ಮುಂಬರುವ ಟಿ20 ವಿಶ್ವಕಪ್‌ಗೆ ಎಲ್ಲಾ ತಂಡಗಳು ತನ್ನ ಹೊಸ ಜೆರ್ಸಿಯನ್ನು ಪ್ರಕಟ ಮಾಡಿದೆ. ಭಾರತ ತಂಡ ಕೂಡ ತನ್ನ ಹೊಸ ಜೆರ್ಸಿಯನ್ನು ಅನಾವರಣ ಮಾಡಿದೆ. ಇದರ ನಡುವೆ ಪಾಕಿಸ್ತಾನ ತಂಡದ ಹೊಸ ಜೆರ್ಸಿಯನ್ನು ಧರಿಸಿ ನಾಯಕ ಬಾಬರ್ ಅಜಮ್ ಪೋಸ್ ನೀಡಿದ್ದು, ಭಾರತದ ಅಭಿಮಾನಿಗಳು ಪಾಕ್ ತಂಡ ಜೆರ್ಸಿಯನ್ನು ಟ್ರೋಲ್ ಮಾಡಿದ್ದಾರೆ.
ಬೆಂಗಳೂರು (ಸೆ.19): ಮುಂಬರುವ ಐಸಿಸಿ ಟಿ20 ವಿಶ್ವಕಪ್ 2022 ಗಾಗಿ ಭಾರತೀಯ ಕ್ರಿಕೆಟ್ ತಂಡದ ಹೊಸ ಜೆರ್ಸಿಯನ್ನು ಅಧಿಕೃತ ಕಿಟ್ ಪ್ರಾಯೋಜಕರು ಭಾನುವಾರ ಬಿಡುಗಡೆ ಮಾಡಿದರು. ಸೆಪ್ಟೆಂಬರ್ 20 ರಿಂದ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಮೊದಲ ಬಾರಿಗೆ ಈ ಜೆರ್ಸಿಯನ್ನು ಧರಿಸಿ ಆಡಲಿದೆ. ಆ ಬಳಿಕ ಸೆಪ್ಟೆಂಬರ್ 28 ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲೂ ಇದರಲ್ಲಿ ಧರಿಸಿ ಆಡಲಿದೆ. ಮತ್ತೊಂದೆಡೆ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಹೊಸ ಜೆರ್ಸಿಯೊಂದಿಗೆ ಫೋಟೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಾಕಿಸ್ತಾನ ತಂಡದ ಜೆರ್ಸಿ ಅನಾವರಣ ಆಗುತ್ತಿದ್ದಂತೆ ಭಾರತದ ಕ್ರಿಕೆಟ್ ಅಭಿಮಾನಿಗಳು ಹೊಸ ಜೆರ್ಸಿಯನ್ನು ಸಖತ್ ಆಗಿ ಟ್ರೋಲ್ ಮಾಡಿದ್ದಾರೆ. ಟೀಮ್ ಇಂಡಿಯಾ ಜೆರ್ಸಿಗೆ ಹೋಲಿಸಿದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಜೆರ್ಸಿಯ ವಿನ್ಯಾಸ ಅತೀ ಕಳಪೆ ಮಟ್ಟದಲ್ಲಿದೆ ಎಂದು ಟ್ರೋಲ್ ಮಾಡಿದ್ದಾರೆ. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾತ್ರ ಹೊಸ ಕಿಟ್‌ನ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಮಾಧ್ಯಮಗಳಿಗೆ ನೀಡಿಲ್ಲ.
T20 WorldCup 2022 Pakistan Kit pic.twitter.com/FJAW7yImYv
— Syed Jalal Haider (@Jalal_haider003)ಟೀಮ್ ಇಂಡಿಯಾದ ಜೆರ್ಸಿ ಅನಾವರಣಗೊಂಡ ಬೆನ್ನಲ್ಲಿಯೇ ಪಾಕಿಸ್ತಾನದ ಮೊಹಮದ್ ಪರ್ವೇಜ್ (@mparveeez7) ಎನ್ನುವ ವ್ಯಕ್ತಿ, ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಹಾಗಿದ್ದರೂ ತಮ್ಮ ಕಿಟ್‌ಗೆ ಉತ್ತಮ ವಿನ್ಯಾಸಕಾರನನ್ನು ನಿಗದಿ ಮಾಡಿಲ್ಲ. ಫುಟ್‌ಪಾತ್‌ನಲ್ಲಿರುವ 150 ರೂಪಾಯಿ ಜೆರ್ಸಿ ರೀತಿ ಇದೆ ಎಂದು ಟ್ರೋಲ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಭಾರತದ ಅಭಿಮಾನಿಯೊಬ್ಬ ಬಿಸಿಸಿಐ, ತನ್ನ ಡಿಸೈನರ್ ಸಲುವಾಗಿ ಎಷ್ಟು ಹಣ ಖರ್ಚು ಮಾಡುತ್ತದೆಯೋ ಅಷ್ಟು ಹಣದಲ್ಲಿ ಇಡೀ ಪಾಕಿಸ್ತಾನವನ್ನು ನಡೆಸಬಹುದು. ಈಗ ನೀವು ಜೆರ್ಸಿ ಚೆನ್ನಾಗಿಲ್ಲ ಎಂದು ಹೇಳುತ್ತಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.
ಟೀಮ್ ಇಂಡಿಯಾದ ಜೆರ್ಸಿ ಪಾಕಿಸ್ತಾನದ ಸೆಂಟರ್ ಫ್ರೆಶ್ ಮಿಂಗಲ್ ಸ್ಟೈಲ್ ಜೆರ್ಸಿಗಿಂತ ಪರವಾಗಿಲ್ಲ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದರೆ, ಮತ್ತೊಬ್ಬ ಅಭಿಮಾನಿ ಇದು ಟೀಮ್ ಜೆರ್ಸಿನಾ ಅಥವಾ ಕಲ್ಲಂಗಡಿ ಹಣ್ಣಾ ಎಂದು ಬರೆದುಕೊಂಡಿದ್ದಾರೆ.
undefined
ಕಿಂಗ್ ಕೊಹ್ಲಿಗೆ ಹಾಂಕಾಂಗ್ ತಂಡದ ಸ್ಪೆಷಲ್ ಗಿಫ್ಟ್ 'ಒಂದು ಯುಗದ ಕ್ರಿಕೆಟಿಗರ ಸ್ಫೂರ್ತಿ ನೀವು' ಎಂದ ಟೀಮ್
ಪಾಕಿಸ್ತಾನವು ತಮ್ಮ ಹೊಸ T20 ಕಿಟ್‌ನ ಬಿಡುಗಡೆಯನ್ನು ಪ್ರಕಟಿಸಿದೆ.. ಇದನ್ನು ಬಾಬರ್ ಅಜಮ್ ನೇತೃತ್ವದ ತಂಡವು ಮೆಗಾ-ಈವೆಂಟ್‌ನಲ್ಲಿ ಧರಿಸಿದೆ. ಶೀಘ್ರದಲ್ಲಿಯೇ ಪಾಕಿಸ್ತಾನ ಕ್ರಿಕೆಟ್ ತಂಡದ ಹೊಸ ಜೆರ್ಸಿ ಅನಾವರಣವಾಗಲಿದ್ದು, ಇದರ ನಡುವೆ ಬಾಬರ್ ಅಜಮ್ ಹೊಸ ಕಿಟ್ ಧರಿಸಿರುವ ಕೆಲ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿವೆ.
T20 WORLD CUP ಟೀಂ ಇಂಡಿಯಾ ನೂತನ ಜರ್ಸಿ ಅನಾವರಣ, ಮರುಕಳಿಸಿತು 2007ರ ಚಾಂಪಿಯನ್ ಕಲರ್!
ಹೊಸ ಕಿಟ್‌ನ ವಿನ್ಯಾಸವು ಗುಡುಗುಗಳಿಂದ ಪ್ರೇರಿತವಾಗಿದೆ, ಇದನ್ನು ಅಂಗಿಯ ಮೇಲೆ ತಿಳಿ ಹಸಿರು ರೇಖೆಗಳ ಮೂಲಕ ಚಿತ್ರಿಸಲಾಗಿದೆ. ಕಿಟ್‌ನ ಮುಖ್ಯ ಆಧಾರವು ಕಡು ಹಸಿರು ಬಣ್ಣದ್ದಾಗಿದ್ದು, ವಿವಿಧ ಛಾಯೆಗಳ ಹಸಿರು ಶರ್ಟ್‌ನಾದ್ಯಂತ ಚಲಿಸುತ್ತದೆ. ಆದರೆ, ಭಾರತದ ಅಭಿಮಾನಿಗಳು ಈ ಜೆರ್ಸಿ ವಿನ್ಯಾಸವನ್ನು ಟೀಕೆ ಮಾಡಿದ್ದಾರೆ. ಇನ್ನು ಈ ಸೋರಿಕೆಯಾಗಿರುವ ಚಿತ್ರಗಳು ಪಾಕಿಸ್ತಾನ ತಂಡದ ಅಧಿಕೃತ ಜೆರ್ಸಿಯದ್ದೇ ಎನ್ನುವ ಮಾಹಿತಿ ಲಾಭ್ಯವಾಗಿಲ್ಲ. ಆದರೆ, ತಂಡ ಹೊಸ ಜೆರ್ಸಿಯನ್ನು ಧರಿಸಿ ವಿಶ್ವಕಪ್‌ನಲ್ಲಿ ಆಡುವುದು ಮಾತ್ರ ಖಚಿತವಾಗಿದೆ. ಏತನ್ಮಧ್ಯೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) 2022 ರ ಟಿ 20 ವಿಶ್ವಕಪ್‌ನ ಅಧಿಕೃತ ಕಿಟ್ ಅನಾವರಣವನ್ನು ಸೋಮವಾರ ಮಾಡಲಿದೆ ಎಂದು ತನ್ನ ಟ್ವಿಟರ್ ಪುಟದಲ್ಲಿ ತಿಳಿಸಿದೆ. ಥಂಡರ್ ಅವೇಟ್ಸ್ ಎಂದು ಶೀರ್ಷಿಕೆ ಕೊಟ್ಟು ಹೊಸ ಜೆರ್ಸಿ ಬಿಡುಗಡೆಯ ಮಾಹಿತಿ ನೀಡಿದೆ.