ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಯುವರಾಜ್; ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್!

Published : Jun 27, 2021, 08:17 PM ISTUpdated : Jun 27, 2021, 08:28 PM IST
ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಯುವರಾಜ್; ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್!

ಸಾರಾಂಶ

ಯುವರಾಜ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ನೋಡಲು ಮತ್ತೆ ಅವಕಾಶ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಯುವರಾಜ್ ಸಿಂಗ್ ಕಮ್‌ಬ್ಯಾಕ್ ಯುವಿ ಜೊತೆ ಗೇಲ್, ಎಬಿಡಿ ಕೂಡ ಅಖಾಡಕ್ಕೆ

ಆಸ್ಟ್ರೇಲಿಯಾ(ಜೂ.27): ಸ್ಫೋಟಕ ಬ್ಯಾಟ್ಸ್‌ಮನ್, ಯುವರಾಜ್ ಸಿಂಗ್  ಕ್ರಿಕೆಟ್‌ಗೆ ವಿದಾಯ ಹೇಳಿದರೂ ಅಭಿಮಾನಿಗಳಲ್ಲಿ ಯುವಿ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಯುವಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದರೆ ಮತ್ತೆ ಸಿಕ್ಸರ್ ನೋಡುವ ತವಕ, ಸ್ಲೆಡ್ಜಿಂಗ್, ಏಟಿಗೆ ಏದಿರೇಟು ನೀಡೋ ಜಾಯಮಾನ ಯುವರಾಜ್ ಸಿಂಗ್‌ನಷ್ಟು ಉತ್ತಮವಾಗಿ ಇನ್ಯಾರು ನೀಡಲು ಸಾಧ್ಯವಿಲ್ಲ. ಯುವಿ ವಿದಾಯ ಹೇಳಿದ್ದಾರೆ ಎಂದು ನಿರಾಸೆ ಪಡಬೇಕಿಲ್ಲ, ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಯವರಾಜ್ ಸಿಂಗ್ ಮರಳುತ್ತಿದ್ದಾರೆ.

ರೋಡ್ ಸೇಫ್ಟಿ ಸರಣಿ: ಸೌತ್ ಆಫ್ರಿಕಾ ವಿರುದ್ಧ ಸತತ 4 ಸಿಕ್ಸರ್ ಸಿಡಿಸಿ ಮಿಂಚಿದ ಯುವಿ!

ಮೂಲಗಳ ಪ್ರಕಾರ ಯುವರಾಜ್ ಸಿಂಗ್ ಆಸ್ಟ್ರೇಲಿಯಾದ ಮಲ್‌ಗ್ರೇವ್ ಕ್ರಿಕೆಟ್ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಯುವರಾಜ್ ಸಿಂಗ್ ಆಸ್ಟ್ರೇಲಿಯಾದಲ್ಲಿ ಅಖಾಡಕ್ಕಿಳಿಯಲಿದ್ದಾರೆ. ಯುವರಾಜ್ ಸಿಂಗ್ ವಿಂಡೀಸ್ ದಿಗ್ಗಜ ಕ್ರಿಸ್ ಗೇಲ್ ಕೂಡ ಒಪ್ಪಂದ ಮಾಡಿಕೊಂಡಿದ್ದಾರೆ

ಸೌತ್ ಆಫ್ರಿಕಾದ ಎಬಿ ಡಿವಿಲಿಯರ್ಸ್  ಹಾಗೂ ವಿಂಡೀಸ್ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಜೊತೆಗೆ ಒಪ್ಪಂದದ ಮಾತುಕತೆ ಪ್ರಗತಿಯಲ್ಲಿದೆ. ಶ್ರೀಲಂಕದಾ ತಿಲಕರತ್ನೆ ದಿಲ್ಶಾನ್, ಉಪುಲ್ ತರಂಗಾ ಕೂಡ ಕ್ಲಬ್ ಸೇರಿಕೊಳ್ಳುವ ಸಾಧ್ಯತೆ ಇದೆ. 

ಸಚಿನ್ ತೆಂಡೂಲ್ಕರ್‌ - ಯುವರಾಜ್ ಸಿಂಗ್‌: ಭಾರತದ ಶ್ರೀಮಂತ ಕ್ರಿಕೆಟಿಗರು!.

ಯುವರಾಜ್ ಸಿಂಗ್ ವಿದಾಯದ ಬಳಿಕ ಕೆನಡಾ ಟಿ20 ಲೀಗ್, ದುಬೈನ ಟಿ10 ಲೀಗ್ ಟೂರ್ನಿಗಳಲ್ಲಿ ಆಡಿದ್ದಾರೆ. 2021ರಲ್ಲಿ ರೋಡ್ ಸೆಫ್ಟಿ ಪಂದ್ಯದಲ್ಲೂ ಯುವರಾಜ್ ಸಿಂಗ್, ಸಚಿನ್ ತೆಂಡುಲ್ಕರ್ ಆಡಿದ್ದಾರೆ.  ಇದೀಗ ಮತ್ತೆ ಆಸ್ಟ್ರೇಲಿಯಾ ಕ್ಲಬ್ ಜೊತೆ ಅಖಾಡಕ್ಕಿಳಿಯುತ್ತಿರುವುದು ಅಭಿಮಾನಿಗಳ ಸಂತಸ ಡಬಲ್ ಆಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!