ಬಾಲಿವುಡ್ ನಟಿ ಸೈಯಾಮಿ ಕ್ರಿಕೆಟ್‌ ಆಟಕ್ಕೆ ಯುವರಾಜ್ ಸಿಂಗ್ ಫಿದಾ!

Suvarna News   | Asianet News
Published : Jan 02, 2020, 09:34 PM ISTUpdated : Jan 02, 2020, 09:38 PM IST
ಬಾಲಿವುಡ್ ನಟಿ ಸೈಯಾಮಿ ಕ್ರಿಕೆಟ್‌ ಆಟಕ್ಕೆ ಯುವರಾಜ್ ಸಿಂಗ್ ಫಿದಾ!

ಸಾರಾಂಶ

ಟೀಂ ಇಂಡಿಯಾ ಕಂಡ ಶ್ರೇಷ್ಠ ಆಲ್ರೌಂಡರ್ ಯುವರಾಜ್ ಸಿಂಗ್ ಕ್ರಿಕೆಟ್‌ಗೆ ವಿದಾಯ ಹೇಳಿದರೂ ಕ್ರಿಕೆಟ್‌ನನಲ್ಲೇ ಮುಳುಗಿರುತ್ತಾರೆ. ಯುವಿ ವಿಶ್ರಾಂತಿಯಲ್ಲಿದ್ದರೂ, ಪ್ರತಿ ಪಂದ್ಯವನ್ನೂ ವೀಕ್ಷಿಸುತ್ತಾರೆ. ಇದೀಗ ಬಾಲಿವುಡ್ ನಟಿ 2020ರ ಹೊಸ ವರ್ಷಕ್ಕೆ ಕ್ರಿಕೆಟ್‌ನ ಫ್ರೆಂಟ್ ಫೂಟ್ ಶಾಟ್ ವಿಡಿಯೋ ಹಾಕಿದ್ದಾರೆ. ನಟಿಯ ಕ್ರಿಕೆಟ್ ಆಟಕ್ಕೆ ಯುವಿ ಫಿದಾ ಆಗಿದ್ದಾರೆ. 

ಮುಂಬೈ(ಜ.02): ಕ್ರಿಕೆಟ್ ವಿದಾಯ ಹೇಳಿರುವ ಯುವರಾಜ್ ಸಿಂಗ್ ವಿದೇಶಿ ಟಿ10 ಲೀಗ್ ಟೂರ್ನಿಗಳಲ್ಲಿ ಪಾಲ್ಗೊಳ್ಳೋ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಿದ್ದಾರೆ. ವಿಶ್ರಾಂತಿಯಲ್ಲೂ ಕ್ರಿಕೆಟ್ ಫಾಲೋ ಮಾಡವ ಯುವರಾಜ್ ಸಿಂಗ್ ಬಾಲಿವುಡ್ ನಟಿ ಸೈಯಾಮಿ ಖೇರ್ ಕ್ರಿಕೆಟ್ ಆಟಕ್ಕೆ ಫಿದಾ ಆಗಿದ್ದಾರೆ. ಹೊಸ ವರ್ಷಕ್ಕೆ ಸಿಯಾಮಿ ವಿಡಿಯೋ ಯುವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ: ಗೆಲುವಿನ ಖುಷಿಯಲ್ಲಿರುವ ಕೊಹ್ಲಿ ಸೈನ್ಯದ ವಿರುದ್ದ ಯುವರಾಜ್ ಅಸಮಧಾನ!

2020ರ ಹೊಸ ವರ್ಷಕ್ಕೆ ಸೈಯಾಮಿ ಖೇರ್ ವಿಡಿಯೋವೊಂದನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕ್ರಿಕೆಟ್‌ನ ಫ್ರಂಟ್ ಫೂಟ್ ಶಾಟ್ ಹೊಡೆತ ವಿಡಿಯೋ ಶೇರ್ ಮಾಡಿರುವಸೈಯಾಮಿಗೆ ಯುವಿ ಪ್ರತಿಕ್ರಿಯೆ ನೀಡಿದ್ದಾರೆ. ಶಾಟ್ ಬಡಿ ಎಂದು ಹೇಳುವ ಮೂಲಕಸೈಯಾಮಿ ಕ್ರಿಕೆಟ್ ಕೌಶಲ್ಯವನ್ನು ಯುವಿ ಮೆಚ್ಚಿಕೊಂಡಿದ್ದಾರೆ.

 

ಇದನ್ನೂ ಓದಿ: 3 ವರ್ಷಗಳ ಬಳಿಕ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಯುವರಾಜ್!

2019ರಲ್ಲಿ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಬಳಿಕ ನವೆಂಬರ್ ತಿಂಗಳಲ್ಲಿ ದುಬೈನಲ್ಲಿ ಆಯೋಜಿಸಲಾದ ಟಿ10 ಲೀಗ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಮರಾಠ ಅರೇಬಿಯನ್ಸ್ ತಂಡದ ನಾಯಕನಾಗಿದ್ದ ಯುವಿ, ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!