ಭಾರತ vs ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ, ತಂಡದ ವಿವರ ಇಲ್ಲಿದೆ!

Suvarna News   | Asianet News
Published : Jan 02, 2020, 03:07 PM IST
ಭಾರತ vs ಶ್ರೀಲಂಕಾ ಟಿ20 ಸರಣಿ ವೇಳಾಪಟ್ಟಿ, ತಂಡದ ವಿವರ ಇಲ್ಲಿದೆ!

ಸಾರಾಂಶ

2020ರ ಮೊದಲ ಸರಣಿಗೆ ಕೊಹ್ಲಿ ಸೈನ್ಯ ರೆಡಿಯಾಗಿದೆ. ವಿಂಡೀಸ್ ಸರಣಿ ಬಳಿಕ ವಿಶ್ರಾಂತಿಗೆ ಜಾರಿದ್ದ ಟೀಂ ಇಂಡಿಯಾ ತವರಿನ ಮತ್ತೊಂದು ಸರಣಿಗೆ ತಯಾರಿ ಆರಂಭಿಸಲಿದೆ.  ಈ ವರ್ಷದ ಮೊದಲ ಸರಣಿ ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿ ವೇಳಾಪಟ್ಟಿ ವಿವರ ಇಲ್ಲಿದೆ.

ಮುಂಬೈ(ಜ.02): ಹೊಸ ವರ್ಷವನ್ನು ಟೀಂ ಇಂಡಿಯಾ ಕ್ರಿಕೆಟಿಗರು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆ ವರ್ಷಾಚರಣೆ ಆಚರಿಸಿದ್ದರೆ, ಹಾರ್ದಿಕ್ ಪಾಂಡ್ಯ, ಬಾಲಿವುಡ್ ನಟಿ ನತಾಶ ಸ್ಟಾಕೊಂವಿಚ್ ಜೊತೆ ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ಆಚರಿಸಿದ್ದಾರೆ. ಇದೀಗ ಕ್ರಿಕೆಟಿಗರು ಹೊಸ ವರ್ಷದ ಮೊದಲ ಸರಣಿಗೆ ಸಜ್ಜಾಗಿದ್ದಾರೆ.

ಇದನ್ನೂ ಓದಿ: ವಂಚನೆ ಪ್ರಕರಣ; ಭಾರತದ ಕ್ರಿಕೆಟಿಗ ಅಮಾನತು

2020ರಲ್ಲಿ ಟೀಂ ಇಂಡಿಯಾ ಬಿಡುವಿಲ್ಲದ ಕ್ರಿಕೆಟ್ ಸರಣಿ ಆಡಲಿದೆ. ನ್ಯೂಜಿಲಂಡ್ ಪ್ರವಾಸ, ಐಪಿಎಲ್, ಟಿ20 ವಿಶ್ವಕಪ್ ಸೇರಿದಂತೆ ಹಲವು ಸಾವಾಲುಗಳು ಭಾರತದ ಮುಂದಿದೆ. ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಕ್ರಿಕೆಟ್ ಸರಣಿ ಜನವರಿ 5 ರಿಂದ ಆರಂಭಗೊಳ್ಳಲಿದೆ. 3 ಪಂದ್ಯಗಳ ಸರಣಿ ಬಳಿಕ ಭಾರತ ಆಸ್ಟ್ರೇಲಿಯಾ ವಿರುದ್ದ ಏಕದಿನ ಸರಣಿ ಆಡಲಿದೆ. 

ಇದನ್ನೂ ಓದಿ: ಟೀಂ ಇಂಡಿಯಾವೇ ಈ ಸಲ ಟಿ20 ವಿಶ್ವಕಪ್ ಗೆಲ್ಲೋದು

ಭಾರತ -ಶ್ರೀಲಂಕಾ ಟಿ20 ಸರಣಿ
ಜ.5, 1ನೇ ಟಿ20, ಗುವಹಾಟಿ
ಜ.7, 2ನೇ ಟಿ20, ಇಂದೋರ್
ಜ.10, 3ನೇ ಟಿ20, ಪುಣೆ

ಭಾರತ ತಂಡ:
ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ರವೀಂದ್ರ ಜಡೇಜಾ, ಶಿವಂ ದುಬೆ, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ, ಶಾರ್ದೂಲ್ ಠಾಕೂ್, ಮನೀಶ್ ಪಾಂಡೆ, ವಾಶಿಂಗ್ಟನ್ ಸುಂದರ್, ಸಂಜು ಸಾಮ್ಸನ್
 
ಶ್ರೀಲಂಕಾ ತಂಡ:
ಲಸಿತ್ ಮಲಿಂಗ(ನಾಯಕ), ಧನುಷ್ಕಾ ಗುಣತಿಲಕ, ಅವಿಷ್ಕಾ ಫೆರ್ನಾಂಡೋ, ಎಂಜಲೋ ಮ್ಯಾಥ್ಯೂಸ್, ದಸೂನ್ ಶನಕ, ಕುಸಾಲ್ ಪೆರೇರಾ, ನಿರೋಶನ್ ಡಿಕ್ವೆಲ್ಲಾ, ಧನಂಜಯ ಡಿಸಿಲ್ವ, ಇಸುರು ಉಡಾನ, ಭಾನುಕಾ ರಾಜಪಕ್ಸಾ, ಒಶಾಡಾ ಫೆರ್ನಾಡೋ, ವಾನಿಂಡು ಹಸರಂಗ, ಲಹೀರು ಕುಮಾರ, ಕುಸಾಲ್ ಮೆಂಡೀಸ್, ಲಕ್ಶನ್ ಸಂದಕನ್, ಕಸೂನ್ ರಜಿತಾ
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!
14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!