ಇಂಗ್ಲೆಂಡ್‌ ಸರಣಿ ಮುನ್ನ ಭಾರತಕ್ಕೆ 2 ಅಭ್ಯಾಸ ಪಂದ್ಯ

Suvarna News   | Asianet News
Published : Jun 26, 2021, 12:54 PM IST
ಇಂಗ್ಲೆಂಡ್‌ ಸರಣಿ ಮುನ್ನ ಭಾರತಕ್ಕೆ 2 ಅಭ್ಯಾಸ ಪಂದ್ಯ

ಸಾರಾಂಶ

* ಇಂಗ್ಲೆಂಡ್ ಎದುರಿನ ಸರಣಿಗೂ ಮುನ್ನ ಟೀಂ ಇಂಡಿಯಾ ಅಭ್ಯಾಸ ಪಂದ್ಯ * ಟೀಂ ಇಂಡಿಯಾ, ಇಂಗ್ಲೆಂಡ್ ಎದುರು 5 ಪಂದ್ಯಗಳ ಸರಣಿಯಾಡಲಿದೆ. * ತನ್ನ ತಂಡದ ಆಟಗಾರರನ್ನೇ 2 ತಂಡಗಳನ್ನಾಗಿ ವಿಂಗಡಿಸಿ ಪಂದ್ಯವನ್ನಾಡಲಿರುವ ಭಾರತ  

ನವದೆಹಲಿ(ಜೂ.26): ಇಂಗ್ಲೆಂಡ್‌ ವಿರುದ್ಧ ಆಗಸ್ಟ್ 4ರಿಂದ ಆರಂಭಗೊಳ್ಳಲಿರುವ 5 ಪಂದ್ಯಗಳ ಟೆಸ್ಟ್‌ ಸರಣಿಗೂ ಮುನ್ನ ಟೀಂ ಇಂಡಿಯಾ ಡರ್ಹಮ್‌ನಲ್ಲಿ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ.

ಅಭ್ಯಾಸ ಪಂದ್ಯಕ್ಕೆ ಸ್ಥಳೀಯ ತಂಡ ಒದಗಿಸಲು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ನಿರಾಕರಿಸಿದ ಕಾರಣ, ತನ್ನ ತಂಡದ ಆಟಗಾರರನ್ನೇ 2 ತಂಡಗಳನ್ನಾಗಿ ವಿಂಗಡಿಸಿ ಪಂದ್ಯವನ್ನಾಡಲಿದೆ. ನ್ಯೂಜಿಲೆಂಡ್‌ ವಿರುದ್ಧದ ವಿಶ್ವ ಟೆಸ್ಟ್‌ ಫೈನಲ್‌ಗೂ ಮುನ್ನ ಭಾರತ ತನ್ನ ಆಟಗಾರರನ್ನೇ 2 ತಂಡಗಳನ್ನಾಗಿ ಮಾಡಿ ಅಭ್ಯಾಸ ಪಂದ್ಯವನ್ನಾಡಿತ್ತು.

ನಮಗೆ ತಿಳಿದಿರುವ ಮಾಹಿತಿಯಂತೆ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಡರ್ಹಮ್‌ನಲ್ಲಿ ಜುಲೈ 15ರಿಂದ ಟೀಂ ಇಂಡಿಯಾ ಅಭ್ಯಾಸ ಶಿಬಿರ ಆರಂಭವಾಗಲಿದೆ. ಅವರು ತಂಡದ ಆಟಗಾರರನ್ನೇ 2 ತಂಡಗಳನ್ನಾಗಿ ವಿಂಗಡಿಸಿ 4 ದಿನಗಳ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ ಎಂದು ಇಸಿಬಿ ವಕ್ತಾರರು ಸ್ಪೋರ್ಟ್ಸ್‌ಸ್ಟಾರ್‌ಗೆ ತಿಳಿಸಿದ್ದಾರೆ.

2021-23ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ವೇಳಾಪಟ್ಟಿ ಪ್ರಕಟ

ನ್ಯೂಜಿಲೆಂಡ್ ವಿರುದ್ದದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದ ಸೋಲಿನ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನಾವು ಇಂಗ್ಲೆಂಡ್‌ಗೆ ಬಂದಿಳಿದ ಬಳಿಕ ಇಲ್ಲಿ ಕೌಂಟಿ ಪಂದ್ಯವನ್ನಾಡಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ ಎಂದಿದ್ದರು. ಕಠಿಣ ಬಯೋ ಬಬಲ್‌ ಪ್ರೊಟೋಕಾಲ್ ಪಾಲಿಸಬೇಕಾಗಿದ್ದರಿಂದ ಟೀಂ ಇಂಡಿಯಾಗೆ ಸರಿಯಾಗಿ ಅಭ್ಯಾಸ ನಡೆಸಲು ಸಾಧ್ಯವಾಗಿರಲಿಲ್ಲ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!