2007ರಲ್ಲಿ ಇದೇ ದಿನ ಡರ್ಬನ್ ಮೈದಾನದಲ್ಲಿ ಯುವರಾಜ್ ಸಿಂಗ್ ಬಾರಿಸಿದ 6 ಸಿಕ್ಸರ್‌ಗಳ ಬರೀ ಸಿಕ್ಸರ್ಸ್ ಮಾತ್ರವಾಗಿರಲಿಲ್ಲ. ಕ್ರಿಕೆಟ್‌ನಲ್ಲಿ ಇಂಗ್ಲೀಷರ ಅಹಂಕಾರ ಅಡಗಿಸಿದ್ದ ಶಾಟ್‌ಗಳಾಗಿದ್ದವು. ಯುವರಾಜ್ ಸಿಂಗ್ ಅವರ ಈ ವಿಧ್ವಂಸಕ ಆಟಕ್ಕೆ ಇಂದಿಗೆ 15 ವರ್ಷ. ಸ್ವತಃ ಯುವರಾಜ್ ವಿಶೇಷ ವ್ಯಕ್ತಿ ಜೊತೆ ಈ ಪಂದ್ಯದ ಹೈಲೈಟ್ಸ್ ನೋಡಿ ಸಂಭ್ರಮಿಸಿದ್ದಾರೆ.
ಬೆಂಗಳೂರು (ಸೆ. 19): ಚೊಚ್ಚಲ ಟಿ20 ವಿಶ್ವಕಪ್. 2007ರಲ್ಲಿ ಇದೇ ದಿನ ಡರ್ಬನ್‌ನ ಕಿಂಗ್ಸ್‌ಮೇಡ್ ಮೈದಾನದಲ್ಲಿ ಕ್ರಿಕೆಟ್ ಲೋಕದ ಅತ್ಯಂತ ಅವಿಸ್ಮರಣೀಯ ಕ್ಷಣ ದಾಖಲಾಗಿತ್ತು. ಈ ಸಂಭ್ರಮಕ್ಕೀಗ 15 ವರ್ಷ. ಇಂಗ್ಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದ್ದರು. ಟೀಮ್ ಇಂಡಿಯಾ ಆಲ್ರೌಂಡರ್ ಮಾಡಿದ ಈ ಸಾಧನೆ ಇಂದಿಗೂ ಭಾರತದ ಎಲ್ಲಾ ಕ್ರಿಕೆಟ್ ಪ್ರೇಮಿಗಳ ನೆನಪಿನಲ್ಲಿದೆ. ಸೆ. 19 ರಂದು ಇಂಗ್ಲೆಂಡ್ ವಿರುದ್ಧ ಈ ಪಂದ್ಯ ನಡೆದಿತ್ತು. ಭಾರತ ತಂಡದ ಇನ್ನಿಂಗ್ಸ್‌ನ ಕೊನೆಯ ಹಂತದಲ್ಲಿ ಯುವರಾಜ್ ಸಿಂಗ್ ರಣಾರ್ಭಟ ಶುರುವಾಗಿತ್ತು. ವೇಗಿ ಸ್ಟುವರ್ಟ್ ಬ್ರಾಡ್ ಎಸೆದ 19ನೇ ಓವರ್‌ನ ಎಲ್ಲಾ ಆರೂ ಎಸೆತಗಳನ್ನು ಯುವಿ ಮೈದಾನದ ಆಚೆ ಕಳಿಸಿದ್ದರು. ಅದರೊಂದಿಗೆ ವಿಶ್ವ ಕ್ರಿಕೆಟ್ ಹಾಗೂ ಭಾರತೀಯ ಕ್ರಿಕೆಟ್‌ನಲ್ಲಿ ಬಹುಶಃ ಎಂದೂ ಅಳಿಸಲಾಗದ ಒಂದು ದಾಖಲೆ ನಿರ್ಮಾಣವಾಗಿಬಿಟ್ಟಿತು. ಆರು ಸಿಕ್ಸರ್‌ಗಳ ಹಾದಿಯಲ್ಲಿ ಯುವರಾಜ್ ಸಿಂಗ್ ಕೇವಲ 12 ಎಸೆತದಲ್ಲಿ ಅರ್ಧಶತಕ ಬಾರಿಸಿದ್ದರು. ಇದೂ ಕೂಡ ವಿಶ್ವದಾಖಲೆ. ಈ ಪಂದ್ಯದಲ್ಲಿ ಯುವರಾಜ್ ಸಿಂಗ್ ಎದುರಿಸಿದ್ದು 16 ಎಸೆತ. 7 ಸಿಕ್ಸರ್‌ಗಳು ಹಾಗೂ ಮೂರು ಬೌಂಡರಿಗಳ ಸಹಾಯದಿಂದ ಯುವರಾಜ್ ಸಿಂಗ್ 58 ರನ್ ಬಾರಿಸಿದ್ದರೆ, ಭಾರತ 18 ರನ್‌ಗಳಿಂದ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು.
Couldn’t have found a better partner to watch this together with after 15 years 👶 🏏 pic.twitter.com/jlU3RR0TmQ
— Yuvraj Singh (@YUVSTRONG12)
ಇಂಗ್ಲೆಂಡ್ ವಿರುದ್ಧದ ಈ ಗೆಲುವಿಗೆ ಯುವರಾಜ್ ಸಿಂಗ್ ಅವರ ಆರು ಅಭೇದ್ಯ ಸಿಕ್ಸರ್‌ಗಳು ಕಾರಣವಾಗಿದ್ದವು. ಇದರಿಂದಾಗಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 218 ರನ್ ಪೇರಿಸಿತು. ಈ ಐತಿಹಾಸಿಕ ಘಟನೆ ರಚನೆಯಾಗಿ 15 ವರ್ಷಗಳು ಮುಗಿದಿವೆ. ಆರು ಸಿಕ್ಸರ್‌ಗಳಿಗೆ 15 ವರ್ಷದವಾದ ಹಿನ್ನಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಯುವರಾಜ್ ಸಿಂಗ್ ಅವರ ಅಭಿಮಾನಿಗಳು ಈ ಆಟವನ್ನು ಕೊಂಡಾಡುತ್ತಾ, ಹಿಂದಿನ ನೆನಪುಗಳಿ ಜಾರಿದ್ದಾರೆ. ಆದರೆ, ಯುವರಾಜ್ ಸಿಂಗ್ ಮಾತ್ರ ಈ ಕ್ಷಣವನ್ನು ಇನ್ನೂ ವಿಶೇಷವಾಗಿ ಆಚರಣೆ ಮಾಡಿದ್ದಾರೆ.
ಸ್ಪೆಷಲ್ ವ್ಯಕ್ತಿಯೊಂದಿಗೆ 15 ವರ್ಷದ ಸಂಭ್ರಮ ಆಚರಿಸಿದ ಯುವರಾಜ್ ಸಿಂಗ್: ಹೌದು ಯುವರಾಜ್ ಸಿಂಗ್ (Yuvraj Singh) ತಮ್ಮ ಈ ದಾಖಲೆಯನ್ನು ವಿಶೇಷ ವ್ಯಕ್ತಿಯ ಜೊತೆ ನೋಡುವ ಮೂಲಕ ಆಚರಿಸಿದ್ದಾರೆ. ಅವರು ಬೇರೆಯಾರೂ ಅಲ್ಲ. ಯುವರಾಜ್ ಸಿಂಗ್ ಅವರ ಪುತ್ರ ಒರಿಯನ್ ಕೀಚ್ ಸಿಂಗ್ (Orion Keech Singh). ತನ್ನ ಪುಟ್ಟ ಮಗನನ್ನು ಕಾಲಿನ ಮೇಲೆ ಕೂರಿಸಿಕೊಂಡು ವಿಶ್ವಕಪ್‌ನಲ್ಲಿ ತಾವೇ ಬಾರಿಸಿದ್ದ ಆರು ಸಿಕ್ಸರ್‌ಗಳ ಹೈಲೈಟ್‌ಅನ್ನು ನೋಡಿದ್ದಾರೆ. ಇದನ್ನು ಸೋಷಿಯಲ್ ಮೀಡಿಯಾದಲ್ಲಿ (Stuart Broad) ಶೇರ್ ಮಾಡಿರುವ ಯುವಿ, "15 ವರ್ಷಗಳ ನಂತರ ಇದನ್ನು ಒಟ್ಟಿಗೆ ವೀಕ್ಷಿಸಲು ಇದಕ್ಕಿಂತ ಉತ್ತಮ ಪಾರ್ಟ್‌ನರ್ ಹುಡುಕಲಾಗಲಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ.
ಭಾರತೀಯ ಕ್ರಿಕೆಟ್‌ನ ದಾದಾ, ಸೌರವ್ ಗಂಗೂಲಿಗೆ 50ನೇ ಜನ್ಮದಿನದ ಸಂಭ್ರಮ!
2007ರಲ್ಲಿ ಸ್ಕಾಟ್ಲೆಂಡ್ (2007 T20 World Cup)ವಿರುದ್ಧ ಆಡುವ ಮೂಲಕ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಟಿ20 (T20I) ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ತಮ್ಮ ಜೀವನದಲ್ಲಿ ಒಟ್ಟಾರೆ 58 ಟಿ20 ಪಂದ್ಯಗಳನ್ನು ಆಡಿರುವ ಯುವಿ, 1177 ರನ್ ಬಾರಿಸಿದ್ದಾರೆ. ಅದಲ್ಲದೆ, 8 ಅರ್ಧಶತಕಗಳನ್ನೂ ಬಾರಿಸಿರುವ ಯುವರಾಜ್, 28 ವಿಕೆಟ್ ಕೂಡ ಉರುಳಿಸಿದ್ದಾರೆ.
ಮಗನ ಫಸ್ಟ್ ಫೋಟೋ ಜೊತೆ ಹೆಸರನ್ನೂ ರೀವಿಲ್ ಮಾಡಿದ ಕ್ರಿಕೆಟಿಗ Yuvraj Singh
ಭಾರತದ ಎರಡೂ ವಿಶ್ವಕಪ್ ಗೆಲುವುಗಳಲ್ಲಿ ಅಭೂತಪೂರ್ವ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ಅವರ ತವರು ಕ್ರಿಕೆಟ್ ಸಂಸ್ಥೆ,ಪಂಜಾಬ್ ಕ್ರಿಕೆಟ್ ಬೋರ್ಡ್ ಸ್ಮರಣೀಯವಾಗಿ ಗೌರವ ಸಲ್ಲಿಸಿದೆ. ಮೊಹಾಲಿ ಸ್ಟೇಡಿಯಂನಲ್ಲಿರುವ ಒಂದು ಸ್ಟ್ಯಾಂಡ್‌ಗೆ ಅವರ ಹೆಸರನ್ನೇ ಇಡಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯ ಮಂಗಳವಾರ ನಡೆಯಲಿದ್ದು, ಈ ವೇಳೆ ಹೆಸರನ್ನು ಅಧಿಕೃತವಾಗಿ ಇರಿಸಲಾಗುತ್ತದೆ. 2016ರಲ್ಲಿ ಬಾಲಿವುಡ್ ನಟಿ ಹಜೆಲ್ ಕೀಚ್ ಅವರನ್ನು ವಿವಾಹವಾಗಿದ್ದರು. ಈ ವರ್ಷದ ಜನವರಿಯಲ್ಲಿ ದಂಪತಿಗಳು ಪುತ್ರ ಒರಿಯನ್ ಕೀಚ್ ಸಿಂಗ್‌ರ ಆಗಮನವನ್ನು ಘೋಷಣೆ ಮಾಡಿದ್ದರು.