'ಆದಷ್ಟು ಬೇಗ ಡಾಕ್ಟರ್ ಆಗ್ತೇನೆ': ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ಐಪಿಎಲ್‌ನ ಸ್ಟಾರ್ ಕ್ರಿಕೆಟರ್!

By Naveen Kodase  |  First Published Dec 9, 2024, 3:33 PM IST

ಕೆಕೆಆರ್ ತಂಡದ ಸ್ಟಾರ್ ಬ್ಯಾಟರ್ ವೆಂಕಟೇಶ್ ಅಯ್ಯರ್ ಫೈನಾನ್ಸ್‌ನಲ್ಲಿ ಪಿಎಚ್‌ಡಿ ಪದವಿ ಪಡೆಯುತ್ತಿದ್ದಾರೆ. ಶಿಕ್ಷಣದ ಮಹತ್ವ ಸಾರಿದ ವೆಂಕಿ, ಮುಂದಿನ ಬಾರಿ ಸಂದರ್ಶನ ಮಾಡುವಾಗ ಡಾಕ್ಟರ್ ವೆಂಕಟೇಶ್ ಎಂದು ಕರೆಯಿರಿ ಎಂದಿದ್ದಾರೆ.


ನವದೆಹಲಿ: ಕಳೆದ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಕೆಕೆಆರ್ ತಂಡವು ಚಾಂಪಿಯನ್ ಆಗುವಲ್ಲಿ ಎಡಗೈ ಸ್ಪೋಟಕ ಬ್ಯಾಟರ್ ವೆಂಕಟೇಶ್ ಅಯ್ಯರ್ ಮಹತ್ವದ ಪಾತ್ರ ವಹಿಸಿದ್ದರು. ಇದೀಗ ವೆಂಕಟೇಶ್ ಅಯ್ಯರ್ ಇನ್ನು ಕೆಲವೇ ವರ್ಷಗಳಲ್ಲಿ ಡಾಕ್ಟರ್ ವೆಂಕಟೇಶ್ ಅಯ್ಯರ್ ಎಂದು ಕರೆಸಿಕೊಳ್ಳಲಿದ್ದಾರೆ. 

ಇತ್ತೀಚೆಗಷ್ಟೇ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ 2025ನೇ ಸಾಲಿನ ಐಪಿಎಲ್ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಬರೋಬ್ಬರಿ 23.75 ಕೋಟಿ ರುಪಾಯಿ ನೀಡಿ ವೆಂಕಟೇಶ್ ಅಯ್ಯರ್ ಅವರನ್ನು ಮತ್ತೊಮ್ಮೆ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಇದರೊಂದಿಗೆ ವೆಂಕಿ ಅಯ್ಯರ್, ಐಪಿಎಲ್ ಹರಾಜಿನಲ್ಲಿ 4ನೇ ದುಬಾರಿ ಆಟಗಾರನಾಗಿ ಹೊರಹೊಮ್ಮಿದ್ದರು. ಇದೀಗ 29 ವರ್ಷದ ವೆಂಕಟೇಶ್ ಅಯ್ಯರ್, ಕ್ರಿಕೆಟ್‌ನ ಜತೆಜತೆಗೆ ಶಿಕ್ಷಣದ ಮಹತ್ವವನ್ನು ಸಾರಿ ಹೇಳಿದ್ದಾರೆ.

Tap to resize

Latest Videos

ಸತತವಾಗಿ ಅತಿಹೆಚ್ಚು ಟೆಸ್ಟ್ ಸೋಲು ಕಂಡ ಭಾರತದ ಕ್ಯಾಪ್ಟನ್ ಯಾರು? ಧೋನಿ, ಕೊಹ್ಲಿ ಸಾಲಿಗೆ ಸೇರಿದ ರೋಹಿತ್ ಶರ್ಮಾ!

ಫೈನಾನ್ಸ್‌ನಲ್ಲಿ PhD ಮಾಡುತ್ತಿರುವ ವೆಂಕಟೇಶ್ ಅಯ್ಯರ್:

undefined

ಇಂಡಿಯನ್ ಎಕ್ಸ್‌ಪ್ರೆಸ್ ಜತೆಗಿನ ಮಾತುಕತೆ ವೇಳೆ ವೆಂಕಟೇಶ್ ಅಯ್ಯರ್, 'ಫೈನಾನ್ಸ್ ವಿಭಾಗದಲ್ಲಿ ನಾನು ಪಿಎಚ್‌ಡಿ ಮಾಡುತ್ತಿದ್ದೇನೆ. ಮುಂದಿನ ಬಾರಿ ನೀವು ನನ್ನನ್ನು ಸಂದರ್ಶನ ಮಾಡುವಾಗ ಡಾಕ್ಟರ್ ವೆಂಕಟೇಶ್ ಎಂದು ಕರೆಯುತ್ತೀರ. ಶಿಕ್ಷಣ ಎನ್ನುವುದು ಯಾವಾಗಲೂ ನಿಮ್ಮ ಜತೆಯೇ ಇರುತ್ತದೆ. ಕ್ರಿಕೆಟರ್ ಆದವರು 60 ವರ್ಷಗಳ ವರೆಗೆ ಆಟವಾಡಲು ಸಾಧ್ಯವಿಲ್ಲ. ಹೆಚ್ಚಿನ ಶಿಕ್ಷಣ ಪಡೆದುಕೊಳ್ಳುವುದರಿಂದಾಗಿ ನನಗೆ ಮೈದಾನದಲ್ಲಿಯೂ ಉತ್ತಮ ತೀರ್ಮಾನ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ' ಎಂದು ವೆಂಕಿ ಅಯ್ಯರ್ ಹೇಳಿದ್ದಾರೆ.

ಅಡಿಲೇಡ್ ಟೆಸ್ಟ್ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಮತ್ತೊಂದು ಬಿಗ್ ಶಾಕ್!

ಕೆಕೆಆರ್ ಕ್ಯಾಪ್ಟನ್ ರೇಸ್‌ನಲ್ಲಿದ್ದಾರೆ ವೆಂಕಿ:

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕೆಕೆಆರ್ ತಂಡದ ದುಬಾರಿ ಆಟಗಾರನಾಗಿ ವೆಂಕಟೇಶ್ ಅಯ್ಯರ್ ಹೊರಹೊಮ್ಮಿದ್ದಾರೆ. ಇದೀಗ ಕೆಕೆಆರ್ ತಂಡವನ್ನು ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಾಯಕ ಶ್ರೇಯಸ್ ಅಯ್ಯರ್, ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ. ಹೀಗಾಗಿ ಕೆಕೆಆರ್ ತಂಡದ ನಾಯಕ ಸ್ಥಾನಕ್ಕೆ ಅಜಿಂಕ್ಯ ರಹಾನೆ ಹಾಗೂ ವೆಂಕಟೇಶ್ ಅಯ್ಯರ್ ನಡುವೆ ಪೈಪೋಟಿ ಏರ್ಪಟ್ಟಿದೆ. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ವೆಂಕಿ ಅಯ್ಯರ್ ಕೆಕೆಆರ್ ತಂಡದ ನಾಯಕರಾದರೂ ಅಚ್ಚರಿಯಿಲ್ಲ.
 

click me!