ವಿಶ್ವ ಟೆಸ್ಟ್‌ ಫೈನಲ್‌ ರೇಸ್‌ ಮತ್ತಷ್ಟು ರೋಚಕ: ಭಾರತ, ಆಸ್ಟ್ರೇಲಿಯಾ, ದ.ಆಫ್ರಿಕಾ ನಡುವೆ ತ್ರಿಕೋನ ಸ್ಪರ್ಧೆ!

Published : Dec 10, 2024, 12:21 PM IST
ವಿಶ್ವ ಟೆಸ್ಟ್‌ ಫೈನಲ್‌ ರೇಸ್‌ ಮತ್ತಷ್ಟು ರೋಚಕ: ಭಾರತ, ಆಸ್ಟ್ರೇಲಿಯಾ, ದ.ಆಫ್ರಿಕಾ ನಡುವೆ ತ್ರಿಕೋನ ಸ್ಪರ್ಧೆ!

ಸಾರಾಂಶ

ದಕ್ಷಿಣ ಆಫ್ರಿಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಎರಡನೇ ಮತ್ತು ಭಾರತ ಮೂರನೇ ಸ್ಥಾನದಲ್ಲಿದೆ. ಫೈನಲ್‌ಗೆ ಮೂರು ತಂಡಗಳು ಪ್ರಬಲ ದಾವೇದಾರರು. ಭಾರತಕ್ಕೆ ಮೂರು ಪಂದ್ಯಗಳು ಬಾಕಿ ಇವೆ. ಎರಡರಲ್ಲಿ ಗೆದ್ದರೆ ಫೈನಲ್ ಸಾಧ್ಯತೆ ಹೆಚ್ಚು. ಇತರ ತಂಡಗಳ ಫಲಿತಾಂಶಗಳು ಕೂಡ ಭಾರತದ ಭವಿಷ್ಯ ನಿರ್ಧರಿಸಲಿವೆ.

ದುಬೈ: 2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ರೇಸ್‌ ಮತ್ತಷ್ಟು ರೋಚಕತೆ ಹುಟ್ಟುಹಾಕಿದೆ. ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ ಟೆಸ್ಟ್‌ನಲ್ಲಿ ಭಾರತದ ಸೋಲು, ಶ್ರೀಲಂಕಾ ವಿರುದ್ಧ 2ನೇ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ಗೆಲುವು ಫೈನಲ್ ರೇಸ್‌ನಲ್ಲಿ ಸ್ಪಷ್ಟತೆ ನೀಡಿದರೂ, ಯಾವ ತಂಡ ಫೈನಲ್‌ಗೇರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗುವಂತೆ ಮಾಡಿದೆ.

ಆಸ್ಟ್ರೇಲಿಯಾ ವಿರುದ್ಧದ ಸೋಲನುಭವಿಸಿದ ಪರಿಣಾಮ, ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೆ ಕುಸಿದಿದೆ. ಪರ್ತ್‌ನಲ್ಲಿ ಗೆಲುವು ಸಾಧಿಸಿದ ಬಳಿಕ ಭಾರತದ ಗೆಲುವಿನ ಪ್ರತಿಶತ ಶೇ.61.11ಕ್ಕೆ ಏರಿಕೆಯಾಗಿತ್ತು. ಅಡಿಲೇಡ್‌ ಸೋಲಿನಿಂದಾಗಿ ಅದು ಶೇ.57.29ಕ್ಕೆ ಇಳಿದಿದೆ. ಸೋಮವಾರ ಶ್ರೀಲಂಕಾ ವಿರುದ್ಧ ಗೆಲುವಿನ ಬಳಿಕ ದ.ಆಫ್ರಿಕಾ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ತಂಡ ಸದ್ಯ ಶೇ.63.33 ಗೆಲುವಿನ ಪ್ರತಿಶತ ಹೊಂದಿದ್ದರೆ, ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ(ಶೇಕಡಾ 60.71) 2ನೇ ಸ್ಥಾನಕ್ಕೆ ಕುಸಿದಿದೆ.

ಸದ್ಯ ಈ ಮೂರು ತಂಡಗಳೇ ಫೈನಲ್‌ಗೇರುವ ಫೇವರಿಟ್‌. ಶ್ರೀಲಂಕಾ ಶೇ.45.45 ಗೆಲುವಿನ ಪ್ರತಿಶತದೊಂದಿಗೆ 4ನೇ ಸ್ಥಾನದಲ್ಲಿದ್ದು, ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಇನ್ನು, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಪಾಕಿಸ್ತಾನ, ಬಾಂಗ್ಲಾದೇಶ, ವೆಸ್ಟ್‌ಇಂಡೀಸ್‌ ತಂಡಗಳು ಫೈನಲ್‌ ರೇಸ್‌ನಿಂದ ಈಗಾಗಲೇ ಹೊರಬಿದ್ದಿವೆ.

'ಆದಷ್ಟು ಬೇಗ ಡಾಕ್ಟರ್ ಆಗ್ತೇನೆ': ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ಐಪಿಎಲ್‌ನ ಸ್ಟಾರ್ ಕ್ರಿಕೆಟರ್!

7 ಪಂದ್ಯಗಳು ಬಾಕಿ: ಈ ಬಾರಿ ಚಾಂಪಿಯನ್‌ಶಿಪ್‌ನಲ್ಲಿ ಇನ್ನು ಹಲವು ಪಂದ್ಯಗಳು ಬಾಕಿಯಿದ್ದರೂ, ಫೈನಲ್‌ ರೇಸ್‌ಗೆ ಮಹತ್ವ ತಂದುಕೊಡಲಿರುವ ಪಂದ್ಯಗಳು ಕೇವಲ 7 ಮಾತ್ರ. ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ 3, ದ.ಆಫ್ರಿಕಾ ಹಾಗೂ ಪಾಕಿಸ್ತಾನ ನಡುವೆ 2, ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವೆ 2 ಪಂದ್ಯಗಳು ನಡೆಯಬೇಕಿವೆ. ಈ ಪಂದ್ಯಗಳಲ್ಲೇ ಫೈನಲ್‌ಗೇರುವ ತಂಡ ಯಾವುದೆಂದು ನಿರ್ಧಾರವಾಗಲಿದೆ.

ಅಡಿಲೇಡ್ ಟೆಸ್ಟ್ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಮತ್ತೊಂದು ಬಿಗ್ ಶಾಕ್!

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿ

ತಂಡ ಪಂದ್ಯ ಗೆಲುವು ಸೋಲು ಡ್ರಾ ಅಂಕ ಶೇಕಡಾ

ದ.ಆಫ್ರಿಕಾ 10 6 3 1 76 63.33

ಆಸ್ಟ್ರೇಲಿಯಾ 14 9 4 1 102 60.71

ಭಾರತ 16 9 6 1 110 57.29

ಶ್ರೀಲಂಕಾ 11 5 6 0 60 45.45

ಇಂಗ್ಲೆಂಡ್‌ 21 11 9 1 114 45.24

ನ್ಯೂಜಿಲೆಂಡ್‌ 13 6 7 0 69 44.23

ಪಾಕಿಸ್ತಾನ 10 4 6 0 40 33.33

ಬಾಂಗ್ಲಾದೇಶ 12 4 8 0 45 31.25

ವೆಸ್ಟ್‌ಇಂಡೀಸ್‌ 11 2 7 2 32 24.24

3 ತಂಡಗಳ ಫೈನಲ್ ಲೆಕ್ಕಾಚಾರ ಹೇಗೆ?

1. ದ.ಆಫ್ರಿಕಾಕ್ಕೆ ಇನ್ನು ಪಾಕಿಸ್ತಾನ ವಿರುದ್ಧ ತವರಿನಲ್ಲಿ 2 ಪಂದ್ಯ ಬಾಕಿಯಿದೆ. ಈ ಪೈಕಿ 1ರಲ್ಲಿ ಗೆದ್ದರೂ ದ.ಆಫ್ರಿಕಾ ಫೈನಲ್‌ಗೇರಲಿದೆ.

2. ಆಸ್ಟ್ರೇಲಿಯಾ ತಂಡ ಭಾರತ ವಿರುದ್ಧ 3, ಶ್ರೀಲಂಕಾ ವಿರುದ್ಧ ಸೇರಿ ಒಟ್ಟು 5 ಪಂದ್ಯವಾಡಬೇಕಿದೆ. ಈ ಪೈಕಿ 3ರಲ್ಲಿ ಗೆದ್ದರೆ ಮಾತ್ರ ತಂಡ ಫೈನಲ್‌ಗೆ.

3. ಭಾರತಕ್ಕಿನ್ನು 3 ಪಂದ್ಯ ಬಾಕಿ. 2ರಲ್ಲಿ ಗೆದ್ದು, 1 ಡ್ರಾ ಮಾಡಿಕೊಂಡರೂ ಫೈನಲ್‌ಗೆ. ಒಂದು ಪಂದ್ಯದಲ್ಲಿ ಸೋತರೂ ಇತರ ತಂಡಗಳ ಫಲಿತಾಂಶದ ಮೇಲೆ ಭಾರತದ ಫೈನಲ್‌ ಭವಿಷ್ಯ ನಿರ್ಧಾರವಾಗಲಿದೆ.

ಹೇಗಿದೆ ಭಾರತದ ಫೈನಲ್‌ ಹಾದಿ? 

(3 ಪಂದ್ಯ ಬಾಕಿ)

1. ಆಸ್ಟ್ರೇಲಿಯಾ ವಿರುದ್ಧ ಉಳಿದ 3 ಪಂದ್ಯಗಳಲ್ಲೂ ಗೆದ್ದರೆ ಭಾರತ ಫೈನಲ್‌ಗೆ ಖಚಿತ.

2. 3ರ ಪೈಕಿ 2 ಗೆದ್ದು, 1 ಡ್ರಾ ಮಾಡಿಕೊಂಡರೂ ಭಾರತಕ್ಕಿದೆ ಫೈನಲ್‌ ಅವಕಾಶ.

3. ಭಾರತ 2ರಲ್ಲಿ ಗೆದ್ದು 1ರಲ್ಲಿ ಸೋತರೆ, ಆಗ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 2 ಪಂದ್ಯಗಳ ಪೈಕಿ 1ರಲ್ಲಿ ಡ್ರಾ ಮಾಡಿಕೊಳ್ಳಬೇಕು. ಹೀಗಾದರೆ ಭಾರತ ಫೈನಲ್‌ಗೆ

4. ಭಾರತ 1ರಲ್ಲಿ ಗೆದ್ದು, 1 ಸೋಲು, 1 ಡ್ರಾ ಮಾಡಿಕೊಂಡರೆ, ಆಗ ಶ್ರೀಲಂಕಾ ತಂಡ ಆಸ್ಟ್ರೇಲಿಯಾವನ್ನು 2-0 ಅಥವಾ 1-0 ಅಂತರದಲ್ಲಿ ಸೋಲಿಸಬೇಕು. ಹೀಗೂ ಭಾರತಕ್ಕೆ ಫೈನಲ್‌ಗೇರಬಹುದು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಆ್ಯಶಸ್ ಸರಣಿ: ಸತತ ಎರಡು ಪಂದ್ಯ ಗೆದ್ದು ಬೀಗಿದ್ದ ಆಸೀಸ್‌ಗೆ ಆಘಾತ, ಸ್ಟಾರ್ ಬೌಲರ್ ಹೊರಕ್ಕೆ!
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!