ಸರ್ಕಾರ ಒಪ್ಪಿದರಷ್ಟೇ ಏಕದಿನ ವಿಶ್ವಕಪ್ ಆಡಲು ಪಾಕ್‌ ತಂಡ ಭಾರ​ತಕ್ಕೆ: ಪಿಸಿಬಿ ಹೊಸ ತಗಾದೆ

By Naveen Kodase  |  First Published Jun 17, 2023, 10:47 AM IST

* ಏಕದಿನ ವಿಶ್ವಕಪ್ ಟೂರ್ನಿಯ ಕುರಿತಾಗಿ ಹೊಸ ತಗಾದೆ ತೆಗೆದ ಪಾಕಿಸ್ತಾನ
* ಪಾಕ್‌ ಸರ್ಕಾರ ಒಪ್ಪಿಸದರಷ್ಟೇ ನಾವು ಭಾರತ ಪ್ರವಾಸ ಮಾಡುತ್ತೇವೆಂದ ಪಿಸಿಬಿ
* ಇನ್ನೂ ಅಧಿಕೃತವಾಗಿ ಪ್ರಕಟಗೊಳ್ಳದ ಏಕದಿನ ವಿಶ್ವಕಪ್ ವೇಳಾಪಟ್ಟಿ


ಲಾಹೋ​ರ್‌(ಜೂ.17): ಏಷ್ಯಾ​ಕಪ್‌ ಹೈಬ್ರಿಡ್‌ ಮಾದ​ರಿಗೆ ಬಿಸಿ​ಸಿಐ ಒಪ್ಪಿಗೆ ನೀಡಿದ್ದರೂ ಪಾಕಿ​ಸ್ತಾನ ತಂಡ ಭಾರ​ತ​ದಲ್ಲಿ ನಡೆ​ಯ​ಲಿ​ರುವ ಐಸಿಸಿ ಏಕ​ದಿನ ವಿಶ್ವ​ಕ​ಪ್‌​ನ​ಲ್ಲಿ ಪಾಲ್ಗೊ​ಳ್ಳು​ವುದು ಇನ್ನೂ ಖಚಿ​ತ​ಗೊಂಡಿ​ಲ್ಲ. ಈ ಬಗ್ಗೆ ಸ್ವತಃ ಪಾಕಿ​ಸ್ತಾನ ಕ್ರಿಕೆಟ್‌ ಮಂಡ​ಳಿ​(​ಪಿ​ಸಿ​ಬಿ) ಅಧ್ಯಕ್ಷ ನಜಂ ಸೇಠಿ ಶುಕ್ರ​ವಾರ ಮಾಹಿತಿ ನೀಡಿದ್ದು, ಸರ್ಕಾರ ಒಪ್ಪಿಗೆ ಸೂಚಿ​ಸಿ​ದರೆ ಮಾತ್ರ ವಿಶ್ವ​ಕಪ್‌ ಆಡಲು ಭಾರ​ತಕ್ಕೆ ತೆರ​ಳ​ಲಿ​ದ್ದೇವೆ ಎಂದಿ​ದ್ದಾರೆ. 

‘ವಿ​ಶ್ವ​ಕ​ಪ್‌ನ ವೇಳಾ​ಪಟ್ಟಿ (ODI World Cup Schedule) ಪ್ರಕ​ಟ​ಗೊಂಡು, ನಮ್ಮ ಪಂದ್ಯ​ಗಳು ನಿರ್ದಿಷ್ಟ ಕ್ರೀಡಾಂಗ​ಣ​ದಲ್ಲಿ ನಡೆ​ಸಲು ತೀರ್ಮಾ​ನಿ​ಸಿ​ದ್ದರೂ ನಾವು ಭಾರ​ತಕ್ಕೆ ಹೋಗ​ಬೇಕೇ ಬೇಡವೇ ಎಂಬು​ದನ್ನು ಸರ್ಕಾ​ರವೇ ನಿರ್ಧ​ರಿ​ಸ​ಲಿದೆ. ನಾವು ಅಹ​ಮ​ದಾ​ಬಾ​ದ್‌​ನಲ್ಲಿ ಪಂದ್ಯ ಆಡುವುದಕ್ಕೂ ಸರ್ಕಾರ ಒಪ್ಪಿಗೆ ನೀಡ​ಬೇ​ಕು’ ಎಂದಿ​ದ್ದಾರೆ. ಇದೇ ವೇಳೆ 2016ರ ಟಿ20 ವಿಶ್ವ​ಕ​ಪ್‌ನ ತಮ್ಮ ಪಂದ್ಯ​ವನ್ನು ಧರ್ಮ​ಶಾ​ಲಾ​ದಿಂದ ಕೋಲ್ಕ​ತ್ತಾಕ್ಕೆ ಸ್ಥಳಾಂತ​ರಿ​ಸಿ​ದ್ದನ್ನೂ ಅವರು ಉಲ್ಲೇಖಿ​ಸಿ​ದ್ದಾರೆ.

Latest Videos

undefined

"ಭಾರತ ಕ್ರಿಕೆಟ್ ತಂಡವು (Indian Cricket Team) ಪಾಕಿಸ್ತಾನ ಪ್ರವಾಸ ಮಾಡುವುದಕ್ಕೆ ಆಗಲಿ, ಅಥವಾ ಪಾಕಿಸ್ತಾನ ಕ್ರಿಕೆಟ್ ತಂಡವು ಭಾರತ ಪ್ರವಾಸ ಮಾಡುವುದಕ್ಕೇ ಆಗಲಿ, ಪಿಸಿಬಿ ಅಥವಾ ಬಿಸಿಸಿಐ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಇದರ ಬದಲಾಗಿ ಆಯಾ ದೇಶದ ಸರ್ಕಾರಗಳು ಏನು ಮಾಡಬೇಕು ಎನ್ನುವುದರ ಕುರಿತಾಗಿ ತೀರ್ಮಾನ ತೆಗೆದುಕೊಳ್ಳಲಿವೆ" ಎಂದು ಪಿಸಿಬಿ ಅಧ್ಯಕ್ಷ ನಜಂ ಸೇಠಿ ಹೇಳಿದ್ದಾರೆ.

ಅಕ್ಟೋಬರ್ 15ಕ್ಕೆ ಭಾರತ vs ಪಾಕ್‌ ಏಕದಿನ ವಿಶ್ವಕಪ್‌ ಕದನ..! ತಾತ್ಕಾ​ಲಿಕ ವೇಳಾ​ಪಟ್ಟಿ ಪ್ರಕಟ

ಭಾರತದ ರೀತಿಯಂತೆ ಪಾಕಿಸ್ತಾನ ತಂಡವು, ಭಾರತ ಪ್ರವಾಸದ ಕುರಿತಂತೆ ಅಂತಿಮವಾಗಿ ಪಾಕಿಸ್ತಾನ ಸರ್ಕಾರವು ತೀರ್ಮಾನ ತೆಗೆದುಕೊಳ್ಳಲಿದೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಾವು ಪಾಲ್ಗೊಳ್ಳಬೇಕೇ ಅಥವಾ ಬೇಡವೇ ಎನ್ನುವ ಕುರಿತಂತೆ ಮೊದಲಿಗೆ ಸರ್ಕಾರ ತೀರ್ಮಾನಿಸಲಿದೆ. ಇದಾದ ಬಳಿಕವಷ್ಟೇ ನಾವು ಎಲ್ಲಿ ಆಡಬೇಕು ಅಥವಾ ಆಡಬಾರದು ಎನ್ನುವ ಕುರಿತಂತೆ ನಿರ್ಧರಿಸಲು ಸಾಧ್ಯ. ಹೀಗಾಗಿ ಅಹಮದಾಬಾದ್‌ನಲ್ಲಿ ಪಾಕಿಸ್ತಾನ ತಂಡವು ಕಣಕ್ಕಿಳಿಯಲಿದೆಯೇ ಅಥವಾ ಇಲ್ಲವೇ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಅಧ್ಯಕ್ಷ ನಜಂ ಸೇಠಿ ಹೇಳಿದ್ದಾರೆ.

16ನೇ ಆವೃ​ತ್ತಿಯ ಏಷ್ಯಾ​ಕಪ್‌ ಕ್ರಿಕೆಟ್‌ ಟೂರ್ನಿ (Asia Cup Cricket Tournament) ಆಗಸ್ಟ್ 31ರಿಂದ ಸೆಪ್ಟೆಂಬರ್ 17ರ ವರೆಗೆ ನಡೆ​ಯ​ಲಿದ್ದು, ಪಾಕಿ​ಸ್ತಾನ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯ ವಹಿ​ಸ​ಲಿವೆ. ಟೂರ್ನಿಯ ಹಕ್ಕು ಪಾಕಿಸ್ತಾನ ಬಳಿ ಇದ್ದರೂ ಭಾರ​ತ ತಂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಟೂರ್ನಿಯನ್ನು ಹೈಬ್ರಿಡ್‌ ಮಾದ​ರಿ​ಯಲ್ಲಿ ನಡೆ​ಸಲು ಏಷ್ಯಾ ಕ್ರಿಕೆಟ್‌ ಸಮಿತಿ(ಎಸಿಸಿ) ನಿರ್ಧರಿಸಿದೆ.

ಭಾರ​ತ-ಪಾಕಿಸ್ತಾ​ನ ನಡುವೆ 3 ಪಂದ್ಯ?

ಬದ್ಧ​ವೈ​ರಿ​ಗ​ಳಾದ ಭಾರ​ತ, ಪಾಕಿಸ್ತಾನ ನಡು​ವೆ 3 ಪಂದ್ಯ​ಗಳು ನಡೆ​ಯುವ ಸಾಧ್ಯ​ತೆ​ಯಿದೆ. ಎರಡೂ ತಂಡ​ಗಳು ಫೈನಲ್‌ ಪ್ರವೇ​ಶಿ​ಸಿ​ದರೆ ಮಾತ್ರ ಇದು ಸಾಧ್ಯ​ವಾ​ಗ​ಲಿದೆ. ಗುಂಪು ಹಂತ​ದಲ್ಲಿ ಉಭಯ ತಂಡ​ಗಳು ಮುಖಾ​ಮುಖಿ​ಯಾ​ಗ​ಲಿ​ದ್ದು, ಸೂಪ​ರ್‌-4 ಹಂತ ಪ್ರವೇ​ಶಿ​ಸಿ​ದರೆ ಅಲ್ಲೂ ಪರ​ಸ್ಪರ ಸೆಣ​ಸಾ​ಡ​ಲಿದೆ. ಬಳಿಕ ಫೈನ​ಲ್‌​ಗೇರಿ ಮತ್ತೊಮ್ಮೆ ಮುಖಾ​ಮುಖಿ​ಯಾಗುವ ನಿರೀ​ಕ್ಷೆ​ಯಿದೆ.

ಇನ್ನು ಬಿಸಿ​ಸಿಐ ಈಗಾಗಲೇ ಟೂರ್ನಿಯ ತಾತ್ಕಾ​ಲಿಕ ವೇಳಾ​ಪ​ಟ್ಟಿ​ ಸಿದ್ಧ​ಪ​ಡಿಸಿ ಐಸಿ​ಸಿಗೆ ನೀಡಿದೆ ಎನ್ನ​ಲಾ​ಗಿದ್ದು, ಶೀಘ್ರವೇ ಅಧಿ​ಕೃ​ವಾಗಿ ಪ್ರಕ​ಟ​ಗೊ​ಳ್ಳುವ ನಿರೀ​ಕ್ಷೆ​ಯಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ 05ರಂದು ಏಕದಿನ ವಿಶ್ವಕಪ್ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ನವೆಂಬರ್ 15 ಮತ್ತು 16ರಂದು ಸೆಮಿ​ಫೈ​ನಲ್‌ ಪಂದ್ಯ​ಗಳು ನಡೆ​ಯ​ಲಿದ್ದು, ಮುಂಬೈನ ವಾಂಖೇಡೆ ಹಾಗೂ ಚೆನ್ನೈನ ಚೆಪಾಕ್‌ ಕ್ರೀಡಾಂಗಣ ಆತಿಥ್ಯ ವಹಿ​ಸ​ಲಿವೆ. ಫೈನಲ್‌ ಪಂದ್ಯ ನವೆಂಬರ್ 19ರಂದು ಅಹ​ಮ​ದಾ​ಬಾ​ದ್‌ನಲ್ಲಿ ನಡೆ​ಯ​ಲಿದೆ. ಟೂರ್ನಿ​ಯಲ್ಲಿ 10 ತಂಡ​ಗಳು ಪಾಲ್ಗೊ​ಳ್ಳ​ಲಿದ್ದು, ಭಾರತ ಸೇರಿ​ದಂತೆ 8 ತಂಡ​ಗಳು ನೇರ ಅರ್ಹತೆ ಗಿಟ್ಟಿ​ಸಿ​ಕೊಂಡಿದೆ. ಇನ್ನೆ​ರಡು ತಂಡ​ಗಳು ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತಿ​ಗೇ​ರ​ಲಿವೆ.

click me!