ರದೇಶದ ಸಂಗಮ್ ಲಾಲ್ ಗುಪ್ತಾ, ಮಹಾರಾಷ್ಟ್ರದ ಬಬನ್‌ರಾವ್ ರಾವ್ ಚೌಧರಿ, ದೆಹಲಿಯ ಸತ್ ಪ್ರಕಾಶ್ ರಾಣಾ, ಬಿಹಾರದ ಅರ್ಜುನ್ ಸಾಹ್ನಿ, ಉತ್ತರ ಪ್ರದೇಶದ ಸಂಗೀತಾ ಬಲವಂತ್ ಬಿಂದ್ ಅವರನ್ನು ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಬಿಜೆಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ದೆಹಲಿಯಿಂದ ಗಜೇಂದ್ರ ಯಾದವ್, ಕರ್ನಾಟಕದಿಂದ ಪ್ರಮೋದ್ ಮಧ್ವರಾಜ್ ಮತ್ತು ಛತ್ತೀಸ್‌ಗಢದಿಂದ ಲಲಿತ್ ಚಂದ್ರಕರ್ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ. ಒಟ್ಟಾರೆ ಬಿಜೆಪಿ ಪಕ್ಷವು ವಿವಿಧ ರಾಜ್ಯಗಳಿಂದ ಏಳು ರಾಷ್ಟ್ರೀಯ ಕಾರ್ಯದರ್ಶಿಗಳು, ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ 37 ಸದಸ್ಯರನ್ನು ಘೋಷಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನಿರ್ದೇಶನದ ಮೇರೆಗೆ ಈ ನೇಮಕಾತಿಗಳನ್ನು ಮಾಡಲಾಗಿದ್ದು, ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಮೌರ್ಯ ತಿಳಿಸಿದ್ದಾರೆ. ಏಳು ಹೊಸ ರಾಷ್ಟ್ರೀಯ ಕಾರ್ಯದರ್ಶಿಗಳೆಂದರೆ, ಗುಜರಾತ್‌ನಿಂದ ದಶರಥಜಿ ಠಾಕೋರ್, ತಮಿಳುನಾಡಿನ ಟಿ ವರರಾಜನ್, ಜಾರ್ಖಂಡ್‌ನಿಂದ ಸಂಜೀವ್ ಕುಮಾರ್, ಹರಿಯಾಣದಿಂದ ಸರಿತಾ ಜಂಗಿದ್, ತೆಲಂಗಾಣದ ಕಡಗಂಚಿ ರಮೇಶ್, ಮಧ್ಯಪ್ರದೇಶದಿಂದ ವೈಭವ್ ಪನ್ವಾರ್ ಮತ್ತು ಬಿಹಾರದಿಂದ ಭೀಮ್ ಕುಮಾರ್ ಸಾಹು ನೇಮಕವಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೆಸ್ಟೋರೆಂಟ್‌ನಲ್ಲಿ ಕೆಲಸ, ಕೊರೊನಾದಲ್ಲಿ ಸಂಕಷ್ಟ: ಆಸ್ಟ್ರೇಲಿಯಾ ಗೆಲುವಿನ ಹೀರೋ ಆದ ಭಾರತದ ನಿಖಿಲ್ ಚೌಧರಿ!
ಮೂರನೇ ಟ್ರೋಫಿ ಗೆಲ್ಲುವ ಬಗ್ಗೆ ಪ್ಲಾನ್ ರಿವೀಲ್; ಎದುರಾಳಿ ತಂಡಕ್ಕೆ RCB ಕೋಚ್ ಆಂಡಿ ಫ್ಲವರ್ ಖಡಕ್ ವಾರ್ನಿಂಗ್