ಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್ ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿ ವಿರುದ್ದ ತೀವ್ರ ಟೀಕೆಗಳು ಕೇಳಿಬರುತ್ತಿದೆ. ಇದಕ್ಕೆ ಕೊಹ್ಲಿ ಸಾಮಾಜಿಕ ಮಾಧ್ಯದಲ್ಲಿ ಉತ್ತರ ನೀಡಿದ್ದಾರೆ.
ಓವಲ್(ಜೂ.11) ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ. ಈ ಮೂಲಕ 2013ರಿಂದ ಟೀಂ ಇಂಡಿಯಾ ಎದುರಿಸುತ್ತಿರುವ ಐಸಿಸಿ ಟ್ರೋಫಿ ಬರ ಹಾಗೇ ಮುಂದುವರಿದಿದೆ. ಈ ಸೋಲಿಗೆ ಟೀಂ ಇಂಡಿಯಾ ಕ್ರಿಕೆಟಿಗರ ಕಳಪೆ ಪ್ರದರ್ಶನವೇ ಕಾರಣ ಎಂದು ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಕ್ರಿಕೆಟಿಗರ ವಿರುದ್ಧ ಟೀಕೆಗಳು ಕೇಳಿಬರುತ್ತಿದೆ. ಚೋಕ್ಲಿ, ಚೋಕರ್ಸ್ ಎಂದು ಕೊಹ್ಲಿ ಟ್ಯಾಗ್ ಮಾಡಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಟೀಕೆಗಳಿಗೆ ಉತ್ತರಿಸಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಮೌನ ಅತ್ಯತ ಶಕ್ತಿಯ ಮೂಲ ಎಂದು ವಿರಾಟ್ ಕೊಹ್ಲಿ ಪೋಸ್ಟ್ ಹಾಕಿದ್ದಾರೆ. ಈ ಮೂಲಕ ಎಲ್ಲಾ ಟೀಕೆಗೆ ಮೌನವಾಗಿ ಉತ್ತರಿಸಿದ್ದಾರೆ. ಇಷ್ಟೇ ಅಲ್ಲ ಇದೇ ಟೀಕೆಗೆ ಪ್ರದರ್ಶನದ ಮೂಲಕ ಉತ್ತರ ನೀಡುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ. ವಿರಾಟ್ ಕೊಹ್ಲಿ ಪೋಸ್ಟ್ ಹಾಕಿದ ಬೆನ್ನಲ್ಲೇ ಇದೀಗ ಪರ ವಿರೋಧಗಳು ಆರಂಭಗೊಂಡಿದೆ.
undefined
ಐಸಿಸಿ ಟ್ರೋಫಿ ಗೆಲುವು ಸುಲಭವಲ್ಲ, ಸುಲಭವಾಗಿ ಕಾಣುವಂತೆ ಮಾಡಿದ್ದ ಧೋನಿ; ಟೀಂ ಇಂಡಿಯಾಗೆ ಫ್ಯಾನ್ಸ್ ಪಾಠ!
ಭಾರತ ಕಳಪೆ ಪ್ರದರ್ಶನಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಳೆದ 10 ವರ್ಷಗಳಿಂದ ಭಾರತ ಐಸಿಸಿ ಟ್ರೋಫಿ ಗೆಲ್ಲಲು ವಿಫಲವಾಗಿದೆ. 8 ಬಾರಿ ನಾಕೌಟ್ ಹಂತ ಪ್ರವೇಶಿಸದರೂ ಟ್ರೋಫಿ ಗೆದ್ದಿಲ್ಲ. ಎಂಎಸ್ ಧೋನಿ 2013ರಲ್ಲಿ ಗೆದ್ದ ಚಾಂಪಿಯನ್ಸ್ ಟ್ರೋಫಿ ಕೊನೆ. ಬಳಿಕ ಟೀಂ ಇಂಡಿಯಾ ಐಸಿಸಿ ಟ್ರೋಫಿ ಕೈವಶ ಮಾಡಿಲ್ಲ. ಪ್ರತಿ ಭಾರಿ ನಿರಾಸೆ ಅನುಭವಿಸಿದ್ದೇ ಹೆಚ್ಚು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಕನಿಷ್ಠ ಹೋರಾಟ ನೀಡದೆ ಸೋಲೊಪ್ಪಿಕೊಂಡ ಭಾರತದ ವಿರುದ್ಧ ಟೀಕೆಗಳು ಹೆಚ್ಚಾಗುತ್ತಿದೆ.
ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ಗೆಲುವಿಗೆ 444 ರನ್ ಗುರಿ ನೀಡಲಾಗಿತ್ತು. ಮೊದಲ ಇನ್ನಿಂಗ್ಸ್‌ನಲ್ಲೇ ಪರದಾಡಿದ್ದ ಭಾರತ, ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತಷ್ಟು ಕಳಪೆಯಾಯಿತು. 4ನೇ ದಿನದಂತ್ಯಕ್ಕೆ 40 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 164 ರನ್ ಸಿಡಿಸಿದ್ದ ಭಾರತ ಕೊನೆ ದಿನ ಗೆಲ್ಲಲು ಇನ್ನೂ 280 ರನ್ ಗಳಿಸಬೇಕಿತ್ತು. ಆದರೆ ದಿಟ್ಟ ಹೋರಾಟ ಮೂಡಿ ಬರಲಿಲ್ಲ.
ಐಪಿಎಲ್ ಆರಂಭಕ್ಕೆ 10 ತಿಂಗಳು ಮಾತ್ರ, ಟೆಸ್ಟ್ ಫೈನಲ್ ಸೋತ ಬೆನ್ನಲ್ಲೇ ಅಭಿಮಾನಿಗಳ ಆಕ್ರೋಶ!
ಯಾವುದೇ ಪರಿಸ್ಥಿತಿಯಲ್ಲೂ ದಿಟ್ಟ ಹೋರಾಟ ನೀಡಬಲ್ಲ ಆಟಗಾರರೂ ತಂಡದಲ್ಲಿಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತಾಗಿದೆ. ಕಾರಣ ಮೊದಲ ಟೆಸ್ಟ್ ಟಾಂಪಿಯನ್‌ಶಿಫ್ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲೂ ಭಾರತ ಮುಗ್ಗರಿಸಿತ್ತು. ಅಂದು ಕೂಡ ಭಾರತ ಕಳಪೆ ಪ್ರದರ್ಶನ ನೀಡಿತ್ತು.
ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ ಬರೋಬ್ಬರಿ 469 ರನ್ ಕಲೆಹಾಕಿದ್ದರೆ, ಭಾರತ 296 ರನ್‌ಗೆ ಆಲೌಟಾಗಿ 173 ರನ್ಗಳ ಮುನ್ನಡೆಯನ್ನು ಆಸೀಸ್ಗೆ ಬಿಟ್ಟುಕೊಟ್ಟಿತ್ತು. ಬಳಿಕ ಆಸೀಸ್ 2ನೇ ಇನ್ನಿಂಗ್್ಸನಲ್ಲಿ 8 ವಿಕೆಟ್ಗೆ 270 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.