ಡಬಲ್ ಹ್ಯಾಟ್ರಿಕ್‌; 1 ಓವರಲ್ಲಿ 6 ವಿಕೆಟ್‌ ಕಿತ್ತ 12 ವರ್ಷದ ಆಲಿವರ್‌!

By Naveen Kodase  |  First Published Jun 17, 2023, 11:57 AM IST

ಕೌಂಟಿ ಬೋರ್ಡ್‌ ಟೂರ್ನಿ​ಯಲ್ಲಿ ಅಪರೂಪದ ದಾಖಲೆ ಬರೆದ 12 ವರ್ಷದ ಕ್ರಿಕೆಟಿಗ'
ಬ್ರೊಮ್ಸ್‌​ಗ್ರೋವ್‌ ತಂಡದ ಪರ ಆಡು​ತ್ತಿ​ರುವ ಆಲಿ​ವರ್‌ ವೈಟ್‌​ಹೌಸ್‌ ಒಂದೇ ಓವರ್‌ನಲ್ಲಿ 6 ವಿಕೆಟ್
2 ಓವರ್‌ ಎಸೆದು ಒಂದೂ ರನ್‌ ನೀಡದೆ 8 ವಿಕೆಟ್‌ ಪಡೆದ ಆಲಿ​ವರ್‌ ವೈಟ್‌​ಹೌಸ್‌


ಲಂಡ​ನ್‌(ಜೂ.17): ಒಂದೇ ಓವ​ರಲ್ಲಿ ಡಬಲ್‌ ಹ್ಯಾಟ್ರಿ​ಕ್‌​(6 ವಿಕೆ​ಟ್‌) ಕಬ​ಳಿ​ಸುವ ಮೂಲಕ ಇಂಗ್ಲೆಂಡ್‌ನ 12 ವರ್ಷದ ಬಾಲಕ ಅಪ​ರೂ​ಪದ ದಾಖಲೆ ಮಾಡಿ​ದ್ದಾನೆ. ವೋರ್ಸೆ​ಸ್ಟ​ರ್‌​ಶೈರ್‌ ಕೌಂಟಿ ಬೋರ್ಡ್‌ ಟೂರ್ನಿ​ಯಲ್ಲಿ ಬ್ರೊಮ್ಸ್‌​ಗ್ರೋವ್‌ ತಂಡದ ಪರ ಆಡು​ತ್ತಿ​ರುವ ಆಲಿ​ವರ್‌ ವೈಟ್‌​ಹೌಸ್‌ ಇತ್ತೀ​ಚೆ​ಗೆ ಕುಕ್‌​ಹಿಲ್‌ ತಂಡದ ಈ ವಿರುದ್ಧ ಈ ಸಾಧನೆ ಮಾಡಿ​ದ್ದಾನೆ. 

ಒಂದೇ ಓವ​ರ್‌ನ ಆರೂ ಎಸೆ​ತ​ಗ​ಳಲ್ಲಿ 6 ವಿಕೆಟ್‌ ಪಡೆ​ದಿ​ದ್ದ​ಲ್ಲದೇ ಒಟ್ಟು 2 ಓವರ್‌ ಎಸೆದು ಒಂದೂ ರನ್‌ ನೀಡದೆ 8 ವಿಕೆಟ್‌ ಪಡೆ​ದಿ​ದ್ದಾನೆ. ಅಂದ​ ಹಾಗೆ ಆಲಿ​ವರ್‌ 3 ಗ್ರ್ಯಾನ್‌ಸ್ಲಾಂ ಟೆನಿಸ್‌ ಪ್ರಶಸ್ತಿ ವಿಜೇತೆ, ಬ್ರಿಟ​ನ್‌ನ ಆ್ಯನ್‌ ಜಾನ್ಸ್‌ ಅವರ ಮೊಮ್ಮಗ. ಆ್ಯನ್‌ ಜಾನ್ಸ್‌ 1969ರಲ್ಲಿ ವಿಂಬಲ್ಡನ್ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಜಯಿಸಿದ್ದರು.

Latest Videos

undefined

ಜೂನ್ 09ರಂದು ನಡೆದ ಪಂದ್ಯದಲ್ಲಿ ಬ್ರೊಮ್ಸ್‌​ಗ್ರೋವ್‌ ಪರ ಕಣಕ್ಕಿಳಿದ ಆಲಿ​ವರ್‌ ವೈಟ್‌​ಹೌಸ್‌, ಕುಕ್‌ಹಿಲ್ ಎದುರಿನ ಪಂದ್ಯದಲ್ಲಿ ಈ ಅಪರೂಪದ ದಾಖಲೆ ನಿರ್ಮಿಸಿದ್ದಾನೆ. ಹೇಗ್ಲೆಯ ಬ್ರೊಮ್ಸ್‌​ಗ್ರೋವ್‌ ಶಾಲಾ ವಿದ್ಯಾರ್ಥಿ ಆಗಿರುವ ಆಲಿವರ್ ವೈಟ್‌ಹೌಸ್, ಮೊದಲ ಬಾಲ್‌ನಲ್ಲೇ ವಿಕೆಟ್ ಕಬಳಿಸುತ್ತೇನೆ ಎನ್ನುವುದು ನನಗೆ ಗೊತ್ತಿರಲಿಲ್ಲ. ಮೊದಲ ಬಾಲ್ ವೈಡ್ ಹೋಗುತ್ತೇನೋ ಅಂದುಕೊಂಡಿದ್ದೆ ಎಂದು ಹೇಳಿದ್ದಾನೆ.

WTC FInal: ಟೀಂ ಇಂಡಿಯಾದ ಆಯ್ಕೆಯಲ್ಲಿ ತಪ್ಪಾಯಿತು: ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ

ಮೊದಲ ಮೂರು ವಿಕೆಟ್ ಕಬಳಿಸಿದ ಬಳಿಕ ಪ್ರೇಕ್ಷಕರು ಹ್ಯಾಟ್ರಿಕ್ ಎಂದು ಜೋರಾಗಿ ಚಪ್ಪಾಳೆ ತಟ್ಟಿದ್ದು ಖುಷಿ ಕೊಟ್ಟಿತು. ಒಂದೇ ಓವರ್‌ನ ಆರು ಎಸೆತಗಳಲ್ಲಿ ಆರು ವಿಕೆಟ್ ಕಬಳಿಸಿದ್ದು ನನಗೇ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಆಲಿವರ್ ವೈಟ್‌ಹೌಸ್ ಹೇಳಿದ್ದಾನೆ. ಇನ್ನು ಆಲಿವರ್ ವೈಟ್‌ಹೌಸ್ ಅವರ ತಂಡದ ಮೊದಲ ನಾಯಕ ಜೇಡನ್ ಲಿವಿಟ್, "ಆತ ಮಾಡಿದ ಸಾಧನೆಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆತನ ಸಾಧನೆ ಸಾಕಷ್ಟು ಮಹತ್ವವಾದದ್ದು ಎಂದು ಹೇಳಿದ್ದಾರೆ.

ಆ್ಯಷಸ್ ಸರಣಿ ಜೋ ರೂಟ್ ಶತಕ: ಬೃಹತ್ ಮೊತ್ತ ಕಲೆಹಾಕಿದ ಇಂಗ್ಲೆಂಡ್

ಬರ್ಮಿಂಗ್‌ಹ್ಯಾಮ್‌: ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ 5 ಪಂದ್ಯಗಳ ಆ್ಯ‍ಷಸ್‌ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಅಧಿಕೃತ ಚಾಲನೆ ಸಿಕ್ಕಿದ್ದು, ಮೊದಲ ದಿನವೇ ಬೆನ್ ಸ್ಟೋಕ್ಸ್‌ ನೇತೃತ್ವದ ಇಂಗ್ಲೆಂಡ್ ತಂಡವು ಸ್ಪೋಟಕ ಬ್ಯಾಟಿಂಗ್ ನಡೆಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿದೆ. ಮಾಜಿ ನಾಯಕ ಜೋ ರೂಟ್ ಬಾರಿಸಿದ ಅಜೇಯ ಶತಕ(118) ಹಾಗೂ ಜಾಕ್ ಕ್ರಾವ್ಲಿ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಜಾನಿ ಬೇರ್‌ಸ್ಟೋವ್ ಬಾರಿಸಿದ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ತಂಡವು ಮೊದಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 8 ವಿಕೆಟ್ ಕಳೆದುಕೊಂಡು 393 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಸ್ಟ್ರೇಲಿಯಾ ಎಚ್ಚರಿಕೆಯ ಆರಂಭ ಪಡೆದಿದ್ದು, ಮೊದಲ ದಿನದಾಟದಂತ್ಯದ ವೇಳೆಗೆ ವಿಕೆಟ್ ನಷ್ಟವಿಲ್ಲದೇ 14 ರನ್ ಗಳಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡವು ನಿರೀಕ್ಷೆಯಂತೆಯೇ ಬಜ್‌ಬಾಲ್ ಆಟವಾಡಿತು. ಆರಂಭದಿಂದಲೇ ಇಂಗ್ಲೆಂಡ್ ಬ್ಯಾಟರ್‌ಗಳು ಸ್ಪೋಟಕ ಆಟಕ್ಕೆ ಮೊರೆ ಹೋದರು. ಆರಂಭಿಕ ಬ್ಯಾಟರ್ ಕ್ರಾವ್ಲಿ 73 ಎಸೆತಗಳಲ್ಲಿ 61 ರನ್ ಬಾರಿಸಿದರೆ, ಮಾಜಿ ನಾಯಕ ಜೋ ರೂಟ್ 152 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಅಜೇಯ 118 ರನ್ ಬಾರಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಜಾನಿ ಬೇರ್‌ಸ್ಟೋವ್ 78 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ 78 ರನ್ ಬಾರಿಸಿ ಲಯನ್‌ಗೆ ವಿಕೆಟ್ ಒಪ್ಪಿಸಿದರು.

ಆಸ್ಟ್ರೇಲಿಯಾ ತಂಡದ ಪರ ಅನುಭವಿ ಸ್ಪಿನ್ನರ್ ನೇಥನ್ ಲಯನ್‌ 149 ರನ್ ನೀಡಿ 4 ವಿಕೆಟ್ ಪಡೆದರೆ, ಜೋಶ್ ಹೇಜಲ್‌ವುಡ್ 2 ಹಾಗೂ ಕ್ಯಾಮರೋನ್ ಗ್ರೀನ್ ಮತ್ತು ಸ್ಕಾಟ್ ಬೋಲೆಂಡ್ ತಲಾ ಒಂದು ವಿಕೆಟ್ ಪಡೆದರು..

click me!