ಟಿ20 ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಗೊಂಡಿದೆ. ಈಗಾಗಲೇ ಬಿಸಿಸಿಐ ತಂಡ ಪ್ರಕಟಿಸಿದೆ. ಇದೀಗ ಪ್ರತಿಷ್ಠಿತ ಟೂರ್ನಿಗೆ ಜರ್ಸಿ ಅನಾವರಣ ಮಾಡಿದೆ. 2007ರಲ್ಲಿ ಟಿ20 ವಿಶ್ವಕಪ್ ಗೆದ್ದಾಗ ಟೀಂ ಇಂಡಿಯಾ ಧರಿಸಿದ್ದ ಸ್ಕೈ ಬ್ಲೂ ಕಲರ್‌ನಲ್ಲಿ ಇದೀಗ ಹೊಸ ಜರ್ಸಿ ಅನಾವರಣ ಮಾಡಲಾಗಿದೆ.
ಮುಂಬೈ(ಸೆ.18): ಪ್ರತಿಷ್ಠಿತ ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ಈಗಾಗಲೇ ಬಿಸಿಸಿಐ ತಂಡ ಪ್ರಕಟಿಸಿದೆ. ಇದೀಗ ಟೂರ್ನಿಗೆ ಜರ್ಸಿ ಅನಾವರಣ ಮಾಡಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಯಕ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಮಹಿಳಾ ಟಿ20 ತಂಡದ ನಾಯಕ ಹರ್ಮನ್ ಪ್ರೀತ್ ಕೌರ್, ಶೆಫಾಲಿ ವರ್ಮಾ, ರೇಣುಕಾ ಸಿಂಗ್ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕ್ರಿಕೆಟಿಗರು ನೂತನ ಜರ್ಸಿ ಅನಾವರಣ ಮಾಡಿದರು. ನೂತನ ಜರ್ಸಿ ಧರಿಸಿ ಫೋಸ್ ನೀಡಿದ ಕ್ರಿಕೆಟಿಗರು ಹೊಸ ಜರ್ಸಿ ಅನಾವಣರ ಮಾಡಿದರು. ವಿಶೇಷ ಅಂದರೆ ಟೀಂ ಇಂಡಿಯಾ ಟಿ20 ತಂಡಕ್ಕೆ ಸ್ಕೈ ಬ್ಲೂ ಕಲರ್ ಮತ್ತೆ ಬಂದಿದೆ. ಡಾರ್ಕ್ ಬ್ಲೂನಿಂದ ಇದೀಗ ಟೀಂ ಇಂಡಿಯಾ 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಭಾರತ ತೊಟ್ಟಿದ್ದ ಸ್ಕೈ ಬ್ಲೂ ಜರ್ಸಿಯನ್ನು ಮತ್ತೆ ತಂದಿದೆ. ಆದರೆ ಈ ಬಾರಿ ಕೆಲ ಬದಲಾವಣೆಗಳನ್ನು ಮಾಡಿ ಹೊಸ ಜರ್ಸಿ ಅನಾವರಣ ಮಾಡಿದ್ದಾರೆ.
2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಧರಿಸಿದ್ದ ಜರ್ಸಿಯನ್ನು ಮಿಶ್ರಣ ಮಾಡಲಾಗಿದೆ. ಸ್ಕೈ ಬ್ಲೂ ಕಲರ್ ಜೊತೆ ಭುಜದ ಭಾಗದಲ್ಲಿ ಡಾರ್ಕ್ ಬ್ಲೂ ಬಣ್ಣ ನೀಡಲಾಗಿದೆ. ಈ ಬಾರಿ ಶತಾಯಗತಾಯವಾಗಿ ಟಿ20 ಟ್ರೋಫಿ(T20 World Cup 2022) ಗೆಲುವಿಗೆ ಟೀಂ ಇಂಡಿಯಾ(Team India) ಹಾಗೂ ಬಿಸಿಸಿಐ(BCCI)ತಯಾರಿ ಮಾಡಿಕೊಳ್ಳುತ್ತಿದೆ.
ಟಿ20 ವಿಶ್ವಕಪ್‌ನಲ್ಲಿ Virat Kohli ಆರಂಭಿಕರಾಗಿ ಕಣಕ್ಕಿಳಿತಾರಾ..? ರೋಹಿತ್ ಶರ್ಮಾ ಹೇಳಿದ್ದೇನು?
ಇದಕ್ಕಾಗಿ ಟೀಂ ಇಂಡಿಯಾದ ಅದೃಷ್ಠದ ಹಾಗೂ ಚಾಂಪಿಯನ್ ಜರ್ಸಿಯನ್ನು(Team India Jersey) ಮಿಶ್ರಣ ಮಾಡಿ ನೂತನ ಜರ್ಸಿ ಅನಾವರಣ ಮಾಡಲಾಗಿದೆ. 2007ರಲ್ಲಿ ಧೋನಿ ನಾಯಕತ್ವದ ತಂಡ ಚೊಚ್ಚಲ ಟಿ20 ವಿಶ್ವಕಪ್ ಟೂರ್ನಿ ಗೆದ್ದುಕೊಂಡಿತ್ತು. ಬಳಿಕ 2011ರಲ್ಲಿ ಧೋನಿ ನಾಯತ್ವದ ತಂಡ ಏಕದಿನ ವಿಶ್ವಕಪ್ ಟೂರ್ನಿ ಗೆದ್ದುಕೊಂಡಿತ್ತು. ಇದೀಗ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಹೊಸ ಇತಿಹಾಸ ರಚಿಸಲು ತಯಾರಿ ನಡೆಸಿದೆ.
To every cricket fan out there, this one’s for you.
Presenting the all new T20 Jersey - One Blue Jersey by . pic.twitter.com/3VVro2TgTT
ಟಿ20 ವಿಶ್ವಕಪ್ ಟೂರ್ನಿ
16 ತಂಡಗಳ ನಡುವಿನ ಚುಟುಕು ಕ್ರಿಕೆಟ್ ಟೂರ್ನಿ ಅ.16ಕ್ಕೆ ಆರಂಭವಾಗಲಿದ್ದು, ಆಸ್ಪ್ರೇಲಿಯಾದ ಮೆಲ್ಬರ್ನ್, ಸಿಡ್ನಿ, ಅಡಿಲೇಡ್, ಪಥ್‌ರ್ ಸೇರಿದಂತೆ 7 ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಆಸ್ಪ್ರೇಲಿಯಾ, ಬಾಂಗ್ಲಾದೇಶ, ದ.ಆಫ್ರಿಕಾ, ಅಷ್ಘಾನಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಸೂಪರ್-12 ಹಂತಕ್ಕೆ ನೇರ ಪ್ರವೇಶ ಪಡೆದಿದ್ದು, ತಲಾ 4 ತಂಡಗಳ 2 ಗುಂಪುಗಳಾಗಿ ವಿಂಗಡಿಸಲಾಗಿದೆ. ವೆಸ್ಟ್‌ಇಂಡೀಸ್, ಶ್ರೀಲಂಕಾ ಸೇರಿದಂತೆ 8 ತಂಡಗಳು ಅರ್ಹತಾ ಟೂರ್ನಿಯಲ್ಲಿ ಆಡಲಿದ್ದು, ಈ ಪೈಕಿ 4 ತಂಡಗಳು ಸೂಪರ್-12ಕ್ಕೆ ಪ್ರವೇಶಿಸಲಿವೆ. ಕಳೆದ ವರ್ಷ ಯುಎಇಯಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಆಸ್ಪ್ರೇಲಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ICC T20 World Cup Squad: ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟ
ಭಾರತ-ಪಾಕ್ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಸೋಲ್ಡ್‌ಔಟ್!
ಸಾಂಪ್ರದಾಯಿಕ ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ತಂಡಗಳು ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಮ್ಮೆ ಕಾದಾಡಲಿದ್ದು, ಹೈವೋಲ್ಟೇಜ್ ಪಂದ್ಯದ ಎಲ್ಲಾ ಟಿಕೆಟ್‌ಗಳು ಒಂದು ತಿಂಗಳ ಮೊದಲೇ ಸೋಲ್ಡ್ ಔಟ್ ಆಗಿವೆ. ಈ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಬುಧವಾರ ಪ್ರಕಟಣೆ ಹೊರಡಿಸಿದ್ದು, ಭಾರತ-ಪಾಕ್ ನಡುವೆ ಅ.23ಕ್ಕೆ ಪ್ರತಿಷ್ಠಿತ ಮೆಲ್ಬರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಹೆಚ್ಚುವರಿ ಸ್ಟಾಂಡಿಂಗ್ ರೂಮ… ಟಿಕೆಟ್‌ಗಳ ಮಾರಾಟವನ್ನು ಪ್ರಾರಂಭಿಸಿದ ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಬಿಕರಿಯಾಗಿದೆ ಎಂದು ಮಾಹಿತಿ ನೀಡಿದೆ.