WPL Final ಮಹಿಳಾ ಐಪಿಎಲ್ ಫೈನಲ್ ಪಂದ್ಯಕ್ಕೆ ಆರ್‌ಸಿಬಿಯಲ್ಲಿ 1 ಬದಲಾವಣೆ, ಟಾಸ್ ಡೆಲ್ಲಿ ಪಾಲು!

By Suvarna NewsFirst Published Mar 17, 2024, 7:18 PM IST
Highlights

ದೆಹಲಿಯಲ್ಲಿ ನಡೆಯುತ್ತಿರುವ ಮಹಿಳಾ ಐಪಿಎಲ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದುಕೊಂಡಿದೆ. ಇತ್ತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿರುವ ಆರ್‌ಸಿಬಿಯಲ್ಲಿ ಒಂದು ಮಹತ್ವದ ಬದಲಾವಣೆ ಮಾಡಲಾಗಿದೆ.
 

ದೆಹಲಿ(ಮಾ.17) ಮಹಿಳಾ ಐಪಿಎಲ್ ಟೂರ್ನಿ ಫೈನಲ್ ಪಂದ್ಯ ಆರಂಭಗೊಂಡಿದೆ. ಟಾಸ್ ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ದಿಶಾ ಕಾರಟ್ ಬದಲು ಮೆಘನಾ ತಂಡ ಸೇರಿಕೊಂಡಿದ್ದಾರೆ.

ಆರ್‌ಸಿಬಿ ಪ್ಲೇಯಿಂಗ್ 11
ಸ್ಮೃತಿ ಮಂಧನಾ(ನಾಯಕಿ), ಸೋಫಿ ಡಿವೈನ್, ಶಬ್ಬಿನೇನಿ ಮೇಘನಾ, ಎಲ್ಲಿಸೆ ಪೆರಿ, ರಿಚಾ ಘೋಷ್, ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವಾರೆಮ್, ಡಿಶಾ ಕಾಸತ್, ಶ್ರೇಯಾಂಕಾ ಪಾಟೀಲ್, ಅಶಾ ಶೋಭನಾ, ರೇಣುಕಾ ಠಾಕೂರ್ ಸಿಂಗ್

WPL 2024: ಮಹಿಳಾ ಐಪಿಎಲ್ ಫೈನಲ್‌ಗೂ ಮುನ್ನ ಈ ಮಾಹಿತಿ ನಿಮಗೆ ತಿಳಿದಿರಲಿ

ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ 11
ಮೆಗ್ ಲ್ಯಾನಿಂಗ್(ನಾಯಕಿ), ಶಫಾಲಿ ವರ್ಮಾ, ಆ್ಯಲೈಸ್ ಕ್ಯಾಪ್ಸಿ, ಜೇಮಿಯಾ ರೋಡ್ರಿಗ್ರೆಸ್, ಮರಿಜಾನ್ಯೆ ಕ್ಯಾಪ್, ಜೆಸ್ ಜೋನಸೆನ್, ರಾಧಾ ಯಾದವ್, ಅರುಂಧತಿ ರೆಡ್ಡಿ, ತಾನಿಯಾ ಭಾಟಿಯಾ, ಶಿಕಾ ಪಾಂಡೆ, ಮುನ್ನು ಮಣಿ 

ಕಳೆದ ವರ್ಷದ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿಯನ್ನು ಮಣಿಸಿ ಮುಂಬೈ ಟ್ರೋಫಿ ಗೆದ್ದಿತ್ತು. ಈ ಬಾರಿ ಮುಂಬೈ ತಂಡವನ್ನು ಮಣಿಸಿತ್ತು. ಎಲಿಮಿನೇಟರ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ಆರ್‌ಸಿಬಿಗೆ 5 ರನ್‌ ರೋಚಕ ಗೆಲುವು ದಾಖಲಿಸಿತ್ತು. ಇತ್ತ  ಡೆಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿ ಲೀಗ್‌ ಹಂತದಿಂದ ನೇರವಾಗಿ ಫೈನಲ್‌ಗೇರಿದ್ದು, ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದೆ.

ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪುರುಷರ ತಂಡ ಟ್ರೋಫಿ ಗೆದ್ದಿಲ್ಲ. ಇದೀಗ ಮಹಿಳಾ ತಂಡ ಫೈನಲ್ ಪ್ರವೇಶಿಸಿದ್ದು, ಟ್ರೋಫಿ ಕುತೂಹಲ ಹೆಚ್ಚಾಗಿದೆ. ಆರ್‌ಸಿಬಿ ಮುಡಿಗೆ ಮಹಿಳೆಯರು ಮೊದಲ ಟ್ರೋಫಿ ಗರಿ ನೀಡುತ್ತಾರಾ ಅನ್ನೋ ಕುತೂಹಲ ಮನೆ ಮಾಡಿದೆ. ಆರ್‌ಸಿಬಿ ಅಭಿಮಾನಿಗಳು ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. 

ಅಂದು IPLನಲ್ಲಿ ಡಿವಿಲಿಯರ್ಸ್ ಇಂದು WPLನಲ್ಲಿ ಪೆರ್ರಿ..! ಕೊನೆಗೂ ಕನಸು ನನಸಾಗುತ್ತಾ?

ಸೃತಿ ಮಂಧನಾ ನೇತೃತ್ವದ ಮಹಿಳಾ ಆರ್‌ಸಿಬಿ ತಂಡದಲ್ಲಿ ನಾಯಕಿ ಮಂದನಾ ಹಾಗೂ ಎಲ್ಲಿಸ್ ಪೆರಿ ಅದ್ಭುತ ಆಟ ತಂಡದ ಯಶಸ್ಸಿಗೆ ಕಾರಣವಾಗಿದೆ.ಇದರ ಜೊತೆಗೆ ಕನ್ನಡತಿ ಶ್ರೇಯಾಂಕ ಪಾಟೀಲ್ ಸ್ಪಿನ್ ಮೋಡಿ ಕೂಡ ವರವಾಗಿದೆ. ಹೀಗಾಗಿ ಇಂದು ಡೆಲ್ಲಿ ವಿರುದ್ದ ಆರ್‌ಸಿಬಿ ತನ್ನ ಖದರ್ ತೋರಿಸಿದರೆ ಟ್ರೋಫಿ ಗೆಲ್ಲಲಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ.

click me!