WPL: ಆರ್‌ಸಿಬಿ ವಿರುದ್ಧ ಐವರು ವಿದೇಶಿ ಆಟಗಾರ್ತಿಯರನ್ನು ಆಡಿಸಿ ನಿಯಮ ಮೀರಿತಾ ಡೆಲ್ಲಿ!

By Santosh Naik  |  First Published Mar 5, 2023, 9:56 PM IST

ವುಮೆನ್ಸ್‌ ಪ್ರೀಮಿಯರ್‌ ಲೀಗ್‌ನ 2ನೇ ಪಂದ್ಯದಲ್ಲಿ ಭಾನುವಾರ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳು ಮುಖಾಮುಖಿಯಾದವು. ಈ ವೇಳೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಐವರು ವಿದೇಶಿ ಆಟಗಾರ್ತಿಯರು ಆಡಿದ್ದನ್ನು ಕ್ರಿಕೆಟ್‌ ಅಭಿಮಾನಿಗಳು ಗಮನಿಸಿದ್ದಾರೆ. ಐಪಿಎಲ್‌ನಂತೆ ಡಬ್ಲ್ಯುಪಿಎಲ್‌ನಲ್ಲೂ ಕೂಡ 4 ವಿದೇಶಿ ಆಟಗಾರ್ತಿಯರು ಮಾತ್ರವೇ ತಂಡದಲ್ಲಿ ಆಡಬಹುದಾಗಿದೆ. ಹಾಗಿದ್ದರೂ ಡೆಲ್ಲಿ ತಂಡದಲ್ಲಿ ಐವರು ಆಡಿದ್ದು ಹೇಗೆ ಎನ್ನುವುದರ ವಿವರ ಇಲ್ಲಿದೆ.
 


ಮುಂಬೈ (ಮಾ.5): ಯಾರು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ. ಆದರೆ, ಆರ್‌ಸಿಬಿ ಅಭಿಮಾನಿಗಳು ಮಾತ್ರ ಇದನ್ನು ಗಮನಿಸಿಯೇ ಇರುತ್ತಾರೆ. 2008ರ ಮೊದಲ ಐಪಿಎಲ್‌ ಟೂರ್ನಿಯಲ್ಲಿ ಸೋಲಿನ ಆರಂಭ ಕಮಡಿದ್ದ ಆರ್‌ಸಿಬಿ, 2023ರ ಮೊದಲ ಆವೃತ್ತಿಯ ಮಹಿಳಾ ಐಪಿಎಲ್‌ನಲ್ಲೂ ಸೋಲು ಆರಂಭ ಕಂಡಿದೆ. ಅಂದು ಕೆಕೆಆರ್‌ ವಿರುದ್ಧ ಪುರುಷರ ತಂಡ ಸೋತಿದ್ದರೆ, ಇಂದು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ದ ಮಹಿಳಾ ತಂಡ ಸೋಲು ಕಂಡಿದೆ. ಆದರೆ, ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಐವರು ವಿದೇಶಿ ಆಟಗಾರ್ತಿಯರನ್ನು ಕಣಕ್ಕಿಳಿಸಿದ್ದು ಹಲವರ ಹುಬ್ಬೇರಿಸಿದೆ. ಐಪಿಎಲ್‌ನಂತೆ ಡಬ್ಲ್ಯುಪಿಎಲ್‌ನಲ್ಲೂ ಬಿಸಿಸಿಐ ನಾಲ್ವರು ವಿದೇಶಿ ಆಟಗಾರ್ತಿಯ ನಿಯಮವನ್ನು ಕಡ್ಡಾಯ ಮಾಡಿದೆ. ನಾಲ್ಕಕ್ಕಿಂತ ಹೆಚ್ಚಿನ ವಿದೇಶಿಗರು ತಂಡದಲ್ಲಿ ಆಡುವಂತಿಲ್ಲ ಎಂದಿದೆ. ಆದರೆ, ಡೆಲ್ಲಿ ತಂಡಕ್ಕೆ ವಿಶೇಷ ಮಾನ್ಯತೆಯ ಅಡಿಯಲ್ಲಿ ಐವರು ಆಟಗಾರ್ತಿಯರನ್ನು ಆಡಿಸಲು ಅವಕಾಶ ನೀಡಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಹೌದು, ಅಮೆರಿಕದ ವೇಗದ ಬೌಲರ್‌ ಟಾರಾ ನೊರಿಸ್‌ ಇದ್ದ ಕಾರಣಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಇಂಥದ್ದೊಂದು ವಿಶೇಷ ಮಾನ್ಯತೆ ನೀಡಲಾಗಿದೆ. ಇದರಿಂದಾಗಿಯೇ ಅವರು ಐವರು ವಿದೇಶಿ ಆಟಗಾರ್ತಿಯರೊಂದಿಗೆ ಆಡಲು ಸಾಧ್ಯವಾಗಿದೆ.

ನಿಯಮಗಳ ಪ್ರಕಾರ ಯಾವುದೇ ತಂಡ ಕೂಡ ತನ್ನಲ್ಲಿ ಐವರು ವಿದೇಶಿ ಆಟಗಾರ್ತಿಯರನ್ನು ಆಡಿಸಬಹುದು. ಆದರೆ, ಈ ಐವರಲ್ಲಿ ಒಬ್ಬ ಆಟಗಾರ್ತಿ ಸಹಸದಸ್ಯ ದೇಶದ ಆಟಗಾರ್ತಿಯಾಗಿರಬೇಕು. ಸಹಸದಸ್ಯ ದೇಶ ಎಂದರೆ, ಐಸಿಸಿಯಲ್ಲಿ ಪೂರ್ಣ ಪ್ರಮಾಣದ ಮಾನ್ಯತೆ ಹೊಂದಿರದ ದೇಶಗಳು. ಪ್ರಸ್ತುತ ಟೆಸ್ಟ್‌ ಆಡುವ ತಂಡಗಳನ್ನು ಮಾತ್ರವೇ ಐಸಿಸಿಯ ಸದಸ್ಯ ರಾಷ್ಟ್ರಗಳು ಎನ್ನುತ್ಥಾರೆ. ಅದರ ಹೊರತಾದ ಎಲ್ಲಾ ರಾಷ್ಟ್ರಗಳು ಐಸಿಸಿಯ ಸಹಸದಸ್ಯ ರಾಷ್ಟ್ರಗಳು. ಇಂಥ ದೇಶಗಳ ಆಟಗಾರ್ತಿಯರು ತಂಡದಲ್ಲಿದ್ದರೆ, ಅವರನ್ನು ಐದನೇ ವಿದೇಶಿ ಪ್ಲೇಯರ್‌ ಆಗಿ ಆಡಿಸಬಹುದು ಎನ್ನುವ ನಿಯಮವಿದೆ. ಪ್ರಸ್ತುತ ಡಬ್ಲ್ಯುಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹೊರತಾಗಿ ಮತ್ತೆ ಯಾವ ತಂಡಗಳೂ ಕೂಡ ಸಹಸದಸ್ಯ ರಾಷ್ಟ್ರದ ಆಟಗಾರ್ತಿಯರನ್ನು ಹೊಂದಿಲ್ಲ. ಇನ್ನೊಂದೆಡೆ ಟಾರಾ ನೊರಿಸ್‌, ಆರ್‌ಸಿಬಿ ವಿರುದ್ಧ ಐದು ವಿಕೆಟ್‌ ಉರುಳಿಸುವ ಮೂಲಕ ತಂಡದ ಅದ್ಭುತ ಗೆಲುವಿನಲ್ಲಿ ಗಮನಸೆಳೆದರು.

ಟಾರಾ ನೊರಿಸ್‌ ಅಲ್ಲದೆ, ಆಸ್ಟ್ರೇಲಿಯಾದ ಮೆಗ್‌ ಲ್ಯಾನಿಂಗ್‌, ಜೆಸ್‌ ಜೊನಾಸೆನ್‌, ದಕ್ಷಿಣ ಆಫ್ರಿಕಾದ ಮಾರಿಜ್ನೆ ಕಾಪ್‌ ಹಾಗೂ ಇಂಗ್ಲೆಂಡ್‌ನ ಅಲಿಸ್‌ ಕ್ಯಾಪ್ಸೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರವಾಗಿ ಆಡಿದ್ದರು.

WPL 2023: RCB ಮೊದಲ ಪಂದ್ಯ ದೇವರಿಗೆ ಅರ್ಪಣೆ..!

ಡೆಲ್ಲಿ ಪರವಾಗಿ ಶೆಫಾಲಿ ವರ್ಮ ಹಾಗೂ ಮೆಗ್‌ ಲ್ಯಾನಿಂಗ್‌ ಬಾರಿಸಿದ ಆಕರ್ಷಕ ಅರ್ಧಶತಕ ಹಾಗೂ ಮೊದಲ ವಿಕೆಟ್‌ಗೆ ಆಡಿದ 162 ರನ್‌ಗಳ ಅದ್ಭುತ ಜೊತೆಯಾಟದ ನೆರವಿನಿಂದ ಆರ್‌ಸಿಬಿ ವಿರುದ್ಧ ಡೆಲ್ಲಿ 2 ವಿಕೆಟ್‌ಗೆ 223 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. ಪ್ರತಿಯಾಗಿ ಸ್ಮೃತಿ ಮಂದನಾ ಸಾರಥ್ಯದ ಆರ್‌ಸಿಬಿ ತಂಡ 8 ವಿಕೆಟ್‌ಗೆ 163 ರನ್‌ ಬಾರಿಸಿ 60 ರನ್‌ಗಳ ದೊಡ್ಡ ಸೋಲು ಕಂಡಿತು. ಡೆಲ್ಲಿ ಪರವಾಗಿ ಟಾರಾ ನೊರಿಸ್‌ 29ರನ್‌ಗೆ 5 ವಿಕೆಟ್‌ ಉರುಳಿಸಿ ಗಮನಸೆಳೆದರು. 19 ವರ್ಷದ ಶೆಫಾಲಿ ವರ್ಷ ಆಕರ್ಷಕ 45 ಎಸೆತಗಳಲ್ಲಿ 84 ರನ್‌ ಇನ್ನಿಂಗ್ಸ್‌ ಆಡುವ ಮೂಲಕ ಫಾರ್ಮ್‌ಗೆ ಮರಳಿದರು. ಈ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳು ಸೇರಿದ್ದವು. ಆಸ್ಟ್ರೇಲಿಯಾ ತಂಡವನ್ನು ವಿಶ್ವಕಪ್‌ ಚಾಂಪಿಯನ್‌ ಪಟ್ಟಕ್ಕೇರಿಸಿದ ದಿಗ್ಗಜ ನಾಯಕಿ ಮೆಗ್‌ ಲ್ಯಾನಿಂಗ್‌ 43 ಎಸೆತಗಳಲ್ಲಿ 72 ರನ್‌ ಬಾರಿಸಿದರು. ಇದರಲ್ಲಿ 14 ಬೌಂಡರಿಗಳು ಸೇರಿದ್ದವು.

Tap to resize

Latest Videos

WPL 2023: ಡೆಲ್ಲಿ ಎದುರಿನ ಪಂದ್ಯಕ್ಕೂ ಮುನ್ನ RCB ಮೆಂಟರ್ ಸಾನಿಯಾ ಮಿರ್ಜಾ ಮಹತ್ವದ ಸಂದೇಶ..!

ಬ್ಯಾಟಿಂಗ್‌ ಸ್ನೇಹಿ ಬ್ರಬೋರ್ನ್‌ ಮೈದಾನದಲ್ಲಿ ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡುವ ಮೂಲಕ ಆರ್‌ಸಿಬಿ ನಾಯಕಿ ಸ್ಮೃತಿ ಮಂದನಾ ಮೊದಲ ತಪ್ಪು ಮಾಡಿದರು. ಡೆಲ್ಲಿ ಬ್ಯಾಟರ್‌ಗಳ ಅಬ್ಬರವನ್ನು ನಿಯಂತ್ರಿಸಲು ಸ್ಮೃತಿ ಮಂದನಾ 7 ಮಂದಿ ಬೌಲರ್‌ಗಳ ಬಳಕೆ  ಮಾಡಿದ್ದರು.

click me!