Ranji Trophy: ಹಾರ್ದಿಕ್‌ ಪಾಂಡ್ಯ ಏಕೆ ರಣಜಿ ಆಡುತ್ತಿಲ್ಲವೆಂದು ಗೊತ್ತಿಲ್ಲ: ಚೇತನ್‌ ಶರ್ಮಾ

Kannadaprabha News   | Asianet News
Published : Feb 20, 2022, 09:59 AM IST
Ranji Trophy: ಹಾರ್ದಿಕ್‌ ಪಾಂಡ್ಯ ಏಕೆ ರಣಜಿ ಆಡುತ್ತಿಲ್ಲವೆಂದು ಗೊತ್ತಿಲ್ಲ: ಚೇತನ್‌ ಶರ್ಮಾ

ಸಾರಾಂಶ

* ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕುರಿತಂತೆ ಅಚ್ಚರಿಯ ಮಾತುಗಳನ್ನಾಡಿದ ಚೇತನ್ ಶರ್ಮಾ * ಚೇತನ್ ಶರ್ಮಾ, ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿ ಮುಖ್ಯಸ್ಥ * ರಣಜಿ ಟ್ರೋಫಿಯನ್ನು ಆಡದಿರಲು ತೀರ್ಮಾನಿಸಿದ ಹಾರ್ದಿಕ್ ಪಾಂಡ್ಯ

ಮುಂಬೈ(ಫೆ.20): ಸಂಪೂರ್ಣ ಫಿಟ್ನೆಸ್‌ ಸಾಧಿಸಿದರೆ ಮಾತ್ರ ಭಾರತದಲ್ಲಿ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯಗೆ (Hardik Pandya) ಸ್ಥಾನ ನೀಡುವುದಾಗಿ ಬಿಸಿಸಿಐ (BCCI) ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್‌ ಶರ್ಮಾ (Chetan Sharma) ಶನಿವಾರ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಹಾರ್ದಿಕ್‌ ಏಕೆ ರಣಜಿ ಟ್ರೋಫಿಯಲ್ಲಿ (Ranji Trophy) ಆಡುತ್ತಿಲ್ಲ ಎನ್ನುವುದು ತಿಳಿದಿಲ್ಲ. ರಣಜಿಯಲ್ಲಿ ಆಡಿದರೆ ಅವರ ಫಿಟ್ನೆಸ್‌ ಬಗ್ಗೆ ಮಾಹಿತಿ ದೊರೆಯುತ್ತಿತ್ತು ಎಂದಿದ್ದಾರೆ. ಈ ಮೊದಲು ಸ್ವತಃ ಹಾರ್ದಿಕ್ ಪಾಂಡ್ಯ ಕೂಡಾ ತಾವು ಸಂಪೂರ್ಣ ಫಿಟ್ ಆಗಿರುವವರೆಗೂ ಆಯ್ಕೆಗೆ ಪರಿಗಣಿಸದಿರಲು ಬಿಸಿಸಿಗೆ ಹಾರ್ದಿಕ್ ಪಾಂಡ್ಯ ಮನವಿ ಮಾಡಿಕೊಂಡಿದ್ದರು. 

ಲಂಕಾ ಸರಣಿಗೆ ಆಯ್ಕೆಯಾದ ತಂಡವನ್ನು ಪ್ರಕಟಿಸಿದ ಬಳಿಕ ಸುದ್ದಿಗಾರರು ಹಾರ್ದಿಕ್‌ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಚೇತನ್‌, ‘ಯಾರಿಗೆ ರಣಜಿ ಆಡಲು ಇಷ್ಟವಿಲ್ಲವೋ ಅವರ ವಿಚಾರದಲ್ಲಿ ಆಯ್ಕೆ ಸಮಿತಿ ತಲೆ ಹಾಕುವುದಿಲ್ಲ. ಅದು ಆಯಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಬಿಟ್ಟಿದ್ದು. ಹಾರ್ದಿಕ್‌ ಪಾಂಡ್ಯ ರಣಜಿ ಟ್ರೋಫಿ ಟೂರ್ನಿಯನ್ನು ಏಕೆ ಆಡುತ್ತಿಲ್ಲ ಎಂದು ಅವರನ್ನೇ ಪ್ರಶ್ನಿಸಿ. ಯಾರು ಆಡುತ್ತಿದ್ದಾರೋ ಅವರ ಆಟವನ್ನಷ್ಟೇ ನಾವು ಗಮನಿಸುತ್ತೇವೆ’ ಎಂದರು.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಮುಕ್ತಾಯದ ಬಳಿಕ ಹಾರ್ದಿಕ್ ಪಾಂಡ್ಯ, ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಬರೋಡ ತಂಡವನ್ನು ಪ್ರತಿನಿಧಿಸುವ ಹಾರ್ದಿಕ್‌ ಪಾಂಡ್ಯ, ಬರೋಡ ಸೀಮಿತ ಓವರ್‌ಗಳ ತಂಡದಿಂದಲೂ ಹೊರಗುಳಿದಿದ್ದರು. ಸದ್ಯ ಫಿಟ್ನೆಸ್‌ನತ್ತ ಗಮನ ಹರಿಸಿರುವ ಹಾರ್ದಿಕ್ ಪಾಂಡ್ಯ ಮುಂಬರುವ 15ನೇ ಆವೃತ್ತಿಯ ಐಪಿಎಲ್‌ನತ್ತ ಚಿತ್ತ ನೆಟ್ಟಿದ್ದಾರೆ. 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕನಾಗಿ ಗುಜರಾತ್ ಟೈಟಾನ್ಸ್ (Gujarat Titans) ತಂಡವನ್ನು ಮುನ್ನಡೆಸಲಿದ್ದಾರೆ. ಐಪಿಎಲ್ ಮೆಗಾ ಹರಾಜಿಗೂ (IPL Mega Auction) ಮುನ್ನ ಅಹಮದಾಬಾದ್ ಫ್ರಾಂಚೈಸಿಯು 15 ಕೋಟಿ ರುಪಾಯಿ ನೀಡಿ ಹಾರ್ದಿಕ್ ಪಾಂಡ್ಯರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.

ಭಾರತ ಟೆಸ್ಟ್ ತಂಡದಲ್ಲಿ ರಹಾನೆ, ಪೂಜಾರ, ಇಶಾಂತ್, ಸಾಹಗೆ ಸ್ಥಾನವಿಲ್ಲ..!

ನವದೆಹಲಿ: ಶ್ರೀಲಂಕಾ ವಿರುದ್ಧದ 3 ಟಿ20, 2 ಟೆಸ್ಟ್‌ ಪಂದ್ಯಗಳ ಸರಣಿಗೆ ಶನಿವಾರ ಭಾರತ ತಂಡ ಪ್ರಕಟಗೊಂಡಿದ್ದು, ಸ್ನಾಯು ಸೆಳೆತದಿಂದ ಇನ್ನೂ ಚೇತರಿಸಿಕೊಳ್ಳದ ಕೆ.ಎಲ್‌.ರಾಹುಲ್‌ (KL Rahul) ಎರಡೂ ಸರಣಿಗಳಿಗೆ ಗೈರಾಗಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ರವೀಂದ್ರ ಜಡೇಜಾ ತಂಡಕ್ಕೆ ವಾಪಸಾದರೆ, ಹಿರಿಯ ಆಟಗಾರರಾದ ಅಜಿಂಕ್ಯ ರಹಾನೆ(Ajinkya Rahane), ಚೇತೇಶ್ವರ್‌ ಪೂಜಾರ(Cheteshwar Pujara), ಇಶಾಂತ್‌ ಶರ್ಮಾ (Ishant Sharma) ಹಾಗೂ ವೃದ್ಧಿಮಾನ್‌ ಸಾಹರನ್ನು (Wriddhiman Saha) ಟೆಸ್ಟ್‌ ತಂಡದಿಂದ ಕೈಬಿಡಲಾಗಿದೆ.

ಎರಡೂ ಸರಣಿಗೆ ಜಸ್‌ಪ್ರೀತ್‌ ಬುಮ್ರಾ (Jasprit Bumrah) ಅವರನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಉತ್ತರ ಪ್ರದೇಶದ ಎಡಗೈ ಸ್ಪಿನ್ನರ್‌ ಸೌರಭ್‌ ಕುಮಾರ್‌ಗೆ ಮೊದಲ ಬಾರಿ ಟೆಸ್ಟ್‌ ತಂಡದಲ್ಲಿ ಸ್ಥಾನ ಸಿಕ್ಕಿದೆ. ಇನ್ನು ಟೆಸ್ಟ್‌ ತಂಡಕ್ಕೆ ಕುಲ್ದೀಪ್‌ ಯಾದವ್‌, ಟಿ20 ತಂಡಕ್ಕೆ ಸಂಜು ಸ್ಯಾಮ್ಸನ್‌ ವಾಪಸಾಗಿದ್ದಾರೆ. ಫೆಬ್ರವರಿ 24ರಿಂದ ಟಿ20 ಸರಣಿ, ಮಾ.4ರಿಂದ ಟೆಸ್ಟ್‌ ಸರಣಿ ನಡೆಯಲಿದೆ.

Indi vs Sri Lanka Series : ಟೆಸ್ಟ್ ತಂಡಕ್ಕೆ ರೋಹಿತ್ ಶರ್ಮಾ ನಾಯಕ, ಬುಮ್ರಾ ಉಪನಾಯಕ!

ಟಿ20 ತಂಡ: ರೋಹಿತ್‌ ಶರ್ಮಾ(ನಾಯಕ), ಋುತುರಾಜ್ ಗಾಯಕ್ವಾಡ್‌, ಇಶಾನ್ ಕಿಶನ್‌, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್‌, ವೆಂಕಟೇಶ್ ಅಯ್ಯರ್‌, ದೀಪಕ್‌ ಹೂಡಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್‌, ಹರ್ಷಲ್ ಪಟೇಲ್‌, ಮೊಹಮ್ಮದ್ ಸಿರಾಜ್‌, ಸಂಜು ಸ್ಯಾಮ್ಸನ್‌, ಯುಜುವೇಂದ್ರ ಚಹಲ್‌, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್‌, ರವಿ ಬಿಷ್ಣೋಯ್‌, ಆವೇಶ್ ಖಾನ್‌.

ಟೆಸ್ಟ್‌ ತಂಡ: ರೋಹಿತ್ ಶರ್ಮಾ‌(ನಾಯಕ), ಮಯಾಂಕ್ ಅಗರ್‌ವಾಲ್‌, ಪ್ರಿಯಾಂಕ್ ಪಾಂಚಲ್‌, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಹನುಮ ವಿಹಾರಿ, ಶುಭ್‌ಮನ್ ಗಿಲ್‌, ರಿಷಭ್ ಪಂತ್‌, ಕೆ.ಎಸ್. ಭರತ್‌, ರವಿಚಂದ್ರನ್ ಅಶ್ವಿನ್‌, ರವೀಂದ್ರ ಜಡೇಜಾ, ಜಯಂತ್‌ ಯಾದವ್, ಶಾರ್ದೂಲ್ ಠಾಕೂರ್‌, ಕುಲ್ದೀಪ್ ಯಾದವ್‌, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌, ಉಮೇಶ್ ಯಾದವ್‌, ಸೌರಭ್ ಕುಮಾರ್‌‌.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?