ICC Test Rankings: ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಈಗ ವಿಶ್ವ ನಂ.15 ಬ್ಯಾಟರ್..!

By Naveen KodaseFirst Published Feb 22, 2024, 11:34 AM IST
Highlights

ರಾಜ್‌ಕೋಟ್‌ ಪಂದ್ಯದಲ್ಲಿ ಜೈಸ್ವಾಲ್‌ ಔಟಾಗದೆ 214 ರನ್‌ ಗಳಿಸಿ, ಸತತ ಎರಡು ಟೆಸ್ಟ್‌ಗಳಲ್ಲಿ ದ್ವಿಶತಕ ಬಾರಿಸಿದ ಭಾರತದ 3ನೇ ಹಾಗೂ ವಿಶ್ವದ 7ನೇ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದಿದ್ದ 2ನೇ ಟೆಸ್ಟ್‌ನಲ್ಲಿ ಜೈಸ್ವಾಲ್‌ 209 ರನ್‌ ಸಿಡಿಸಿದ್ದರು.

ದುಬೈ(ಫೆ): ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸತತ 2 ದ್ವಿಶತಕ ಸಿಡಿಸಿರುವ ಭಾರತದ ಯುವ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಐಸಿಸಿ ಟೆಸ್ಟ್‌ ಬ್ಯಾಟರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರ-20ರೊಳಗೆ ಪ್ರವೇಶ ಪಡೆದಿದ್ದಾರೆ. 14 ಸ್ಥಾನಗಳ ಏರಿಕೆ ಕಂಡಿರುವ ಜೈಸ್ವಾಲ್‌ ಸದ್ಯ 15ನೇ ಸ್ಥಾನದಲ್ಲಿದ್ದಾರೆ.

ರಾಜ್‌ಕೋಟ್‌ ಪಂದ್ಯದಲ್ಲಿ ಜೈಸ್ವಾಲ್‌ ಔಟಾಗದೆ 214 ರನ್‌ ಗಳಿಸಿ, ಸತತ ಎರಡು ಟೆಸ್ಟ್‌ಗಳಲ್ಲಿ ದ್ವಿಶತಕ ಬಾರಿಸಿದ ಭಾರತದ 3ನೇ ಹಾಗೂ ವಿಶ್ವದ 7ನೇ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ವಿಶಾಖಪಟ್ಟಣಂನಲ್ಲಿ ನಡೆದಿದ್ದ 2ನೇ ಟೆಸ್ಟ್‌ನಲ್ಲಿ ಜೈಸ್ವಾಲ್‌ 209 ರನ್‌ ಸಿಡಿಸಿದ್ದರು.

ತಮ್ಮ ತವರು ಮೈದಾನದಲ್ಲಿ ಆಕರ್ಷಕ ಶತಕ ಬಾರಿಸಿ, ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ರವೀಂದ್ರ ಜಡೇಜಾ ಸಹ ಬ್ಯಾಟರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ. ಕಳೆದ ವಾರ 41ನೇ ಸ್ಥಾನದಲ್ಲಿದ್ದ ಜಡೇಜಾ ಸದ್ಯ 34ನೇ ಸ್ಥಾನ ಪಡೆದಿದ್ದಾರೆ. ರೋಹಿತ್‌ ಶರ್ಮಾ ಒಂದು ಸ್ಥಾನ ಏರಿಕೆ ಕಂಡು 12ನೇ ಸ್ಥಾನ ಪಡೆದರೆ, ಶುಭ್‌ಮನ್‌ ಗಿಲ್‌ 3 ಸ್ಥಾನಗಳ ಏರಿಕೆ ಸಾಧಿಸಿ 35ನೇ ಸ್ಥಾನ ಗಳಿಸಿದ್ದಾರೆ. ಇನ್ನು ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯಲ್ಲಿ ಶತಕಗಳ ಮೇಲೆ ಶತಕ ಸಿಡಿಸಿ ಮಿಂಚಿದ್ದ ನ್ಯೂಜಿಲೆಂಡ್ ಬ್ಯಾಟರ್ ಕೇನ್ ವಿಲಿಯಮ್ಸನ್‌, ಬ್ಯಾಟರ್‌ಗಳ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲೇ ಭದ್ರವಾಗಿದ್ದಾರೆ. ಕೇನ್ ವಿಲಿಯಮ್ಸನ್ ಕಳೆದ ಏಳು ಟೆಸ್ಟ್ ಪಂದ್ಯಗಳಲ್ಲಿ ಏಳು ಶತಕ ಸಿಡಿಸುವ ಮೂಲಕ, ಅರವಿಂದ ಡಿ ಸಿಲ್ವಾ, ಮೊಹಮ್ಮದ್ ಯೂಸುಪ್ ಹಾಗೂ ಕ್ಲೈಡ್‌ ವಾಲ್ಕಟ್ ಸಾಲಿಗೆ ಸೇರಿದ್ದಾರೆ. 

ATP Tennis Ranking: ಅಗ್ರ 100ರಂದ ಸುಮಿತ್ ನಗಾಲ್ ಔಟ್

ರಾಜ್‌ಕೋಟ್‌ ಪಂದ್ಯದಲ್ಲಿ 7 ವಿಕೆಟ್‌ ಸಹ ಪಡೆದಿದ್ದ ರವೀಂದ್ರ ಜಡೇಜಾ, ಬೌಲರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ 3 ಸ್ಥಾನ ಮೇಲೇರಿ 6ನೇ ಸ್ಥಾನ ಪಡೆದಿದ್ದಾರೆ. ಆರ್‌.ಅಶ್ವಿನ್‌ ಒಂದು ಸ್ಥಾನ ಏರಿಕೆ ಕಂಡಿದ್ದು 2ನೇ ಸ್ಥಾನದಲ್ಲಿದ್ದರೆ, ಜಸ್‌ಪ್ರೀತ್‌ ಬೂಮ್ರಾ ಅಗ್ರಸ್ಥಾನಿಯಾಗಿ ಮುಂದುವರಿದಿದ್ದಾರೆ. ಇನ್ನು ಆಲ್ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್‌ ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ.

ರಣಜಿ ಟ್ರೋಫಿ ಗೆಲ್ಲಿ, BMW ಪಡೀರಿ: ಆಟಗಾರರಿಗೆ ಹೈದರಾಬಾದ್‌ ಬಂಪರ್ ಆಫರ್‌!

ಇನ್ನುಳಿದಂತೆ ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಬೆನ್ ಡಕೆಟ್ ರಾಜ್‌ಕೋಟ್‌ ಟೆಸ್ಟ್‌ನಲ್ಲಿ ಭಾರತ ಎದುರು ಮೊದಲ ಇನಿಂಗ್ಸ್‌ನಲ್ಲಿ ಚುರುಕಿನ 153 ರನ್ ಸಿಡಿಸಿದ್ದರು. ಈ ಮೂಲಕ 12 ಸ್ಥಾನ ಜಿಗಿತ ಕಂಡು 13ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಇಂಗ್ಲೆಂಡ್ ಮಾರಕ ವೇಗಿ ಮಾರ್ಕ್ ವುಡ್‌ 21 ಸ್ಥಾನ ಜಿಗಿದಿದ್ದಾರೆ. 

click me!