Irani Cup: ಶೇಷ ಭಾರ​ತ ಇರಾ​ನಿ ಕಪ್‌ ಚಾಂಪಿ​ಯ​ನ್‌..!

By Kannadaprabha NewsFirst Published Mar 6, 2023, 9:21 AM IST
Highlights

ಮಧ್ಯಪ್ರದೇಶ ಮಣಿಸಿ ಇರಾನಿ ಕಪ್ ಗೆದ್ದ ಶೇಷ ಭಾರತ
ಸತತ ಎರಡನೇ ಬಾರಿಗೆ ಇರಾನಿ ಕಪ್ ಶೇಷ ಭಾರತದ ಪಾಲು
ಎರಡು ಇನಿಂಗ್ಸ್‌ನಲ್ಲೂ ಶತಕ ಸಿಡಿಸಿ ಮಿಂಚಿದ ಯಶಸ್ವಿ ಜೈಸ್ವಾಲ್

ಗ್ವಾ​ಲಿ​ಯ​ರ್‌(ಮಾ.06): 2021-22ರ ರಣಜಿ ಟ್ರೋಫಿ ಚಾಂಪಿ​ಯನ್‌ ಮಧ್ಯ​ಪ್ರ​ದೇ​ಶ​ವನ್ನು 238 ರನ್‌​ಗ​ಳಿಂದ ಮಣಿ​ಸಿದ ಶೇಷ ಭಾರತ ಸತತ 2ನೇ ಬಾರಿ ಇರಾನಿ ಕಪ್‌ ಗೆದ್ದು​ಕೊಂಡಿದೆ. ಗೆಲು​ವಿಗೆ 437 ರನ್‌​ಗಳ ಬೃಹತ್‌ ಗುರಿ ಪಡೆ​ದು​ಕೊಂಡಿದ್ದ ಮಧ್ಯ​ಪ್ರ​ದೇಶ 58.4 ಓವ​ರ್‌​ಗ​ಳಲ್ಲಿ 198ಕ್ಕೆ ಆಲೌಟ್‌ ಆಯಿತು. 4ನೇ ದಿನ​ದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 81 ರನ್‌ ಗಳಿಸಿದ್ದ ಮಧ್ಯ​ಪ್ರ​ದೇ​ಶ ಕೊನೆ ದಿನ ಯಾವುದೇ ಪ್ರತಿ​ರೋಧ ತೋರ​ಲಿಲ್ಲ.ಮೊದಲ ಅವ​ಧಿ​ಯಲ್ಲೇ ಪಂದ್ಯ ಮುಕ್ತಾ​ಯಗೊಂಡಿ​ತು. 

ನಾಯಕ ಹಿಮಾಂಶು ಮಂತ್ರಿ​(51), ಹರ್ಷ್ ಗಾವ್ಲಿ(48) ಹೊರ​ತು​ಪ​ಡಿಸಿ ಉಳಿ​ದ​ವ​ರಿಂದ ಹೋರಾಟ ಕಂಡು​ಬ​ರ​ಲಿ​ಲ್ಲ. ಮೊದಲ ಇನ್ನಿಂಗ್‌್ಸ​ನ​ಲ್ಲಿ​ನಲ್ಲಿ 213, 2ನೇ ಇನ್ನಿಂಗ್‌್ಸನಲ್ಲಿ 144 ರನ್‌ ಸಿಡಿ​ಸಿದ ಯಶಸ್ವಿ ಜೈಸ್ವಾಲ್‌ ಪಂದ್ಯ​ಶ್ರೇಷ್ಠ ಪ್ರಶ​ಸ್ತಿಗೆ ಭಾಜ​ನ​ರಾ​ದರು. ಮೊದಲ ಇನ್ನಿಂಗ್‌್ಸ​ನಲ್ಲಿ ಶೇಷ ಭಾರತ 484, ಮಧ್ಯ​ಪ್ರ​ದೇಶ 294 ರನ್‌ ಗಳಿ​ಸಿತ್ತು. 190 ರನ್‌ ಮುನ್ನಡೆ ಪಡೆ​ದಿದ್ದ ಶೇಷ ಭಾರತ 2ನೇ ಇನ್ನಿಂಗ್‌್ಸ​ನಲ್ಲಿ 246ಕ್ಕೆ ಆಲೌ​ಟಾ​ಗಿತ್ತು.

Latest Videos

4ನೇ ಟೆಸ್ಟ್‌ಗೂ ಕಮಿನ್ಸ್‌ ಗೈರಾ​ಗು​ವ ಸಾಧ್ಯತೆ

ಅಹ​ಮ​ದಾ​ಬಾದ್‌(ಮಾ.06): ತಾಯಿಯ ಅನಾ​ರೋಗ್ಯ ಕಾರಣ ತವ​ರಿಗೆ ಮರ​ಳಿ​ರುವ ಆಸ್ಪ್ರೇ​ಲಿಯಾ ನಾಯಕ ಪ್ಯಾಟ್‌ ಕಮಿನ್ಸ್‌ ಭಾರತ ವಿರುದ್ಧದ 4ನೇ ಟೆಸ್ಟ್‌ ಪಂದ್ಯಕ್ಕೂ ಅಲ​ಭ್ಯ​ರಾ​ಗುವ ಸಾಧ್ಯತೆ ಇದೆ ವರ​ದಿ​ಯಾ​ಗಿದೆ. ಕ್ಯಾನ್ಸ​ರ್‌​ನಿಂದ ಬಳ​ಲು​ತ್ತಿ​ರುವ ತಾಯಿಯ ಆರೋ​ಗ್ಯ ಮತ್ತಷ್ಟು ಹದ​ಗೆ​ಟ್ಟಿ​ದ್ದ​ರಿಂದ 3ನೇ ಟೆಸ್ಟ್‌ಗೂ ಮುನ್ನ ಕಮಿನ್ಸ್‌ ಆಸ್ಪ್ರೇ​ಲಿ​ಯಾಕ್ಕೆ ತೆರ​ಳಿ​ದ್ದರು. ಅವರು ಇನ್ನೂ ಗಂಭೀರ ಸ್ಥಿತಿ​ಯ​ಲ್ಲಿ​ರುವ ಕಾರಣ ಕಮಿನ್ಸ್‌ ಭಾರ​ತಕ್ಕೆ ಆಗ​ಮಿ​ಸು​ವುದು ಅನು​ಮಾನವೆನಿಸಿದೆ. 

ಪ್ಯಾಟ್ ಕಮಿನ್ಸ್‌ ಅನು​ಪ​ಸ್ಥಿ​ತಿ​ಯಲ್ಲಿ 3ನೇ ಟೆಸ್ಟ್‌ನಲ್ಲಿ ನಾಯಕರಾಗಿದ್ದ ಸ್ಟೀವ್‌ ಸ್ಮಿತ್‌ 4ನೇ ಟೆಸ್ಟ್‌ನಲ್ಲೂ ತಂಡ ಮುನ್ನಡೆಸಲಿದ್ದಾರೆ ಎನ್ನಲಾಗಿದೆ. ಮೂರನೇ ಟೆಸ್ಟ್‌ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡವು 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆಗಿಟ್ಟಿಸಿಕೊಂಡಿತ್ತು. ಇದೀಗ ಮಾರ್ಚ್‌ 9ರಿಂದ ಅಹಮದಾಬಾದ್‌ನಲ್ಲಿ 4ನೇ ಟೆಸ್ಟ್‌ ಆರಂಭಗೊಳ್ಳಲಿದೆ.

ಶಸ್ತ್ರಚಿ​ಕಿ​ತ್ಸೆಗೆ ನ್ಯೂಜಿ​ಲೆಂಡ್‌​ಗೆ ತೆರ​ಳಿದ ವೇಗಿ ಬುಮ್ರಾ

ನವ​ದೆ​ಹ​ಲಿ: ದೀರ್ಘ ಸಮ​ಯ​ದಿಂದ ಬೆನ್ನು ನೋವಿ​ನ ​ಸಮಸ್ಯೆಯಿಂದ ಬಳಲು​ತ್ತಿ​ರುವ ಭಾರ​ತೀಯ ವೇಗಿ ಜಸ್‌​ಪ್ರೀತ್‌ ಬುಮ್ರಾ ಶಸ್ತ್ರ​ಚಿ​ಕಿ​ತ್ಸೆ​ಗಾಗಿ ನ್ಯೂಜಿ​ಲೆಂಡ್‌ಗೆ ತೆರ​ಳಿ​ದ್ದಾರೆ ಎಂದು ಬಿಸಿ​ಸಿಐ ಮೂಲ​ಗಳು ತಿಳಿ​ಸಿ​ದ್ದಾಗಿ ಮಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿದೆ. ಅವರು 2-3 ದಿನ​ಗ​ಳ​ಲ್ಲಿ ಶಸ್ತ್ರ​ಚಿ​ಕಿ​ತ್ಸೆಗೆ ಒಳ​ಗಾ​ಗ​ಲಿದ್ದು, ಬಳಿಕ ಸುಮಾರು 20ರಿಂದ 24 ವಾರ​ಗಳ ಕಾಲ ವಿಶ್ರಾಂತಿ ಪಡೆ​ಯ​ಲಿ​ದ್ದಾರೆ ಎಂದು ತಿಳಿ​ದು​ಬಂದಿದೆ. 

WPL 2023: ಇಂದು ಮುಂಬೈಗೆ ಆರ್‌ಸಿಬಿ ಸವಾಲು..! ಗೆಲುವಿನ ಹಳಿಗೆ ಮರಳುತ್ತಾ ಮಂಧನಾ ಪಡೆ?

ಬೆನ್ನು ನೋವಿ​ನಿಂದಾಗಿ ಬುಮ್ರಾ 5 ತಿಂಗ​ಳು​ಗ​ಳಿಂದ ಸ್ಪರ್ಧಾ​ತ್ಮಕ ಕ್ರಿಕೆ​ಟ್‌​ನಿಂದ ದೂರ ಉಳಿ​ದಿ​ದ್ದಾರೆ. ಇನ್ನೂ ಕೂಡಾ ಗುಣ​ಮು​ಖ​ರಾಗದ ಹಿನ್ನೆ​ಲೆ​ಯಲ್ಲಿ ಹಲವು ಕ್ರಿಕೆ​ಟಿ​ಗ​ರಿಗೆ ಯಶ​ಸ್ವಿ​ಯಾಗಿ ಶಸ್ತ್ರ​ಚಿ​ಕಿತ್ಸೆ ನಡೆ​ಸಿದ ಡಾ.ರೋವನ್‌ ಶೌಟೆನ್‌ ಅವರಿಂದ ನ್ಯೂಜಿ​ಲೆಂಡ್‌​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳ​ಗಾ​ಗ​ಲಿ​ದ್ದಾರೆ ಎಂದು ತಿಳಿ​ದು​ಬಂದಿ​ದೆ.

click me!