WPL Final 2024 ಆರ್‌ಸಿಬಿ ಗೂಗ್ಲಿಗೆ ಡೆಲ್ಲಿ 113 ರನ್‌ಗೆ ಆಲೌಟ್, ಬೆಂಗಳೂರು ನಾರಿಯರಿಗೆ ಸುಲಭ ಟಾರ್ಗೆಟ್!

By Suvarna NewsFirst Published Mar 17, 2024, 9:03 PM IST
Highlights

ಆರ್‌ಸಿಬಿ ಮುಡಿಗೆ ಮೊದಲ ಟ್ರೋಫಿ ಗರಿ ಸೇರಿಕೊಳ್ಳುತ್ತಾ? ಫೈನಲ್ ಪಂದ್ಯದಲ್ಲಿ ಮಹಿಳಾ ಆರ್‌ಸಿಬಿ ತಂಡದ ಪ್ರದರ್ಶನ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ. ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು 113 ರನ್‌ಗೆ ಆಲೌಟ್ ಮಾಡಿರುವ ಆರ್‌ಸಿಬಿ 114 ರನ್ ಟಾರ್ಗೆಟ್ ಪಡೆದಿದೆ.
 

ದೆಹಲಿ(ಮಾ.17) ಮಹಿಳಾ ಐಪಿಎಲ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ ಬೆಂಗಳೂರು ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿದೆ. ಅಬ್ಬರದ ಆರಂಭದೊಂದಿಗೆ ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಶಾಕ್ ಮೇಲೆ ಶಾಕ್ ನೀಡಿತು. 64 ರನ್ ವರೆಗೆ ಒಂದು ವಿಕೆಟ್ ಇಲ್ಲದೆ ಅಬ್ಬರಿಸಿದ ಡೆಲ್ಲಿ ಕ್ಯಾಪಿಟಲ್ಸ್ ಬಳಿಕ 27 ರನ್ ಗಳಿಸುವಷ್ಟರಲ್ಲೇ ಪ್ರಮುಖ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕ ಸಿಲಿಕಿತು. ಸೊಫಿ ಮೊಲಿನೆಕ್ಸ್, ಶ್ರೇಯಾಂಕ ಪಾಟೀಲ್ ಹಾಗೂ ಆಶಾ ಶೋಭನಾ ದಾಳಿಗೆ ಡೆಲ್ಲಿ ತತ್ತರಿಸಿತು. ಪರಿಣಾಮ 18.3 ಓವರ್‌ಗಳಲ್ಲಿ 113 ರನ್‌ಗೆ ಸಿಡಿಸಿ ಆಲೌಟ್ ಆಯಿತು. ಈ ಮೂಲಕ ಮಹಿಳಾ ಆರ್‌ಸಿಬಿ ತಂಡ 114 ರನ್ ಟಾರ್ಗೆಟ್ ಪಡೆದಿದೆ. 

ಟಾಸ್ ಸೋತು ಆರ್‌ಸಿಬಿ ಹೋರಾಟ ಮಾತ್ರ ಬಿಡಲಿಲ್ಲ. ಡೆಲ್ಲಿ ತಂಡದ ಅಬ್ಬರದ ಬ್ಯಾಟಿಂಗ್ ಮುಂದೆ ದೃತಿಗೆಡಲಿಲ್ಲ. ಕಾರಣ ಡೆಲ್ಲಿ ಆರಂಭಿಕ ಬ್ಯಾಟರ್‌ಗಳಿಂದ ಹಾಫ್ ಸೆಂಚುರಿ ಜೊತೆಯಾಟ ಬಂದಿತ್ತು. ಶೆಫಾಲಿ ವರ್ಮಾ ಹಾಗೂ ನಾಯಕಿ ಮೆಗ್ ಲ್ಯಾನಿಂಗ್ ಸ್ಫೋಟಕ ಬ್ಯಾಟಿಂಗ್ ಬೃಹತ್ ಮೊತ್ತದ ಸೂಚನೆ ನೀಡಿತ್ತು. ಆದರೆ ಸೋಫಿ ಮೊಲಿನೆಕ್ಸ್ ಅದ್ಭುತ ದಾಳಿ ಈ ಜೋಡಿಯನ್ನು ಬೇರ್ಪಡಿಸಿತು. ವರ್ಮಾ 44 ರನ್ ಸಿಡಿಸಿ ಔಟಾದರು.

ಇದರ ಬೆನ್ನಲ್ಲೇ ಮೆಗ್ ಲ್ಯಾನಿಂಗ್ 23 ರನ್ ಸಿಡಿಸಿ ಔಟಾದರು. 64 ರನ್‌ಗೆ 2 ಪ್ರಮುಖ ವಿಕೆಟ್ ಕಳೆದುಕೊಂಡ ಡೆಲ್ಲಿಗೆ ಸಂಕಷ್ಟ ಹೆಚ್ಚಾಯಿತು. ಇತ್ತ ರನ್ ಬರಲಿಲ್ಲ, ವಿಕೆಟ್ ಕೂಡ ಉಳಿಯಲಿಲ್ಲ. ಅತ್ಯುತ್ತಮ ದಾಳಿ ಸಂಘಟಿಸಿದ ಆರ್‌ಸಿಬಿ ಒಂದರ ಮೇಲೊಂದರಂತೆ ವಿಕೆಟ್ ಕಬಳಿಸಿತು. ಜೇಮಿಯಾ ರೋಡ್ರಿಗಸ್ ಶೂನ್ಯ, ಆ್ಯಲೈಸ್ ಕ್ಯಾಪ್ಸಿ ಡಕೌಟ್, ಮರಿಜ್ಯಾನೆ ಕ್ಯಾಪ 8 ರನ್, ಜೆಸ್ ಜೊನಾಸೆನ್ 3 ರನ್ ಸಿಡಿಸಿ ಔಟಾದರು. ಮಿನ್ನು ಮಣಿ 5 ರನ್ ಸಿಡಿಸಿ ನಿರ್ಗಮಿಸಿದರು.

ರಾಧಾ ಯಾದವ್ ಸತತ 2 ಬೌಂಡರಿ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದ್ದರು.  ಆದರೆ ರನ್ ಕದಿಯಲು ಹೋಗಿ ರನೌಟ್‌ಗೆ ಬಲಿಯಾದರು. 10 ರನ್ ಸಿಡಿಸಿ ಡೆಲ್ಲಿಗೆ ಆಸರೆಯಾಗಿದ್ದ ಅರುಂಧತಿ ರೆಡ್ಡಿ ವಿಕೆಟನ್ನು ಕನ್ನಡತಿ ಶ್ರೇಯಾಂಕ ಪಾಟೀಲ್ ಸ್ಪಿನ್ ಮೋಡಿ ಮೂಲಕ ಕಬಳಿಸಿದರು.ತಾನಿಯಾ ಭಾಟಿಯಾ ಡಕೌಟ್ ಆಗದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 18.3 ಓವರ್‌ಗಳಲ್ಲಿ 113 ರನ್‌ಗೆ ಆಲೌಟ್ ಆಯಿತು. ಆರ್‌ಸಿಬೆಗೆ 114 ರನ್ ಟಾರ್ಗೆಟ್ ನೀಡಲಾಗಿದೆ. ಶ್ರೇಯಾಂಕಾ ಪಾಟೀಲ್ 4 ವಿಕೆಟ್ ಕಬಳಿಸಿದರೆ, ಸೋಫಿಯಾ 3, ಆಶಾ ಶೋಭನಾ 2 ವಿಕೆಟ್ ಕಬಳಿಸಿದರು. 
 

click me!